ಇಂಫಾಲ (ಮಣಿಪುರ) – ಸುಮಾರು ೨ ತಿಂಗಳಿನಿಂದ ಗಲಭೆ ನಡೆಯುತ್ತಿರುವ ಮಣಿಪುರದಲ್ಲಿ ೨ ದಿನಗಳ ಪ್ರವಾಸಕ್ಕೆ ತೆರಳಲಿದ್ದ ರಾಹುಲ್ ಗಾಂಧಿಯವರನ್ನು ಇಂಫಾಲ್ ಬಳಿ ಪೊಲೀಸರು ತಡೆದಿದ್ದಾರೆ. ಇಲ್ಲಿಂದ ೨೦ ಕಿ.ಮೀ ದೂರದಲ್ಲಿರುವ ವಿಷ್ಣುಪುರ ಜಿಲ್ಲೆಯಲ್ಲಿ ನಡೆಯುತ್ತಿರುವ ಗಲಭೆಯ ಹಿನ್ನೆಲೆಯಲ್ಲಿ ಪೊಲೀಸರು ರಾಹುಲ್ ಗಾಂಧಿಯವರನ್ನು ಮುಂದೆ ಹೋಗಲು ಬಿಡಲಿಲ್ಲ. ಗಾಂಧಿಯವರು ಹಿಂಸಾಚಾರದ ಸಂತ್ರಸ್ತರನ್ನು ಸ್ಥಳಾಂತರಿಸಿದ ಚುರಾಚಾಂದಪುರದಲ್ಲಿನ ಆಶ್ರಯ ತಾಣಗಳಿಗೆ ಭೇಟಿ ನೀಡಲು ಹೋಗುತ್ತಿದ್ದರು. ಪೊಲೀಸರು, ಉಟಲು ಗ್ರಾಮದ ಬಳಿಯ ಹೆದ್ದಾರಿಯಲ್ಲಿ ಟೈರ್‌ಗಳನ್ನು ಸುಟ್ಟುಹಾಕಲಾಗಿದೆ ಮತ್ತು ರಾಹುಲ್ ಗಾಂಧಿ ಅವರ ಬೆಂಗಾವಲಿನ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ತಿಳಿಸಿದ್ದಾರೆ. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಅವರನ್ನು ಹೋಗದಂತೆ ತಡೆಯಲಾಯಿತು.
Manipur Police erected barricades to stop Shri @RahulGandhi from visiting the violence-hit areas.
RG’s convoy is stopped at Bishnupur, 20km away from Imphal. pic.twitter.com/YY4jH4JExn
— Nitin Agarwal (@nitinagarwalINC) June 29, 2023