ಪಶ್ಚಿಮ ಬಂಗಾಳದ ಹಿಂದೂಗಳ ವಲಸೆಯ ಸ್ಥಿತಿ ನಾಳೆ ಮಹಾರಾಷ್ಟ್ರ ಅಥವಾ ಮಧ್ಯಪ್ರದೇಶದಲ್ಲೂ ನಿರ್ಮಾಣವಾಗಬಹುದು! – ಪಂಡಿತ ಧೀರೇಂದ್ರ ಶಾಸ್ತ್ರಿ ಮಹಾರಾಜ ಎಚ್ಚರಿಕೆ

ಶ್ರೀ ಬಾಗೇಶ್ವರ ಬಾಲಾಜಿ ಸನಾತನ ಮಠದ ಲೋಕಾರ್ಪಣಾ ಸಮಾರಂಭ

ಭಿವಂಡಿ – ಹಿಂದುಸ್ತಾನದಲ್ಲಿ ವಾಸಿಸುವ ಪ್ರತಿಯೊಬ್ಬರೂ ಹಿಂದೂಗಳೇ. ನಾವು ಮುಸಲ್ಮಾನ ವಿರೋಧಿಗಳಲ್ಲ. ಇಂದು ಭಯಾನಕ ಪರಿಸ್ಥಿತಿಗಳಿಂದಾಗಿ ಪಶ್ಚಿಮ ಬಂಗಾಳದಿಂದ ಹಿಂದೂಗಳು ವಲಸೆ ಹೋಗುತ್ತಿದ್ದಾರೆ. ನಾಳೆ ಮಹಾರಾಷ್ಟ್ರದಲ್ಲೂ ಇಂತಹ ಸ್ಥಿತಿ ನಿರ್ಮಾಣವಾಗಬಹುದು. ಮಧ್ಯಪ್ರದೇಶದಲ್ಲೂ ಸಹ ಈ ಪರಿಸ್ಥಿತಿ ಎದುರಾಗಬಹುದು. ಒಂದು ನಿರ್ದಿಷ್ಟ ಸಮುದಾಯದಿಂದ ಹಿಂದೂಗಳನ್ನು ಬೆದರಿಸುವ ಪ್ರಯತ್ನಗಳು ನಡೆಯುತ್ತಿವೆ, ಇದು ಖಂಡನೀಯವಾಗಿದೆ. ಮುಸಲ್ಮಾನರು ಭಾರತದ ಕಾನೂನಿನ ಅಡಿಯಲ್ಲಿ ನಡೆದರೆ, ಅವರಿಗೆ ಲಾಭವಾಗುತ್ತದೆ ಎಂದು ಶ್ರೀ ಬಾಗೇಶ್ವರ ಧಾಮ ಮಠದ ಮಠಾಧಿಪತಿ ಪಂಡಿತ ಧೀರೇಂದ್ರ ಶಾಸ್ತ್ರಿ ಮಹಾರಾಜ ಹೇಳಿದ್ದಾರೆ. ದೇಶದ ಎರಡನೇ ಮತ್ತು ಮಹಾರಾಷ್ಟ್ರದ ಮೊದಲ ಶ್ರೀ ಬಾಗೇಶ್ವರ ಬಾಲಾಜಿ ಸನಾತನ ಮಠವು ಭಿವಂಡಿಯ ಹೈವೇ ದಿವೆಯಲ್ಲಿ ನಿರ್ಮಾಣವಾಗಿದೆ. ಈ ಮಠದ ಲೋಕಾರ್ಪಣಾ ಸಮಾರಂಭವು ಏಪ್ರಿಲ್ ೧೪ ರಂದು ನಡೆಯಿತು. ಈ ಕಾರ್ಯಕ್ರಮದ ವೇಳೆ ಅವರು ಮಾತನಾಡುತ್ತಿದ್ದರು.

ಪಂಡಿತ ಧೀರೇಂದ್ರ ಶಾಸ್ತ್ರಿ ಅವರು ಮುಂದೆ ಮಾತನಾಡಿ, “ಮಹಾರಾಷ್ಟ್ರದಲ್ಲಿನ ಸಾಮಾನ್ಯ ಬಡ ಬಾಗೇಶ್ವರ ಬಾಲಾಜಿ ಭಕ್ತರಿಗೆ ಮಧ್ಯಪ್ರದೇಶಕ್ಕೆ ಹೋಗಲು ಸಾಧ್ಯವಾಗುವುದಿಲ್ಲ. ಅಂತಹ ಭಕ್ತರಿಗಾಗಿ ಭಿವಂಡಿಯ ಬಾಗೇಶ್ವರ ಬಾಲಾಜಿ ಧಾಮವು ಒಂದು ವಿಶೇಷ ಅವಕಾಶವಾಗಿದೆ. ಈ ಮಠವು ಸನಾತನ ಧರ್ಮ ಪ್ರಚಾರದ ಕೇಂದ್ರ ಮತ್ತು ಭಕ್ತರಿಗೆ ನಂಬಿಕೆಯ ಪವಿತ್ರ ಸ್ಥಳವಾಗಲಿದೆ” ಎಂದವರು ಹೇಳಿದರು.

ಹೀಗಿದೆ ಶ್ರೀ ಬಾಗೇಶ್ವರ ಬಾಲಾಜಿ ಸನಾತನ ಮಠ ?

ಈ ಮಠವು ನಾಲ್ಕೂವರೆ ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿದೆ. ನೆಲಮಾಳಿಗೆ ಮತ್ತು ಒಂದು ಮೇಲಿನ ಮಹಡಿ ಇದೆ. ದೇವಾಲಯದ ಹಿಂಭಾಗದಲ್ಲಿ ಯಜ್ಞಶಾಲೆಯನ್ನು ನಿರ್ಮಿಸಲಾಗಿದೆ. ಮೊದಲ ಮಹಡಿಯಲ್ಲಿ ಶ್ರೀ ಬಾಗೇಶ್ವರ ಬಾಲಾಜಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ ಮತ್ತು ಬಾಲಾಜಿಯ ಬಲಭಾಗದಲ್ಲಿ ಗಣಪತಿಯ ಮೂರ್ತಿ ಇದೆ. ಎಡಭಾಗದಲ್ಲಿ ಶುಭ್ರ ಸ್ಪಟಿಕದ ಶಿವಲಿಂಗವಿದೆ. ಬಾಲಾಜಿಯ ಮೂರ್ತಿಯ ಮುಂಭಾಗದಲ್ಲಿಯೇ ಪ್ರಭು ಶ್ರೀರಾಮಚಂದ್ರ, ಸೀತೆ, ಲಕ್ಷ್ಮಣ ಮತ್ತು ಹನುಮಂತನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ನೆಲಮಾಳಿಗೆಯಲ್ಲಿ ಪಂಡಿತ ಧೀರೇಂದ್ರ ಶಾಸ್ತ್ರಿ ಅವರ ಆಸನ ವ್ಯವಸ್ಥೆ ಹಾಗೂ ಚಿಕ್ಕದಾದ ಖಾಣಿ ದಿವ್ಯ ದರ್ಬಾರ್ ಸಭಾಂಗಣವನ್ನು ನಿರ್ಮಿಸಲಾಗಿದೆ. ಇಲ್ಲಿ ರಾಮಾಯಣದ ವಿವಿಧ ಪ್ರಸಂಗಗಳ ಚಿತ್ರಗಳನ್ನು ಸಹ ಚಿತ್ರಿಸಲಾಗಿದೆ.