ಗಾಳಿ ಮತ್ತು ಧ್ವನಿ ಮಾಲಿನ್ಯದಿಂದ ಹೆಚ್ಚುತ್ತಿರುವ ‘ ಬ್ರೈನ್ ಸ್ಟ್ರೋಕ್ ಅಪಾಯ

ನವದೆಹಲಿ – ಗಾಳಿಯಲ್ಲಿನ ಸೂಕ್ಷ್ಮ ಕಣಗಳು ಮತ್ತು ವಾಹನಗಳ ಶಬ್ದ ಹೆಚ್ಚಾಗಿ ಆರೋಗ್ಯಕ್ಕೆ ಗಂಭೀರ ಹಾನಿಯನ್ನುಂಟುಮಾಡುತ್ತವೆ. ವಾಯು ಮತ್ತು ಧ್ವನಿ ಮಾಲಿನ್ಯದಿಂದಾಗಿ ಮೆದುಳಿನ ಆಘಾತ (ಬ್ರೈನ್ ಸ್ಟ್ರೋಕ್) ಅಪಾಯವು ಇನ್ನಷ್ಟು ಹೆಚ್ಚಾಗುತ್ತದೆ ಎಂದು ಸ್ವೀಡನ್ನಿನ ‘ಕರೋಲಿನ್ಸ್ಕಾ ಇನ್ಸ್ಟಿಟ್ಯೂಟ್’ನ ‘ಎನ್ವಿರಾನ್ಮೆಂಟಲ್ ಮೆಡಿಸಿನ್ ವಿಭಾಗ’ವು ಪ್ರಕಟಿಸಿದ ‘ಎನ್ವಿರಾನ್ಮೆಂಟ್ ಇಂಟರ್ನ್ಯಾಷನಲ್’ ದೈನಿಕದಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ. ಯುರೋಪಿಯನ್ ಒಕ್ಕೂಟ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳ ಆಧಾರದ ಮೇಲೆ ವಿಜ್ಞಾನಿಗಳು ಈ ವಿಶ್ಲೇಷಣೆಯನ್ನು ಮಾಡಿದ್ದಾರೆ. ಈ ಸಂಶೋಧನೆಯಲ್ಲಿ ಸ್ವೀಡನ್, ಡೆನ್ಮಾರ್ಕ್ ಮತ್ತು ಫಿನ್ಲೆಂಡ್ ದೇಶಗಳ ಸುಮಾರು 1 ಲಕ್ಷ 37 ಸಾವಿರ ವಯಸ್ಕರರ ಪರೀಕ್ಷೆಯ ಮಾಹಿತಿಯನ್ನು ಸೇರಿಸಲಾಗಿದೆ. ಈ ಪ್ರಕ್ರಿಯೆಯಿಂದ, ‘ಪಿಎಂ 2.5’ ಎಂಬ ಸೂಕ್ಷ್ಮ ಮಾಲಿನ್ಯ ಕಣಗಳ ಪ್ರಮಾಣವು ಪ್ರತಿ ಘನ ಮೀಟರ್‌ಗೆ 5 ಮೈಕ್ರೋಗ್ರಾಂಗಳಷ್ಟು ಹೆಚ್ಚಾದರೆ, ಪಾರ್ಶ್ವವಾಯು ಅಪಾಯವು ಶೇಕಡ 9 ರಷ್ಟು ಹೆಚ್ಚಾಗಬಹುದು ಎಂದು ಕಂಡುಬಂದಿದೆ. ಅದೇ ರೀತಿ, ವಾಹನಗಳ ಶಬ್ದವು 11 ಡೆಸಿಬೆಲ್‌ನಷ್ಟು ಹೆಚ್ಚಾದರೆ, ಪಾರ್ಶ್ವವಾಯು ಅಪಾಯವು ಶೇಕಡ 6 ರಷ್ಟು ಹೆಚ್ಚಾಗುತ್ತದೆ. ಎರಡೂ ಅಂಶಗಳು ಒಟ್ಟಿಗೆ ಇದ್ದಾಗ ಅಪಾಯವು ಇನ್ನಷ್ಟು ಹೆಚ್ಚಾಗುತ್ತದೆ. 40 ಡೆಸಿಬೆಲ್‌ವರೆಗೆ ಶಬ್ದವಿದ್ದ ಶಾಂತ ಪ್ರದೇಶಗಳಲ್ಲಿಯೂ ಸಹ ‘ಪಿಎಂ 2.5’ ಹೆಚ್ಚಾದ ಕಾರಣ ಪಾರ್ಶ್ವವಾಯು ಅಪಾಯವು ಶೇಕಡ 6 ರಷ್ಟು ಹೆಚ್ಚಾಗಿದೆ, ಆದರೆ ಹೆಚ್ಚು ಶಬ್ದವಿರುವ ಪ್ರದೇಶಗಳಲ್ಲಿ (80 ಡೆಸಿಬೆಲ್) ಈ ಅಪಾಯವು ಶೇಖಡಾ 11 ರಷ್ಟು ಹೆಚ್ಚಾಗಿದೆ.

ಭಾರತಕ್ಕೂ ಎಚ್ಚರಿಕೆ: ವಿಶ್ವದ 100 ಅತಿ ಹೆಚ್ಚು ಕಲುಷಿತ ನಗರಗಳಲ್ಲಿ 74 ನಗರಗಳು ಭಾರತದಲ್ಲಿವೆ!

ಸಂಶೋಧನೆಯ ನಿಷ್ಕರ್ಷ ಭಾರತದಂತಹ ದೇಶಕ್ಕೂ ಗಂಭೀರ ಎಚ್ಚರಿಕೆಯಾಗಿದೆ. ಮಾಲಿನ್ಯ ಮತ್ತು ವಾಹನಗಳ ಶಬ್ದ ಎರಡೂ ಭಾರತದಲ್ಲಿನ ಪ್ರಮುಖ ಸಮಸ್ಯೆಗಳಾಗಿವೆ. ವಿಶ್ವದ 100 ಅತಿ ಹೆಚ್ಚು ಕಲುಷಿತ ನಗರಗಳಲ್ಲಿ 74 ಭಾರತದಲ್ಲಿವೆ. ಹೆಚ್ಚುತ್ತಿರುವ ಮಾಲಿನ್ಯದ ಪರಿಣಾಮವು ಎಲ್ಲಾ ಮಹಾನಗರಗಳ ಮೇಲೆ ಆಗುತ್ತಿದೆ ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.