ರಾಹುಲ್ ಗಾಂಧಿಯವರ ಶಿಕ್ಷೆಗೆ ಸರ್ವೋಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ !

  • ರಾಹುಲ್ ಗಾಂಧಿಯವರು ‘ಮೋದಿ’ ಉಪನಾಮಕ್ಕೆ ಮಾಡಿದ ಅವಮಾನದ ಪ್ರಕರಣ

  • ಸೂರತ್ ನ್ಯಾಯಾಲಯವು ವಿಧಿಸಿದ್ದ 2 ವರ್ಷಗಳ ಶಿಕ್ಷೆಯ ಹಿಂದಿನ ಕಾರಣವನ್ನು ಸ್ಪಷ್ಟ ಪಡಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಅಭಿಪ್ರಾಯ

ನವದೆಹಲಿ : ಮೋದಿ ಉಪನಾಮವನ್ನು ಅವಮಾನಿಸಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸೂರತ್ ನ್ಯಾಯಾಲಯ 2 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಇದರಿಂದ ಅವರ ಸಂಸತ್ ಸದಸ್ಯತ್ವ ರದ್ದಾಗಿತ್ತು. ಶಿಕ್ಷೆಗೆ ತಡೆ ಕೋರಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯ ಕುರಿತು ಆಗಸ್ಟ್ 4 ರಂದು ವಿಚಾರಣೆ ನಡೆಯಿತು. ಇದಕ್ಕೆ ನ್ಯಾಯಾಲಯವು ಗಾಂಧಿಯವರ ಶಿಕ್ಷೆಗೆ ತಡೆಯಾಜ್ಞೆ ನೀಡಿದೆ.

ಸರ್ವೋಚ್ಚ ನ್ಯಾಯಾಲಯವು, ಯಾವುದೇ ವ್ಯಕ್ತಿಗೆ ಅಪಮಾನ ಮಾಡಿದ ಪ್ರಕರಣದಲ್ಲಿ ಗರಿಷ್ಠ 2 ವರ್ಷ ಶಿಕ್ಷೆಯಾಗುತ್ತದೆಯೆಂದು ಹೇಳಿದೆ. ರಾಹುಲ್ ಗಾಂಧಿ ಅವರು ಮಡಿರುವ ಅವಹೇಳನಕಾರಿ ಹೇಳಿಕೆಯು ಜಾಮೀನು ಪಡೆಯಬಹುದಾದ ಅಪರಾಧವಾಗಿದೆ. ಗಾಂಧಿಯವರಿಗೆ ಎರಡು ವರ್ಷಕ್ಕಿಂತ ಒಂದು ದಿನದ ಶಿಕ್ಷೆ ವಿಧಿಸಿದ್ದರೂ, ಕಾನೂನಿನ ಅಡಿಯಲ್ಲಿ ಅವರು ಸಂಸತ್ತಿನ ಸದಸ್ಯತ್ವದಿಂದ ವಂಚಿತರಾಗುತ್ತಿರಲಿಲ್ಲ. ಆದ್ದರಿಂದ ಸೂರತ್ ನ್ಯಾಯಾಲಯವು ಗಾಂಧಿಗೆ ಎರಡು ವರ್ಷಗಳ ಶಿಕ್ಷೆಯನ್ನು ವಿಧಿಸಿರುವುದರ ಹಿಂದಿನ ನಿಖರವಾದ ಕಾರಣವೇನು?, ಎನ್ನುವುದನ್ನು ಸ್ಪಷ್ಟಪಡಿಸಬೇಕಿತ್ತು. ಗಾಂಧಿಯವರ ಹೇಳಿಕೆ ಅನುಚಿತವಾಗಿತ್ತು. ಸಾರ್ವಜನಿಕ ಜೀವನದಲ್ಲಿ ರಾಹುಲ್ ಗಾಂಧಿಯವರು ಹೆಚ್ಚು ಜವಾಬ್ದಾರಿಯುತವಾಗಿ ವರ್ತಿಸುತ್ತಾರೆ ಎಂದು ನಿರೀಕ್ಷಿಸಲಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ.

ನ್ಯಾಯಾಲಯದ ತೀರ್ಪಿನ ಕುರಿತು ಕಾಂಗ್ರೆಸ್ ಮಾಡಿರುವ ಟ್ವೀಟ್ ನಲ್ಲಿ ಉರ್ದೂ ಪದಗಳ ಸುರಿಮಳೆ !

ನ್ಯಾಯಾಲಯದ ಈ ತೀರ್ಪಿನ ಕುರಿತು ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಿದೆ, “ಇದು ದ್ವೇಷದ ವಿರುದ್ಧ ಪ್ರೀತಿಯ ಗೆಲುವು. ಸತ್ಯಮೇವ ಜಯತೇ !” ಎಂದಿದೆ. ಇದರಲ್ಲಿಯೂ ಕಾಂಗ್ರೆಸ್ `ಮೊಹಬ್ಬತ್’, `ನಫರತ್’ ‘ಜೀತ್’ ಮುಂತಾದ ಉರ್ದೂ ಪದಗಳನ್ನು ಉಪಯೋಗಿಸಿದೆ.

ಸಂಪಾದಕೀಯ ನಿಲುವು

ಮುಸಲ್ಮಾನರನ್ನು ಓಲೈಸುವುದರಲ್ಲಿ ಸಾರ್ಥಕತೆಯನ್ನು ಪಡುವ ಹಿಂದೂ ದ್ವೇಷಿ ಕಾಂಗ್ರೆಸ್‌ನಿಂದ ಇನ್ನೇನನ್ನು ನಿರೀಕ್ಷಿಸಬಹುದು ?