‘ಮಣಿಪುರ ಹೊತ್ತಿ ಉರಿಯುತ್ತಿದ್ದರು ಪ್ರಧಾನಮಂತ್ರಿ ಇವರು ಹಾಸ್ಯ ಮಾಡುತ್ತಾ ಮಾಡಿದ ಭಾಷಣ ಅಯೋಗ್ಯವಂತೆ ! – ರಾಹುಲ್ ಗಾಂಧಿ

ಕಾಂಗ್ರೆಸ್ಸಿನ ರಾಹುಲ್ ಗಾಂಧಿ ಇವರ ಸುದ್ಧಿಗೋಷ್ಠಿ !

ನವ ದೆಹಲಿ – ಮಣಿಪುರ ಹೊತ್ತಿ ಉರಿಯುವಾಗ ಪ್ರಧಾನಮಂತ್ರಿಯವರು ಲೋಕಸಭೆಯಲ್ಲಿ ಹಾಸ್ಯ ಮಾಡುತ್ತಾ ಭಾಷಣ ಮಾಡುವುದು ಅಯೋಗ್ಯವಾಗಿದೆ. ಇದು ಪ್ರಧಾನ ಮಂತ್ರಿಯವರಿಗೆ ಶೋಭಿಸುವುದಿಲ್ಲ. ನಾನು ೧೯ ವರ್ಷಗಳಿಂದ ರಾಜಕಾರಣದಲ್ಲಿ ಇದ್ದೇನೆ. ದೇಶದ ಪ್ರತಿ ರಾಜಕ್ಕೆ ಹೋಗಿದ್ದೇನೆ; ಆದರೆ ಮಣಿಪುರ ರಾಜ್ಯದ ಪರಿಸ್ಥಿತಿ ಕಠಿಣವಾಗಿದೆ. ರಾಜ್ಯ ಕುಕಿ ಮತ್ತು ಮೈತೆಯಿ ಇವರಲ್ಲಿ ವಿಭಜಿಸಿದೆ. ಮಣಿಪುರದಲ್ಲಿ ಹಿಂಸಾಚಾರ ನಿಯಂತ್ರಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ಬಳಿ ವಿವಿಧ ಪರ್ಯಾಯ ಉಪಲಬ್ಧವಿದ್ದರೂ ಅವರು ಹಿಂಸಾಚಾರ ನಿಲ್ಲಿಸುವುದಕ್ಕೆ ಏನನ್ನು ಮಾಡುತ್ತಿಲ್ಲ. ಅವರು ಮಣಿಪುರಕ್ಕೆ ಹೋಗಲಿಲ್ಲ. ಇದರ ಹಿಂದಿನ ಕಾರಣ ಸ್ಪಷ್ಟವಾಗಿದೆ. ಭಾರತೀಯ ಸೈನ್ಯ ಮಣಿಪುರದಲ್ಲಿ ಪ್ರವೇಶಿಸಬೇಕು ಎಂದು ನಾನು ಹೇಳುತ್ತಿಲ್ಲ. ನನಗೆ ಇಷ್ಟೇ ಹೇಳುವುದಿದೆ ಏನೆಂದರೆ ಸೈನ್ಯ ರಾಜ್ಯದಲ್ಲಿ ಹೋದರೆ, ಎರಡು ದಿನದಲ್ಲಿ ಹಿಂಸಾಚಾರ ಹಿಡಿತಕ್ಕೆ ಬರುವುದು, ಎಂದು ಕಾಂಗ್ರೆಸ್ಸಿನ ನಾಯಕ ರಾಹುಲ್ ಗಾಂಧಿ ಇವರು ಹೇಳಿಕೆ ನೀಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಲೋಕಸಭೆಯಲ್ಲಿ ಅವಿಶ್ವಾಸ ಪ್ರಸ್ತಾವಕ್ಕೆ ನೀಡಿರುವ ಉತ್ತರದ ವಿರುದ್ಧ ದೆಹಲಿಯಲ್ಲಿ ಆಗಸ್ಟ್ ೧೧ ರಂದು ನಡೆಸಿರುವ ಸುದ್ಧಿಗೋಷ್ಠಿಯಲ್ಲಿ ಗಾಂಧಿ ಮಾತನಾಡುತ್ತಿದ್ದರು.

