ನಥುರಾಮ ಗೋಡ್ಸೆ ದೇಶಭಕ್ತನಾಗಿದ್ದನು ! – ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ತ್ರಿವೆಂದ್ರಸಿಂಹ ರಾವತ

ಉತ್ತರಾಖಂಡದ ಮಾಜಿ ಸಿಎಂ ತ್ರಿವೇಂದ್ರ ರಾವತ್

ಡೆಹರಾಡುನ (ಉತ್ತರಾಖಂಡ) – ಗಾಂಧೀಜಿಯವರ ಹತ್ಯೆ ಬೆರೆಯೇ ವಿಷಯವಾಗಿದೆ. ನಾನು ಗೋಡ್ಸೆಯವರನ್ನು ಎಷ್ಟು ತಿಳಿದುಕೊಂಡಿದ್ದೇನೆಯೋ ಮತ್ತು ಓದಿದ್ದೇನೆಯೋ ಅದರಿಂದ ಅವನು ಕೂಡ ದೇಶಭಕ್ತನಾಗಿದ್ದನು. ಗಾಂಧೀಜಿಯವರ ಹತ್ಯೆ ನಮಗೆ ಒಪ್ಪಿಗೆಯಿಲ್ಲ ಎಂದು ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ಮತ್ತು ಭಾಜಪ ಮುಖಂಡ ತ್ರಿವೇಂದ್ರಸಿಂಹ ರಾವತ ಇವರು ಹೇಳಿಕೆ ನೀಡಿದ್ದಾರೆ.

1. ರಾವತ್ ಇವರು ಕಾಂಗ್ರೆಸ್ ನಾಯಕ ರಾಹುಲ ಗಾಂಧಿಯವರನ್ನೂ ಟೀಕಿಸಿದರು. ರಾವತ ಮಾತನಾಡಿ, ಕೇವಲ ಗಾಂಧಿ ಅಡ್ಡಹೆಸರಿನಿಂದ ರಾಹುಲ ಗಾಂಧಿಯವರ ವಿಚಾರಸರಣಿ ಗಾಂಧಿವಾದಿ ಆಗುವುದಿಲ್ಲ. ಅವರು ಕೇವಲ ಮಾತನಾಡುತ್ತಾರೆ. ಅವರ ಪ್ರಯತ್ನಗಳಿಂದ ಪಕ್ಷಕ್ಕೆ ಯಾವುದೇ ಲಾಭವಾಗುವುದಿಲ್ಲ ಮತ್ತು ಆದಷ್ಟು ಬೇಗನೆ ಕಾಂಗ್ರೆಸ್ ಭೂತಕಾಲದ ವಿಷಯವಾಗಲಿದೆ.

2. ರಾಹುಲಗಾಂಧಿಯವರು ಅಮೇರಿಕಾದಿಂದ ಭಾರತದ ಸ್ಥಿತಿಯನ್ನು ನೋಡಿ ಟೀಕಿಸಿರುವ ಬಗ್ಗೆ ರಾವತ ಮಾತನಾಡುತ್ತಾ, ರಾಹುಲಗಾಂಧಿಯವರು ತಮ್ಮ ಪಕ್ಷದ ದುಃಸ್ಥಿತಿಯನ್ನು ನೋಡಿ ಹತಾಶರಾಗಿ ಮಾತನಾಡುತ್ತಿದ್ದಾರೆ. ಅವರು ಮಾನಸಿಕ ಒತ್ತಡದಲ್ಲಿ ಮಾತನಾಡುತ್ತಿದ್ದಾರೆ. ಮಾನಸಿಕ ಒತ್ತಡದಲ್ಲಿರುವ ವ್ಯಕ್ತಿಗೆ ಜನತೆ ಸ್ವೀಕರಿಸುವುದಿಲ್ಲ ಎಂದು ಹೇಳಿದರು.