PM Modi On Mahakumbh : ಮಹಾಕುಂಭದ ಆಯೋಜನೆಯಲ್ಲಿ ಏನಾದರೂ ಕೊರತೆ ಇದ್ದರೆ, ಕ್ಷಮಿಸಿರಿ ! – ಪ್ರಧಾನಿ ಮೋದಿ

ಮಹಾಕುಂಭದ ಮುಕ್ತಾಯದ ಬಳಿಕ ಪ್ರಧಾನಿ ಮೋದಿಯಿಂದ ಭಕ್ತರಿಗೆ ಕರೆ !

ನವದೆಹಲಿ – ಏಕತೆಯ ಮಹಾನ ಯಜ್ಞ ಪೂರ್ಣಗೊಂಡಿದೆ. ಒಂದು ರಾಷ್ಟ್ರದ ಅರಿವು ಜಾಗೃತವಾದಾಗ, ಅದು ಶತಮಾನಗಳ ಗುಲಾಮಗಿರಿಯ ಮನಃಸ್ಥಿತಿಯ ಎಲ್ಲಾ ಸಂಕೋಲೆಗಳನ್ನು ಮುರಿದು ಹೊಸ ಚೇತನದೊಂದಿಗೆ ಉಸಿರಾಡಲು ಪ್ರಾರಂಭಿಸುತ್ತದೆ. ಮಹಾಕುಂಭದಲ್ಲಿ ಇದೇ ಕಂಡು ಬಂದಿತು. ಇಷ್ಟು ದೊಡ್ಡ ಕಾರ್ಯಕ್ರಮವನ್ನು ಆಯೋಜಿಸುವುದು ಸುಲಭವಾಗಿರಲಿಲ್ಲ. ನಾನು ಗಂಗಾ, ಯಮುನಾ ಮತ್ತು ಸರಸ್ವತಿ ಮಾತೆಯಲ್ಲಿ ಪ್ರಾರ್ಥಿಸುತ್ತೇನೆ. ನಮ್ಮ ಪೂಜೆಯಲ್ಲಿ ಏನಾದರೂ ನ್ಯೂನ್ಯತೆಯಿದ್ದರೆ ದಯವಿಟ್ಟು ನಮ್ಮನ್ನು ಕ್ಷಮಿಸು. ನಾವು ಭಕ್ತರ ಸೇವೆ ಮಾಡುವಲ್ಲಿ ಕಡಿಮೆ ಬಿದ್ದಿದ್ದರೆ, ನಾನು ಜನತೆಯಲ್ಲಿ ಕ್ಷಮೆಯಾಚಿಸುತ್ತೇನೆ. ಎಂದು ಪ್ರಧಾನಿ ನರೇಂದ್ರ ಮೋದಿಯವರು ಮಹಾಕುಂಭದ ಯಶಸ್ವಿ ಮುಕ್ತಾಯದ ನಂತರ ‘ಬ್ಲಾಗ್’ ಬರೆದು ತಮ್ಮ ವಿಚಾರಗಳನ್ನು ತಿಳಿಸಿದ್ದಾರೆ. ಅವರು, ‘ಏಕತೆಯ ಮಹಾಕುಂಭ: ಯುಗ ಪರಿವರ್ತನೆಯ ಸುಳಿವು’ ಎಂಬ ಶೀರ್ಷಿಕೆಯಡಿಯಲ್ಲಿ ತಮ್ಮ ವಿಚಾರಗಳನ್ನು ಮಂಡಿಸಿದರು.

ಓದಲು ಕ್ಲಿಕ್ ಮಾಡಿ :

https://www.narendramodi.in/hi/prime-minister-narendra-modi-shares-his-thoughts-on-the-mahakumbh-591281

ಪ್ರಧಾನಿ ಮೋದಿ ವ್ಯಕ್ತಪಡಿಸಿದ ವಿಚಾರಗಳು

1. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನೇತೃತ್ವದಲ್ಲಿ, ಸರಕಾರ, ಆಡಳಿತ ಮತ್ತು ಜನರು ಒಟ್ಟಾಗಿ ಈ ಏಕತೆಯ ಮಹಾ ಕುಂಭವನ್ನು ಯಶಸ್ವಿಗೊಳಿಸಿದರು. ಕೇಂದ್ರವಿರಲಿ ಅಥವಾ ರಾಜ್ಯವಿರಲಿ, ಯಾರೂ ಆಡಳಿತಗಾರರು ಅಥವಾ ಅಧಿಕಾರಿಗಳಾಗಿರಲಿಲ್ಲ. ಎಲ್ಲರೂ ಭಕ್ತಿಯಿಂದ ತುಂಬಿರುವ ಸೇವಕರಾಗಿದ್ದರು.

