ರಾಹುಲ ಗಾಂಧಿಯವರು ತಮ್ಮ ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ ಉಚ್ಚ ನ್ಯಾಯಾಲಯದಿಂದ ವಜಾ

ರಾಹುಲ ಗಾಂಧಿ

ಕರ್ಣಾವತಿ (ಗುಜರಾತ) – ‘ಮೋದಿ ಎಂಬ ಉಪನಾಮ ಹೊಂದಿರುವವರೆಲ್ಲರೂ ಕಳ್ಳರು’, ಎಂಬ ಹೇಳಿಕೆ ನೀಡಿದ್ದ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ ಗಾಂಧಿ ಅವರಿಗೆ ಸೂರತ್ ಸತ್ರ ನ್ಯಾಯಾಲಯವು 2 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅದನ್ನು ಪ್ರಶ್ನಿಸಿ ಗುಜರಾತ ಉಚ್ಚ ನ್ಯಾಯಾಲಯದಲ್ಲಿ ಗಾಂಧಿಯವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿದೆ. ಆದ್ದರಿಂದ ಈಗ ರಾಹುಲ ಗಾಂಧಿಯವರು ಈ ಶಿಕ್ಷೆಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಿದ್ದಾರೆ.

2019 ರಲ್ಲಿ ಲೋಕಸಭೆಯ ಚುನಾವಣೆಯ ಪ್ರಚಾರದ ವೇಳೆ ರಾಹುಲ್ ಗಾಂಧಿಯವರು ಮೇಲಿನಂತೆ ಹೇಳಿಕೆಯನ್ನು ನೀಡಿದ್ದರು. ಇದಕ್ಕೆ ಭಾಜಪ ಮುಖಂಡ ಪೂರ್ವೇಶ ಮೋದಿಯವರು ಸೂರತ್ ನ ಸತ್ರ ನ್ಯಾಯಾಲಯದಲ್ಲಿ ದೂರನ್ನು ದಾಖಲಿಸಿದ್ದರು. ಸತ್ರ ನ್ಯಾಯಾಲಯವು ಮಾರ್ಚ 23, 2023 ರಂದು ರಾಹುಲ ಗಾಂಧಿಯವರಿಗೆ 2 ವರ್ಷದ ಜೈಲು ಶಿಕ್ಷೆಯನ್ನು ವಿಧಿಸಿತ್ತು. ತದನಂತರ ಮಾರ್ಚ 24 ರಂದು ಲೋಕಸಭೆ ಸಚಿವಾಲಯವು ರಾಹುಲ ಗಾಂಧಿಯವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಿತ್ತು.