ಕೊಠಡಿಯನ್ನು ತಂಪಾಗಿಡುವ ಬಗ್ಗೆ ನಡೆಸುತ್ತಿರುವ ಸಂಶೋಧನೆಯ ಭಾಗವೆಂದು ಪ್ರಾಂಶುಪಾಲರ ಅಭಿಪ್ರಾಯ
ನವದೆಹಲಿ – ದೆಹಲಿ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ರಾಣಿ ಲಕ್ಷ್ಮೀಬಾಯಿ ಕಾಲೇಜಿನ ಪ್ರಾಂಶುಪಾಲೆ ಡಾ. ಪ್ರತ್ಯೂಷಾ ವತ್ಸಲಾ ಅವರು ಕಾಲೇಜಿನ ತರಗತಿಯ ಗೋಡೆಯನ್ನು ಸಗಣಿಯಿಂದ ಸಾರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಡಾ. ವತ್ಸಲಾ ಅವರ ಪ್ರಕಾರ, ಇದು ಸಂಶೋಧನಾ ಯೋಜನೆಯ ಒಂದು ಭಾಗವಾಗಿದೆ. ಅವರು ಸ್ವತಃ ಈ ವಿಡಿಯೋವನ್ನು ಕಾಲೇಜಿನ ಪ್ರಾಧ್ಯಾಪಕರಿಗೆ ಕಳುಹಿಸಿದ್ದಾರೆ. ತರಗತಿಯನ್ನು ತಂಪಾಗಿಡಲು ಈ ಸ್ವದೇಶಿ ವಿಧಾನವನ್ನು ಅಳವಡಿಸಿಕೊಂಡಿರುವುದಾಗಿ ಅವರು ವಿಡಿಯೋದಲ್ಲಿ ತಿಳಿಸಿದ್ದಾರೆ.
೧. ಡಾ. ವತ್ಸಲಾ ಅವರ ಪ್ರಕಾರ, ಈ ಯೋಜನೆಯು ಕಾಲೇಜಿನ ಪ್ರಾಧ್ಯಾಪಕರೊಬ್ಬರ ಮೇಲ್ವಿಚಾರಣೆಯಲ್ಲಿ ನಡೆಯುತ್ತಿದೆ. ಸಂಶೋಧನೆಯು ಪ್ರಸ್ತುತ ಒಂದು ನಿರ್ದಿಷ್ಟ ಹಂತದಲ್ಲಿದೆ ಮತ್ತು ಒಂದು ವಾರದ ನಂತರ ಸಂಪೂರ್ಣ ಮಾಹಿತಿ ಲಭ್ಯವಾದ ನಂತರ ಈ ಸಂಶೋಧನೆಯನ್ನು ಎಲ್ಲರಿಗೂ ತಿಳಿಸಲಾಗುವುದು.
೨. ಸಗಣಿಯಲ್ಲಿ ಅತ್ಯುತ್ತಮ ‘ಇನ್ಸುಲೇಟರ್’ (ಶಾಖ ಅಥವಾ ವಿದ್ಯುತ್ ಪ್ರವಾಹವನ್ನು ಪ್ರತಿರೋಧಿಸುವ ನಿರ್ದಿಷ್ಟ ವಸ್ತು) ಗುಣಗಳಿವೆ. ಸಗಣಿ ಮತ್ತು ಮಣ್ಣಿನ ಮಿಶ್ರಣವನ್ನು ನೆಲಕ್ಕೆ ಲೇಪಿಸುವುದರಿಂದ ಮನೆಯ ತಾಪಮಾನವು ಸ್ಥಿರವಾಗಿರುತ್ತದೆ. ಬೆಚ್ಚಗಿನ ವಾತಾವರಣದಲ್ಲಿ ಅದು ಮನೆಯ ತಾಪಮಾನವನ್ನು ತಂಪಾಗಿಡಲು ಸಹಾಯ ಮಾಡುತ್ತದೆ, ಹಾಗೂ ತಂಪಾದ ಪ್ರದೇಶಗಳಲ್ಲಿ ಅದು ಶಾಖವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
೩. ಸನಾತನ ಸಂಪ್ರದಾಯದಲ್ಲಿ ಹಸುವಿನ ಸಗಣಿಯನ್ನು ಪವಿತ್ರತೆಯ ಸಂಕೇತವೆಂದು ಪರಿಗಣಿಸಲಾಗಿದೆ. ಯಾವುದೇ ಧಾರ್ಮಿಕ ಕಾರ್ಯಕ್ರಮದ ಮೊದಲು ಮನೆಯ ಮುಂಭಾಗದ ಅಂಗಳವನ್ನು ಸಗಣಿಯಿಂದ ಸಾರಿಸಲಾಗುತ್ತದೆ. ಸಗಣಿಯಿಂದ ನೊಣ ಮತ್ತು ಸೊಳ್ಳೆಗಳು ಮನೆಯೊಳಗೆ ಮತ್ತು ಸುತ್ತಮುತ್ತ ತಿರುಗಾಡುವುದಿಲ್ಲ. ಕೀಟಗಳಿಂದ ರಕ್ಷಿಸಲು ಸಗಣಿ ಬಹಳ ಪರಿಣಾಮಕಾರಿಯಾಗಿದೆ.
ಸಂಪಾದಕೀಯ ನಿಲುವು
|