2. ಒಂದು ವೇಳೆ ನಾವು ಸ್ವಾತಂತ್ರ್ಯದ ನಂತರ ಭಾರತದ ಈ ಶಕ್ತಿಯ ಅಗಾಧ ಸ್ವರೂಪವನ್ನು ಗುರುತಿಸಿದ್ದರೆ ಮತ್ತು ಈ ಶಕ್ತಿಯನ್ನು ಎಲ್ಲರ ಕಲ್ಯಾಣಕ್ಕಾಗಿ, ಎಲ್ಲರ ಸಂತೋಷಕ್ಕಾಗಿ ಹೊರಳಿಸಿದ್ದರೆ, ಅದು ಗುಲಾಮಗಿರಿಯ ಪರಿಣಾಮಗಳಿಂದ ಹೊರಹೊಮ್ಮಿ ಭಾರತಕ್ಕೆ ಒಂದು ದೊಡ್ಡ ಶಕ್ತಿಯಾಗುತ್ತಿತ್ತು; ಆದರೆ ಆಗ ನಮಗೆ ಅದು ಸಾಧ್ಯವಾಗಲಿಲ್ಲ.

3. ಈ ಮಹಾಕುಂಭ ಕಾರ್ಯಕ್ರಮವು ಆಧುನಿಕ ಕಾಲದ ನಿರ್ವಹಣಾ ವೃತ್ತಿಪರರು, ನಿಯೋಜನೆ ಮತ್ತು ನೀತಿ ತಜ್ಞರಿಗೆ ಹೊಸ ಅಧ್ಯಯನ ವಿಷಯವಾಗಿದೆ. ಇಂದು ಇಡೀ ಜಗತ್ತಿನಲ್ಲಿ ಇಷ್ಟು ದೊಡ್ಡ ಕಾರ್ಯಕ್ರಮಕ್ಕೆ ಯಾವುದೇ ಹೋಲಿಕೆ ಇಲ್ಲ. ಇಂತಹ ಉದಾಹರಣೆ ಬೇರೆ ಯಾವುದೂ ಇಲ್ಲ.

4. ತ್ರಿವೇಣಿ ಸಂಗಮದಲ್ಲಿ ಒಂದೇ ನದಿಯ ದಡದಲ್ಲಿ ಕೋಟ್ಯಂತರ ಜನರು ಹೇಗೆ ಒಟ್ಟುಗೂಡಿದರು ಎಂಬುದನ್ನು ನೋಡಿ ಇಡೀ ಜಗತ್ತು ಆಶ್ಚರ್ಯಚಕಿತವಾಗಿದೆ. ಈ ಕೊಟಿಗಟ್ಟಲೆ ಜನರಿಗೆ ಔಪಚಾರಿಕ ಆಹ್ವಾನವಾಗಲಿ ಅಥವಾ ಅವರು ಯಾವಾಗ ಬರುತ್ತಾರೆ ಎಂಬುದರ ಬಗ್ಗೆ ಯಾವುದೇ ಪೂರ್ವ ಮಾಹಿತಿಯಾಗಲಿ ಇರಲಿಲ್ಲ. ಹಾಗಾದರೆ ಜನರು ಮಹಾಕುಂಭಕ್ಕೆ ತೆರಳಿ ಪವಿತ್ರ ಸಂಗಮದಲ್ಲಿ ಸ್ನಾನ ಮಾಡುವ ಮೂಲಕ ಆಶೀರ್ವಾದ ಪಡೆದರು.

