ಸನಾತನ ಸಂಸ್ಥೆಯನ್ನು ದ್ವೇಷಿಸುವುದಕ್ಕಿಂತ ಅದರ ಕೆಲಸವನ್ನು ನೋಡಿ! – ವಿದ್ಯುತ್ ಸಚಿವ ಸುದಿನ ಢವಳೀಕರ

  • “ತಥಾಕಥಿತ ಪ್ರಗತಿಪರ ಜವಾಹರ ಬರ್ವೆ ಅವರಿಂದ ಸನಾತನ ಸಂಸ್ಥೆಯ ಬಗ್ಗೆ ಅವಹೇಳನಕಾರಿ ಮಾತುಗಳು!”

  • ಬರ್ವೆ ಅವರು ಟೀಕಿಸಲು ಪ್ರಾರಂಭಿಸಿದಾಗ ಕಾರ್ಯಕ್ರಮದಿಂದ ಹೊರನಡೆದ ಶ್ರೀ. ಢವಳೀಕರ !

ಪಣಜಿ – “ಸಮಾಜೋನ್ನತಿ ಸಂಘಟನೆ”ಯಿಂದ ಪಣಜಿಯಲ್ಲಿನ ಮಿನೇಜಿಸ್ ಬ್ರಾಗನ್ಜಾ ಸಭಾಂಗಣದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಜಯಂತಿ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ತಥಾಕಥಿತ ಪ್ರಗತಿಪರ ಮತ್ತು ಸನಾತನ ದ್ವೇಷಿ ಜವಾಹರ ಬರ್ವೆ ಅವರು ಸನಾತನ ಸಂಸ್ಥೆಯ ಬಗ್ಗೆ ಅವಿವೇಕದ ಟೀಕೆ ಮಾಡಿದರು. ಅವರ ಈ ಟೀಕೆಯನ್ನು ವಿದ್ಯುತ್ ಸಚಿವ ಶ್ರೀ. ಸುದಿನ ಢವಳೀಕರ ಅವರು ಅದೇ ವೇದಿಕೆಯಿಂದ ಖಂಡಿಸಿದರು. ಬಳಿಕ ಜವಾಹರ ಬರ್ವೆ ಮತ್ತೊಮ್ಮೆ ನಾಚಿಕೆಯಿಲ್ಲದೆ ತಮ್ಮ ವಾದವನ್ನು ಮಂಡಿಸಲು ಪ್ರಾರಂಭಿಸಿದಾಗ ವಿದ್ಯುತ್ ಸಚಿವ ಢವಳೀಕರ ಅವರು ಕಾರ್ಯಕ್ರಮದಿಂದ ಹೊರನಡೆದರು.

“ಮಹಿಳೆಯರು ವಿಚ್ಛೇದನ ಪಡೆದು ಸನಾತನದ ಆಶ್ರಮದಲ್ಲಿನ ಬಂದಿದ್ದಾರೆ!” – ಬರ್ವೆ

ಜವಾಹರ ಬರ್ವೆ ಅವರು ಸನಾತನ ಸಂಸ್ಥೆಯನ್ನು ವಿರೋಧಿಸುತ್ತಾ 1997 ರ ಒಂದು ಪ್ರಸಂಗವನ್ನು ಹೇಳಿದರು. ನಂತರ “ಸನಾತನದ ಆಶ್ರಮದಲ್ಲಿ ಕೆಲವು ಮಹಿಳೆಯರು ವಾಸಿಸುತ್ತಿದ್ದಾರೆ, ಅವರು ವಿಚ್ಛೇದನ ಪಡೆದವರು” ಎಂದು ಹೇಳಿದರು. ಕೆಲ ಕೇಳಿದ ಮಾತುಗಳನ್ನು ಆಧರಿಸಿ ಅವರು ಈ ಕಾಮೆಂಟ್ ಮಾಡಿದ್ದಾರೆಂದು ಅವರು ಹೇಳಿದರು. ಬಳಿಕ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿದ್ಯುತ್ ಸಚಿವ ಸುದಿನ ಢವಳೀಕರ ಅವರ ಭಾಷಣ ನಡೆಯಿತು. ಢವಳೀಕರ ಅವರು ತಮ್ಮ ಭಾಷಣದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಮತ್ತು ಸಂವಿಧಾನದ ಬಗ್ಗೆ ಮಾತನಾಡಿದರು. ನಂತರ ಜವಾಹರ ಬರ್ವೆ ಅವರ ಸನಾತನ ಸಂಸ್ಥೆಯ ಮೇಲಿನ ಅವಿವೇಕದ ಟೀಕೆಯನ್ನು ಖಂಡಿಸಿದರು.

