ಪಶ್ಚಿಮ ಬಂಗಾಳ: ಮುರ್ಷಿದಾಬಾದ್ ನಂತರ ದಕ್ಷಿಣ ೨೪ ಪರಗಣದ ಭಾಂಗಾರನಲ್ಲಿ ಮುಸಲ್ಮಾನರ ಹಿಂಸಾಚಾರ
ಕೋಲ್ಕತ್ತಾ (ಪಶ್ಚಿಮ ಬಂಗಾಳ) – ಮುರ್ಷಿದಾಬಾದ್ ನಂತರ ಪಶ್ಚಿಮ ಬಂಗಾಳದ ದಕ್ಷಿಣ ೨೪ ಪರಗಣ ಜಿಲ್ಲೆಯ ಭಾಂಗಾರನಲ್ಲಿ ಏಪ್ರಿಲ್ ೧೪ ರಂದು ಸಂಜೆ ಮುಸಲ್ಮಾನರು ಹಿಂಸಾಚಾರ ನಡೆಸಿ ಬೆಂಕಿ ಹಚ್ಚಿದರು. ಈ ಹಿಂಸಾಚಾರದ ವೇಳೆ ಹಿಂದೂಗಳು ಮತ್ತು ಪೊಲೀಸರ ಮೇಲೆ ಹಲ್ಲೆ ಮಾಡಲಾಯಿತು. ಅನೇಕ ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಇಲ್ಲಿ ವಕ್ಫ್ ಕಾನೂನಿನ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದಾಗ ಮುಸಲ್ಮಾನರು ಈ ಹಿಂಸಾಚಾರ ನಡೆಸಿದರು. ಪೊಲೀಸರು ಈ ಪ್ರಕರಣದಲ್ಲಿ ಇದುವರೆಗೆ ೨ ಜನರನ್ನು ಬಂಧಿಸಿದ್ದಾರೆ. ಈ ಹಿಂಸಾಚಾರದ ಹಿಂದೆ ಫುರ್ಫುರಾ ಶರೀಫ್ ದರ್ಗಾದ ಮುಖ್ಯಸ್ಥ ಪೀರ್ಜಾದಾ ಅಬ್ಬಾಸ್ ಸಿದ್ದಿಕಿ ಮತ್ತು ಅವರ ಸಹೋದರ ಇಂಡಿಯನ್ ಸೆಕ್ಯುಲರ್ ಫ್ರಂಟ್ ಶಾಸಕ ನೌಶಾದ್ ಸಿದ್ದಿಕಿ ಅವರ ಕೈವಾಡವಿದೆ ಎಂದು ತಿಳಿದುಬಂದಿದೆ.
After Murshidabad, now violent incidents by fanatic mobs erupt in Bhangar, South 24 Parganas!
Behind the violence: Dargah chief Abbas Siddiqui and his brother Naushad Siddiqui, MLA from the Indian Secular Front!
Will the so-called “secular” political parties, organisations, and… pic.twitter.com/noZg1yeRGS
— Sanatan Prabhat (@SanatanPrabhat) April 15, 2025
೧. ಪೊಲೀಸ್ ಮೂಲಗಳು ಮತ್ತು ಸ್ಥಳೀಯ ಜನರ ಪ್ರಕಾರ, ಅಬ್ಬಾಸ್ ಸಿದ್ದಿಕಿ ಮತ್ತು ಅವರ ಪಕ್ಷ ಇಂಡಿಯನ್ ಸೆಕ್ಯುಲರ್ ಫ್ರಂಟ್ ಹಿಂಸಾಚಾರದ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಸಿದ್ದಿಕಿ ಸ್ವತಃ ಮುಸಲ್ಮಾನರನ್ನು ವಕ್ಫ್ ಕಾನೂನಿನ ವಿರುದ್ಧ ಪ್ರಚೋದಿಸಿದ್ದರಿಂದ ಇಲ್ಲಿ ಹಿಂಸಾಚಾರ ನಡೆದಿದೆ. ಈ
ಪ್ರತಿಭಟನೆಯ ನೇತೃತ್ವವನ್ನು ಶಾಸಕ ನೌಶಾದ್ ಸಿದ್ದಿಕಿ ವಹಿಸಿದ್ದರು. ಸಿದ್ದಿಕಿ ಅವರು ವಕ್ಫ್ ಕಾನೂನನ್ನು ‘ಮುಸಲ್ಮಾನರ ವಿರುದ್ಧ ನಡೆದ ಆಕ್ರಮಣ’ ಎಂದು ಹೇಳಿ ಮುಸಲ್ಮಾನರನ್ನು ಪ್ರಚೋದಿಸಿದರು ಎಂದು ಸ್ಥಳೀಯರು ಆರೋಪಿಸಿದ್ದಾರೆ.
೨. ಫುರ್ಫುರಾ ಶರೀಫ್ ದರ್ಗಾದ ಪೀರ್ಜಾದಾ ಅಬ್ಬಾಸ್ ಸಿದ್ದಿಕಿ ಅವರು ಅಕ್ಟೋಬರ್ ೨೦೨೧ ರಲ್ಲಿ, ‘ಬಾಂಗ್ಲಾದೇಶದ ದುರ್ಗಾ ಪೂಜಾ ಮಂಟಪದಲ್ಲಿ ಕುರಾನ್‌ನ ಪ್ರತಿಯನ್ನು ಇಟ್ಟವರ ಶಿರಚ್ಛೇದ ಮಾಡಬೇಕು’ ಎಂದು ಹೇಳಿಕೆ ನೀಡಿದ್ದರು. ದುರ್ಗಾ ಪೂಜೆಯಂತಹ ಹಿಂದೂ ಹಬ್ಬಗಳಲ್ಲಿ ಭಾಗವಹಿಸುವ ಬಗ್ಗೆ ಸಿದ್ದಿಕಿ ಮುಸಲ್ಮಾನರನ್ನು ಟೀಕಿಸುತ್ತಾ, ಅವರಿಗೆ ಅಂತಹ ಹಬ್ಬಗಳಲ್ಲಿ ಅಷ್ಟು ಆಸಕ್ತಿಯಿದ್ದರೆ ಅವರು ಇಸ್ಲಾಂ ಧರ್ಮವನ್ನು ತೊರೆಯಬೇಕು ಎಂದು ಹೇಳಿದ್ದರು. (ಇಂತಹ ಹೇಳಿಕೆ ನೀಡಿದವರನ್ನು ಜೈಲಿಗೆ ಯಾಕೆ ತಳ್ಳಲಿಲ್ಲ?, ಎಂದು ಹಿಂದೂಗಳು ತೃಣಮೂಲ ಕಾಂಗ್ರೆಸ್ ಸರಕಾರವನ್ನು ಪ್ರಶ್ನಿಸಬೇಕು! – ಸಂಪಾದಕರು).
ಸಂಪಾದಕೀಯ ನಿಲುವು
|