ಸೌದಿ ಅರೇಬಿಯಾದಲ್ಲಿ, ಕಾಬಾ ಮಸೀದಿಯ ಮುಂಭಾಗದಲ್ಲಿ, ‘ಭಾರತ್ ಜೋಡೋ ಯಾತ್ರೆ’ಯ ಪ್ರಚಾರ 99 ಛಡಿಯೇಟು ಮತ್ತು 8 ತಿಂಗಳು ಜೈಲು ಶಿಕ್ಷೆ !

ಕಾಂಗ್ರೆಸ್ ನ ಮುಸ್ಲಿಂ ಕಾರ್ಯಕರ್ತನ ಕಾಂಗ್ರೆಸ್ ಪ್ರೀತಿ ಜೈಲು ಗತಿ !

ನವ ದೆಹಲಿ – ರಜಾ ಕಾದ್ರಿ ಎಂಬ ಮುಸ್ಲಿಂ ಕಾಂಗ್ರೆಸ್ ಕಾರ್ಯಕರ್ತ 2023 ರ ಜನವರಿಯಲ್ಲಿ ಸೌದಿ ಅರೇಬಿಯಾದ ಕಾಬಾದ ಮುಂದೆ ರಾಹುಲ್ ಗಾಂಧಿಯವರ ‘ಭಾರತ್ ಜೋಡೋ ಯಾತ್ರೆ’ಯ ಪ್ರಚಾರ ಮಾಡಿದ್ದನು. ಇದರಿಂದಾಗಿ ಕಾದ್ರಿಯನ್ನು ಬಂಧಿಸಿ 8 ತಿಂಗಳ ಕಾಲ ಜೈಲಿನಲ್ಲಿ ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ಇರಿಸಲಾಗಿತ್ತು. ಇದರೊಂದಿಗೆ 99 ಛಡಿ ಏಟಿನ ಶಿಕ್ಷೆಯನ್ನೂ ವಿಧಿಸಲಾಗಿತ್ತು.

(ಸೌಜನ್ಯ – News18 MP Chhattisgarh)

ಕಾದ್ರಿ ಅಕ್ಟೋಬರ್ 4 ರಂದು ಭಾರತಕ್ಕೆ ಮರಳಿದನು ಮತ್ತು ಅಲ್ಲಿನ ಜೈಲುಗಳಲ್ಲಿ ಭಾರತೀಯರನ್ನು ಅತ್ಯಂತ ಕೊಳಕು ಸ್ಥಳಗಳಲ್ಲಿ ಇರಿಸಲಾಗಿತ್ತು ಎಂದು ಹೇಳಿದನು. ಕಾದ್ರಿ ಮಧ್ಯಪ್ರದೇಶದ ನಿವಾಡಿ ಜಿಲ್ಲೆಯ ಯುವ ಕಾಂಗ್ರೆಸ್ ನಾಯಕನಾಗಿದ್ದಾನೆ. ಅವನು ಮಕ್ಕಾದ ಮಸೀದಿ ಅಲ್ ಹರಮ ನಲ್ಲಿರುವ ಕಾಬಾದ ಮುಂಭಾಗದಲ್ಲಿ ‘ಭಾರತ್ ಜೋಡೋ ಯಾತ್ರೆ’ಯ ಪೋಸ್ಟರನ್ನು ಪ್ರದರ್ಶಿಸಿದರು. ಅದರ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ. ಇದಕ್ಕಾಗಿ ಅವನನ್ನು ಬಂಧಿಸಲಾಗಿತ್ತು.