(ಸೌಜನ್ಯ :  prudentmediagoa)

ಕಳೆದ 25 ವರ್ಷಗಳಿಂದ ಸನಾತನದ ಕಾರ್ಯವನ್ನು ನಾನು ನೋಡುತ್ತಿದ್ದೇನೆ! – ಢವಳೀಕರ

ಶ್ರೀ. ಢವಳೀಕರ ಅವರು ಮಾತನಾಡಿ, “ಜವಾಹರ ಬರ್ವೆ ಅವರಿಗೆ ಸನಾತನ ಸಂಸ್ಥೆಯ ಬಗ್ಗೆ ಏನೂ ತಿಳಿದಿಲ್ಲ. ಸನಾತನದ ಆಶ್ರಮದಲ್ಲಿ ವಾಸಿಸುವ ಮಹಿಳೆಯರನ್ನು ‘ವಿಚ್ಛೇದಿತರು’ ಎಂದು ಹೇಳಿ ಅವರು ಆ ಮಹಿಳೆಯರನ್ನು ಅವಮಾನಿಸಿದ್ದಾರೆ. ನನ್ನ ಕ್ಷೇತ್ರದಲ್ಲಿ ಈ ಸಂಸ್ಥೆಯ ಆಶ್ರಮವಿದೆ. ಕಳೆದ 25 ವರ್ಷಗಳಿಂದ ಅವರ ಆಧ್ಯಾತ್ಮಿಕ ಕಾರ್ಯವನ್ನು ನಾನು ನೋಡುತ್ತಿದ್ದೇನೆ. ನಿಜ ಹೇಳಬೇಕೆಂದರೆ, ಇದು ಇಂತಹ ವಿಷಯಗಳ ಬಗ್ಗೆ ಮಾತನಾಡಲು ವೇದಿಕೆಯಲ್ಲ; ಆದರೆ ಬರ್ವೆ ಮಾತನಾಡಿದ್ದರಿಂದ ನಾನು ಮಾತನಾಡಬೇಕಾಯಿತು. ಈ ವಿಷಯವನ್ನು ಪ್ರಸ್ತಾಪಿಸಿದ್ದಕ್ಕಾಗಿ ನಿಮ್ಮೆಲ್ಲರ ಕ್ಷಮೆ ಯಾಚಿಸುತ್ತೇನೆ; ಆದರೆ ಆಯೋಜಕರ ಕ್ಷಮೆ ಕೇಳುವುದಿಲ್ಲ. ಸನಾತನ ಸಂಸ್ಥೆಯ ಕಾರ್ಯವನ್ನು ನೋಡಿ. ಸುಮ್ಮನೆ ಅವರನ್ನು ದ್ವೇಷಿಸಬೇಡಿ. ಬರ್ವೆ ಅವರಿಗೆ ಏನೂ ತಿಳಿದಿಲ್ಲ. ಮುಂಬರುವ ಮೇ ತಿಂಗಳ 17 ರಂದು ಅವರ ಫರ್ಮಾಗುಡಿಯ ಗೋವಾ ಇಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ದೊಡ್ಡ ಕಾರ್ಯಕ್ರಮ ನಡೆಯಲಿದೆ. ಅದಕ್ಕೆ 1 ಲಕ್ಷ ಜನರು ಬರುತ್ತಾರೆ ಎಂದು ಹೇಳಿದರು.

