ಶಿವಆರಾಧನೆ

‘ಶಿವ ಅಂದರೆ ಕಲ್ಯಾಣ (ಉದ್ಧಾರ) ಮಾಡುವ, ಶುಭಂಕರ. ಅವನು ಸಂಪೂರ್ಣ ಸೃಷ್ಟಿಯ ಲಯಕರ್ತನೆಂದು ಕೂಡ ತಿಳಿಯಲಾಗುತ್ತದೆ. ಲಯವೆಂದರೆ ಕೊನೆ ಅಥವಾ ಅಂತ್ಯಗೊಳಿಸುವವನು, ನಾಶಗೊಳಿಸುವನು; ಆದರೆ ‘ಲಯ ಈ ಶಬ್ದದ ಅರ್ಥ ‘ಜೀವನವನ್ನು ಲಯಬದ್ಧವಾಗಿ ರಚಿಸುವವನು ಎಂದು ಕೂಡ ಏಕೆ ತಿಳಿದುಕೊಳ್ಳಬಾರದು ?

ಎಲ್ಲರ ದೇವರಾಗಿರುವ ಮತ್ತು ಕಲ್ಯಾಣಕಾರಿ ಶಿವ !

ಯೋಗಶಾಸ್ತ್ರ, ಧನುರ್ವಿದ್ಯೆ ಮತ್ತು ೬೪ ಕಲೆಗಳ ನಿರ್ಮಾಪಕ, ನಮ್ಮೆಲ್ಲರ ಹಾಗೆ ಪ್ರಾಪಂಚಿಕ, ಲೋಕಾಭಿಮುಖ, ಬೇಗನೆ ಒಲಿಯುವ, ಎಷ್ಟು ದಯಾಳು ಅಷ್ಟೇ ಕ್ರೋಧಿ, ಎಲ್ಲರನ್ನೂ ಯಾವಾಗಲೂ ಜೊತೆಗೆ ಕರೆದುಕೊಂಡು ಹೋಗುವ, ಆದರೂ ಏಕಾಂತಪ್ರಿಯ, ಎಲ್ಲೆಡೆ ಹೆಚ್ಚೆಚ್ಚು ಸಂಖ್ಯೆಯಲ್ಲಿ ದೇವಸ್ಥಾನಗಳು ಕಂಡುಬರುವ ಈ ದೇವರು ಅತ್ಯಂತ ಜಾಗೃತ ದೇವರಾಗಿದ್ದಾರೆ.

ಯಾವುದನ್ನು ಭಸ್ಮವೆಂದು ಉಪಯೋಗಿಸುತ್ತಾರೆ ?

ಗೋಮಯ ದ್ರವ್ಯವನ್ನು (ಹಸುವಿನ ಸಗಣಿ) ಅಗ್ನಿಯಲ್ಲಿ ಹಾಕಿ ತಯಾರಿಸಿದ ಭಸ್ಮ : ಶಿವನಿಗೆ ಚಿತಾಭಸ್ಮವು ಅತ್ಯಂತ ಪ್ರಿಯವಾಗಿದೆ ಆದರೆ, ಸಾಮಾನ್ಯ ವ್ಯಕ್ತಿಗಳಿಗೆ ಚಿತಾಭಸ್ಮವನ್ನು ಸಹಿಸಲಾಗುವುದಿಲ್ಲ. ಆದುದರಿಂದ ಈ ಭಸ್ಮವನ್ನು ಉಪಯೋಗಿಸುತ್ತಾರೆ.

ರುದ್ರಾಕ್ಷಿಧಾರಣೆ :

ಶಿವನ ಪೂಜೆಯನ್ನು ಮಾಡುವಾಗ ಕೊರಳಿನಲ್ಲಿ ರುದ್ರಾಕ್ಷಿ ಮಾಲೆಯನ್ನು ಅವಶ್ಯವಾಗಿ ಹಾಕಿಕೊಳ್ಳಬೇಕು. ನಾಥ ಸಂಪ್ರದಾಯ ಹಾಗೂ ವಾಮ ಸಂಪ್ರದಾಯದವರು ಮತ್ತು ಕಾಪಾಲಿಕರು ರುದ್ರಾಕ್ಷಿಯ ಮಾಲೆಯನ್ನು ವಿಶೇಷವಾಗಿ ಉಪಯೋಗಿಸುತ್ತಾರೆ. ಯೋಗಿಗಳೂ ರುದ್ರಾಕ್ಷಿಯ ಮಾಲೆಯನ್ನು ಧರಿಸುತ್ತಾರೆ.

ಆಧ್ಯಾತ್ಮಿಕ ವೈಶಿಷ್ಟ್ಯಗಳು

ಶಿವನೊಬ್ಬನೇ ಸತತ ನಾಮಸ್ಮರಣೆಯನ್ನು ಮಾಡುವ ದೇವನಾಗಿದ್ದಾನೆ. ಶಿವನು ಯಾವಾಗಲೂ ಬಂಧ-ಮುದ್ರೆಗಳನ್ನು ಮಾಡಿ ಆಸನಸ್ಥನಾಗಿರುತ್ತಾನೆ. ಬಹಳಷ್ಟು ತಪಶ್ಚರ್ಯವನ್ನು ಮಾಡುವುದರಿಂದ ಹೆಚ್ಚಾದ ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳಲು ಶಿವನು ಗಂಗೆ, ಚಂದ್ರ, ಸರ್ಪ ಮುಂತಾದ ಶೀತಲತೆಯನ್ನು ಕೊಡುವ ವಸ್ತುಗಳನ್ನು ಉಪಯೋಗಿಸುತ್ತಾನೆ ಮತ್ತು ಹಿಮಭರಿತ ಕೈಲಾಸ ಪರ್ವತದಲ್ಲಿ ವಾಸಿಸುತ್ತಾನೆ.