5. ಈ ಮಹಾಕುಂಭದಲ್ಲಿ ಭಾಗವಹಿಸಲು ಭಾರತದ ಯುವಕರು ಮುಂದೆ ಬರುತ್ತಿರುವುದು ಒಂದು ದೊಡ್ಡ ಸಂದೇಶವಾಗಿದೆ. ಇದು ಭಾರತದ ಯುವ ಪೀಳಿಗೆ ನಮ್ಮ ಸಂಪ್ರದಾಯ ಮತ್ತು ಸಂಸ್ಕೃತಿಯ ವಾಹಕರು ಎಂಬುದನ್ನು ಸಾಬೀತುಪಡಿಸುತ್ತದೆ. ಅದನ್ನು ಮುಂದಕ್ಕೆ ಕೊಂಡೊಯ್ಯುವುದು ತಮ್ಮ ಜವಾಬ್ದಾರಿ ಎಂದು ಅವರು ಭಾವಿಸುತ್ತಾರೆ. ಅವರು ಇದಕ್ಕಾಗಿ ದೃಢನಿಶ್ಚಯ ಮತ್ತು ಸಮರ್ಪಿತರಾಗಿದ್ದಾರೆ.

6. ಆಧ್ಯಾತ್ಮಿಕ ಕ್ಷೇತ್ರದ ಸಂಶೋಧಕರು ಕೋಟ್ಯಾವಧಿ ಭಾರತೀಯರ ಈ ಉತ್ಸಾಹದ ಅಧ್ಯಯನ ಮಾಡಿದರೆ, ಅವರಿಗೆ ಪರಂಪರೆಯ ಬಗ್ಗೆ ಹೆಮ್ಮೆಪಡುವ ಭಾರತವು ಈಗ ಹೊಸ ಶಕ್ತಿಯೊಂದಿಗೆ ಮುನ್ನಡೆಯುತ್ತಿದೆ ಎಂದು ಕಂಡುಬರುತ್ತದೆ. ನನಗೆ ಇದು ಆ ಯುಗದ ಬದಲಾವಣೆಯ ಧ್ವನಿಯಾಗಿದ್ದು, ಅದು ಭಾರತಕ್ಕೆ ಹೊಸ ಭವಿಷ್ಯವನ್ನು ಬರೆಯಲಿದೆ, ಎಂದು ನಾನು ಭಾವಿಸುತ್ತೇನೆ.

7. ಏಕತೆಯ ಮಹಾ ಕುಂಭದಂತೆಯೇ, ಪ್ರತಿಯೊಬ್ಬ ಭಕ್ತರು, ಅವರು ಬಡವರಾಗಿರಲಿ ಅಥವಾ ಶ್ರೀಮಂತರಾಗಿರಲಿ, ಮಗುವಾಗಿರಲಿ ಅಥವಾ ವೃದ್ಧರಾಗಿರಲಿ, ದೇಶೀಯರಾಗಿರಲಿ ಅಥವಾ ವಿದೇಶಿಯಾಗಿರಲಿ… ಹಳ್ಳಿಯಾಗಿರಲಿ ಅಥವಾ ನಗರವಾಗಿರಲಿ, ಯಾವುದೇ ಜಾತಿಯಾಗಿರಲಿ, ಯಾವುದೇ ವಿಚಾರಸರಣಿಯವರಾಗಿರಲಿ, ಎಲ್ಲರೂ ಒಂದು ಮಹಾಯಜ್ಞಕ್ಕಾಗಿ ಏಕತೆಯ ಮಹಾ ಕುಂಭದಲ್ಲಿ ಒಟ್ಟುಗೂಡಿದರು. ‘ಒಂದು ಭಾರತ, ಶ್ರೇಷ್ಠ ಭಾರತ’ದ ಈ ಅವಿಸ್ಮರಣೀಯ ದೃಷ್ಟಿಕೋನವು ಕೋಟ್ಯಂತರ ದೇಶವಾಸಿಗಳಲ್ಲಿ ಆತ್ಮವಿಶ್ವಾಸದ ಒಂದು ಭವ್ಯ ಉತ್ಸವವಾಯಿತು. ಈಗ ಈ ರೀತಿಯಲ್ಲಿ ನಮಗೆ ಅಭಿವೃದ್ಧಿ ಹೊಂದಿದ ಭಾರತದ ಮಹಾನ್ ಉದ್ದೇಶಕ್ಕಾಗಿ ಒಗ್ಗೂಡಬೇಕಾಗಿದೆ ಮತ್ತು ಒಂದಾಗಬೇಕಾಗಿದೆ, ಎಂದು ಹೇಳಿದರು.