ಮಹಾಕುಂಭ ಮೇಳ ಮುಗಿಯುತ್ತಿದ್ದಂತೆ ವಾತಾವರಣವನ್ನು ಕೆಡಿಸುವ ಪ್ರಯತ್ನ!
ಪ್ರಯಾಗರಾಜ (ಉತ್ತರ ಪ್ರದೇಶ) – ಮಹಾಕುಂಭ ಮೇಳದ ಮುಕ್ತಾಯದ 48 ಗಂಟೆಗಳ ಒಳಗೆ ನಗರದ ದರಿಯಾಬಾದ ಪೊಲೀಸ್ ಠಾಣೆಯ ಹತ್ತಿರ ಹಿಂದೂಗಳ ಮನೆಗಳ ಮುಂದಿನ ರಸ್ತೆ ಮತ್ತು ನಾಲೆಯಲ್ಲಿ ಕರುವಿನ ತಲೆ ಮತ್ತು ಕಾಲುಗಳನ್ನು ಎಸೆದಿರುವುದು ಕಂಡುಬಂದಿದೆ. ಇದನ್ನು ನೋಡಿದ ಸ್ಥಳೀಯ ಹಿಂದೂಗಳು ಆಕ್ರೋಶಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸಿದ್ದಾರೆ. ಪೊಲೀಸ್ ಅಧಿಕಾರಿ ಸಂಜಯ್ ದ್ವಿವೇದಿ ಮಾತನಾಡಿ, ಯಾರೋ ಉದ್ದೇಶಪೂರ್ವಕವಾಗಿ ವಾತಾವರಣ ಹಾಳು ಮಾಡಲು ಮಾಡಿದ್ದಾರೆ, ಎಂದು ತಿಳಿಸಿದ್ದಾರೆ.
ಮುಸ್ಲಿಮರಿಂದ ಕೃತ್ಯದ ಶಂಕೆ! – ಪೊಲೀಸ್
ಪೊಲೀಸರು ದಾಖಲಿಸಿದ ಪ್ರಕರಣದಲ್ಲಿ, ಹಿಂದೂಗಳ ಮನೆಗಳ ಮೇಲೆ ಗುರುತು ಮಾಡಲಾಗಿತ್ತು ಮತ್ತು ಹಸುವಿನ ಅವಶೇಷಗಳನ್ನು ಉದ್ದೇಶಪೂರ್ವಕವಾಗಿ ಅಲ್ಲಿ ಇಡಲಾಗಿತ್ತು. ಈ ಘಟನೆ ನಡೆದ ಪ್ರದೇಶದಲ್ಲಿ ಮುಸಲ್ಮಾನರ ವಸತಿ ಇರುವುದರಿಂದ, ಈ ಕೃತ್ಯವನ್ನು ಮುಸಲ್ಮಾನರಲ್ಲಿನ ಯಾರಾದರೂ ಅರಾಜಕತಾವಾದಿ ಗುಂಪಿನವರು ಮಾಡಿರಬಹುದು, ಎಂದು ತಿಳಿಸಲಾಗಿದೆ.
ಕಳೆದ 5 ತಿಂಗಳಲ್ಲಿ ಇದು ಮೂರನೇ ಘಟನೆ
ಸ್ಥಳೀಯ ಹಿಂದೂಗಳ ಪ್ರಕಾರ, ಇಂತಹ ಘಟನೆಗಳು ಈ ಹಿಂದೆಯೂ ನಡೆದಿವೆ. ಕಳೆದ 5 ತಿಂಗಳಲ್ಲಿ ಇದು ಮೂರನೇ ಘಟನೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗುತ್ತಿದೆ; ಆದರೆ ಹಸುವಿನ ತಲೆ ಮತ್ತು ಕಾಲುಗಳನ್ನು ಕತ್ತರಿಸಿ ಎಸೆದವರನ್ನು ಇಲ್ಲಿಯವರೆಗೆ ಬಂಧಿಸಲಾಗಿಲ್ಲ. ಪೊಲೀಸರು ತಕ್ಷಣವೇ ಕ್ರಮ ಕೈಗೊಳ್ಳಬೇಕು. (3 ಘಟನೆಗಳು ನಡೆಯುವವರೆಗೂ ಕ್ರಮ ಕೈಗೊಳ್ಳದ ಪೊಲೀಸರು ಉತ್ತರಪ್ರದೇಶದವರಾಗಿದ್ದಾರೆ, ಇದನ್ನು ಹಿಂದೂಗಳು ಅಪೇಕ್ಷಿಸುವುದಿಲ್ಲ! – ಸಂಪಾದಕರು)
ಸಂಪಾದಕೀಯ ನಿಲುವುಗೋವುಗಳನ್ನು ಯಾರು ಹತ್ಯೆ ಮಾಡುತ್ತಾರೆ ಎನ್ನುವುದು ಸ್ಪಷ್ಟವಾಗಿದೆ. ಆದ್ದರಿಂದ ಹಿಂದೂಗಳನ್ನು ಕೆಣಕುವ ಈ ರೀತಿಯ ಕೃತ್ಯ ಎಸಗುವವರಿಗೆ ಕಠಿಣ ಶಿಕ್ಷೆ ನೀಡದ ಹೊರತು ಇದು ನಿಲ್ಲುವುದಿಲ್ಲ ! |