(ಸೌಜನ್ಯ – ABP NEWS)

ಆಗಸ್ಟ್ ೧೦ ರಂದು ಸಂಜೆ ಲೋಕಸಭೆಯಲ್ಲಿ ಅವಿಶ್ವಾಸ ಪ್ರಸ್ತಾವಕ್ಕೆ ಪ್ರಧಾನಮಂತ್ರಿ ಮೋದಿ ಉತ್ತರ ನೀಡುವಾಗ ಕಾಂಗ್ರೆಸ್ ಮತ್ತು ಇತರ ವಿರೋಧಿ ಪಕ್ಷದ ಸಂಸದರು ಬಹಿಷ್ಕರಿಸಿ ಹೊರ ನಡೆದಿದ್ದರು. ಇದರಿಂದ ಗಾಂಧಿ ಇವರು ಪತ್ರಕರ್ತರ ಸಭೆ ನಡೆಸಿ ಅವರ ಅಭಿಪ್ರಾಯ ಮಂಡಿಸಿದರು.

ಅಧೀರ ರಂಜನ ಚೌಧರಿ ಇವರನ್ನು ಅಮಾನತುಗೊಳಿಸಿರುವ ವಿರುದ್ಧ ವಿರೋಧಿ ಪಕ್ಷದಿಂದ ಸಂಸತ್ತಿನ ಹೊರಗೆ ಪ್ರತಿಭಟನೆ !

ಕಾಂಗ್ರೆಸ್ಸಿನ ನಾಯಕ ಅಧಿರರಂಜನ ಚೌದರಿ ಇವರ ಮೇಲೆ ಶಿಸ್ತುಭಂಗದ ಕ್ರಮ ಕೈಗೊಂಡಿರುವುದರಿಂದ ಅವರನ್ನು ಅಮಾನತುಗೊಳಿಸಲಾಯಿತು. ಇದರಿಂದ ಅಸಮಾಧಾನಗೊಂಡಿರುವ ‘ಇಂಡಿಯಾ’ ಈ ವಿರೋಧಿಪಕ್ಷದ ಗುಂಪು ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಿತು. ಅಮಾನತು ಗೊಳಿಸುವ ಕ್ರಮದ ವಿರುದ್ಧ ಕಾಂಗ್ರೆಸ್ಸಿನ ಮಲ್ಲಿಕಾರ್ಜುನ ಖಡ್ಗೆ ಇವರು ರಾಜ್ಯಸಭೆಯಲ್ಲಿ, ಚೌದರಿ ಇವರು ನೀರವ ಮೋದಿ ಇವರ ಹೆಸರು ಹೇಳಿರುವಂತಹ ಚಿಕ್ಕ ಕೃತಿಯಿಂದ ಅವರನ್ನು ಅಮಾನತುಗೊಳಿಸಲಾಗಿದೆ, ಕಾಂಗ್ರೆಸ್ಸಿನ ನಾಯಕ ಮನೀಶ್ ತಿವಾರಿ ಇವರು ‘ಅಮಾನತು ಕ್ರಮದ ವಿರುದ್ಧ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗುವುದಾಗಿ’ ಹೇಳಿದರು. ಹಾಗೂ ಈ ಪ್ರಕರಣ ಬಗ್ಗೆ ರಾಹುಲ್ ಗಾಂಧಿ ಇವರು ಸುದ್ಧಿಗೋಷ್ಠಿ ನಡೆಸಿದರು.

ಸಂಪಾದಕೀಯ ನಿಲುವು

ಅವಿಶ್ವಾಸ ಪ್ರಸ್ತಾವದ ಸಮಯದಲ್ಲಿ ಪ್ರಧಾನಮಂತ್ರಿಯವರು ಮಣಿಪುರದ ಬಗ್ಗೆ ಹೇಳುವುದನ್ನು ಕೇಳದೆ ವಿರೋಧ ಪಕ್ಷದವರು ಬಹಿಷ್ಕಾರ ಹಾಕಿ ಸಂಸತ್ತು ಬಿಟ್ಟು ಹೋಗುವುದು ಯೋಗ್ಯವಾಗಿದ್ದೆ ?