“ಸನಾತನದ ಅಪಪ್ರಚಾರ ಮಾಡುವವರೊಂದಿಗೆ ಇರಲು ಸಾಧ್ಯವಿಲ್ಲ” ಎಂದು ಹೇಳಿ ಶ್ರೀ. ಢವಳೀಕರ ಅವರು ಈ ಕಾರ್ಯಕ್ರಮದಿಂದ ಹೊರಟು ಹೋದರು!

“ಶಂಭು ಭಾವು ಬಾಂದೇಕರ ಅವರು ನನ್ನನ್ನು ಈ ಕಾರ್ಯಕ್ರಮಕ್ಕೆ ಕರೆದಿದ್ದಕ್ಕಾಗಿ ನಾನು ಅವರಿಗೆ ಆಭಾರಿಯಾಗಿದ್ದೇನೆ” ಎಂದು ಹೇಳಿ ವಿದ್ಯುತ್ ಸಚಿವ ಶ್ರೀ. ಸುದಿನ ಢವಳೀಕರ ಅವರು ಕುಳಿತ ನಂತರ ಜವಾಹರ ಬರ್ವೆ ಮತ್ತೆ ಎದ್ದು ನಿಂತು ಸನಾತನದ ವಿರುದ್ಧ ತಮ್ಮ ಅಭಿಪ್ರಾಯವನ್ನು ಮಂಡಿಸಿದರು. ಈ ರೀತಿ ನಡೆಯುವುದನ್ನು ಕಂಡು “ಸನಾತನ ಸಂಸ್ಥೆಯ ಅಪಪ್ರಚಾರ ಮಾಡುವವರೊಂದಿಗೆ ನಾನು ಇರಲು ಸಾಧ್ಯವಿಲ್ಲ” ಎಂದು ಹೇಳಿ ಢವಳೀಕರ ಅವರು ಅಸಮಾಧಾನದಿಂದ ಕಾರ್ಯಕ್ರಮದಿಂದ ಹೊರನಡೆದರು.

ಮುಖ್ಯಮಂತ್ರಿಗಳ ಬಗ್ಗೆ ಟೀಕೆ; ಢವಳೀಕರ ಅವರಿಂದ ಆಕ್ಷೇಪ

ಓರ್ವ ಭಾಷಣಕಾರರು ಮಯೆ ಗ್ರಾಮದ ಸಮಸ್ಯೆಯ ಬಗ್ಗೆ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ ಅವರನ್ನು ಟೀಕಿಸಿದರು. ಅದಕ್ಕೂ ಸಚಿವ ಢವಳೀಕರ ಅವರು ಆಕ್ಷೇಪ ವ್ಯಕ್ತಪಡಿಸಿದರು. “ನಾನು ವೇದಿಕೆಯಲ್ಲಿ ಉಪಸ್ಥಿತನಿರುವಾಗ ಮುಖ್ಯಮಂತ್ರಿಗಳ ಬಗ್ಗೆ ಟೀಕೆಯನ್ನು ಸಹಿಸಲು ಸಾಧ್ಯವಿಲ್ಲ” ಎಂದು ಅವರು ಬೇಸರ ವ್ಯಕ್ತಪಡಿಸಿದರು.

(ಸೌಜನ್ಯ –  Unique Achievers)

ಸಂಪಾದಕೀಯ ನಿಲುವು

ಸನಾತನ ಸಂಸ್ಥೆಯ ಮಾನಹಾನಿ ಮಾಡುವ ಪ್ರಗತಿ(ಅಧೋಗತಿ)ಪರರನ್ನು ಖಂಡಿಸಿದ ವಿದ್ಯುತ್ ಸಚಿವ ಶ್ರೀ. ಢವಳೀಕರ ಅವರಿಗೆ ಸನಾತನದ ವತಿಯಿಂದ ಧನ್ಯವಾದಗಳು!