ಬಿಳಿ ಹೂವು ಮತ್ತು ಧಾನ್ಯ

ಶಿವನಿಗೆ ಅಕ್ಕಿ (ಬಿಳಿಯ ಬಣ್ಣ), ಕೆಲವೊಮ್ಮೆ ಗೋಧಿ ಮತ್ತು ಬಿಳಿ ಹೂವುಗಳನ್ನು ಅರ್ಪಿಸುತ್ತಾರೆ. ಬಿಳಿಬಣ್ಣವು ಪಾವಿತ್ರ್ಯದ ಲಕ್ಷಣವಾಗಿದೆ. ಹೂವುಗಳನ್ನು ಅರ್ಪಿಸಿದ ನಂತರ ತೊಟ್ಟನ್ನು ನಮ್ಮ ಕಡೆಗೆ ಮಾಡಿ ಬಿಲ್ವಪತ್ರೆಯನ್ನು ಅರ್ಪಿಸುತ್ತಾರೆ.

ಮಹಾಶಿವರಾತ್ರಿ ಮಾಘ ಕೃಷ್ಣ ಪಕ್ಷ ಚತುರ್ದಶಿ (೪.೩.೨೦೧೯)

ಮಹಾಶಿವರಾತ್ರಿಯ ದಿನ ಶಿವತತ್ತ್ವವು ಎಂದಿಗಿಂತ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಶಿವತತ್ತ್ವದ ಲಾಭವು ಹೆಚ್ಚು ಪ್ರಮಾಣದಲ್ಲಿ ಸಿಗಲು ಮಹಾಶಿವರಾತ್ರಿಯ ದಿನ ಭಾವಪೂರ್ಣವಾಗಿ ಶಿವನ ಪೂಜೆ-ಅರ್ಚನೆಯನ್ನು ಮಾಡಬೇಕು

ಶಿವೋಪಾಸನೆಯ ವೈಶಿಷ್ಟ್ಯಗಳು ಮತ್ತು ಶಾಸ್ತ್ರ

ಶಿವನ ಪೂಜೆಯನ್ನು ಮಾಡುವಾಗ ಅವನ ತಾರಕ ತತ್ತ್ವ ಅಧಿಕ ಪ್ರಮಾಣದಲ್ಲಿ ಆಕರ್ಷಿಸಲು ಕೇದಗೆ ಅಥವಾ ಚಮೇಲಿ, ಇದರಲ್ಲಿ ಯಾವುದಾದರೂ ಗಂಧದ ಊದುಬತ್ತಿಯನ್ನು ಉಪಯೋಗಿಸಬೇಕು, ಹಾಗೆಯೇ ಶಿವನ ಮಾರಕ ತತ್ತ್ವವನ್ನು ಅಧಿಕ ಪ್ರಮಾಣದಲ್ಲಿ ಆಕರ್ಷಿಸಲು ಹೀನಾ ಅಥವಾ ದರಬಾರ ಈ ಗಂಧದ ಊದುಬತ್ತಿಗಳನ್ನು ಉಪಯೋಗಿಸಬೇಕು.

ಸಾಧಕರೇ, ಮಹಾಶಿವರಾತ್ರಿಯ ಕಾಲಾವಧಿಯಲ್ಲಿ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯನ್ನು ಭಾವಪೂರ್ಣ ಮತ್ತು ಪರಿಪೂರ್ಣವಾಗಿ ಮಾಡಿ ಭಗವಾನ ಶಿವನ ಕೃಪೆಯನ್ನು ಸಂಪಾದಿಸಿ !

‘ಚರಾಚರದಲ್ಲಿ ವ್ಯಾಪಿಸಿರುವ ಈಶ್ವರನು ಸತತವಾಗಿ ನಮ್ಮೊಂದಿಗಿರುತ್ತಾನೆ, ಎಂದು ನಮಗೆ ಅರಿವಾಗಲು ಮತ್ತು ಅದರ ಲಾಭವಾಗಲು ವಿವಿಧ ಹಬ್ಬ ಮತ್ತು ಉತ್ಸವಗಳ ಮಾಧ್ಯಮದಿಂದ ವಿವಿಧ ತತ್ತ್ವಗಳು ಸಾವಿರಾರು ಪಟ್ಟುಗಳಷ್ಟು ಅಧಿಕ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತವೆ.

ಶಿವತತ್ತ್ವವನ್ನು ಆಕರ್ಷಿಸುವ ಸಾತ್ತ್ವಿಕ ರಂಗೋಲಿಗಳು

೧ – ಶಾಂತಿಯ ಅನುಭೂತಿಯನ್ನು ನೀಡುವುದು ೨ – ಶಕ್ತಿಯ ಸ್ವಂದನವನ್ನು ನಿರ್ಮಿಸುವುದು ಮಧ್ಯಚುಕ್ಕೆಯಿಂದ ಅಷ್ಟದಿಕ್ಕುಗಳಿಗೆ ಪ್ರತ್ಯೇಕ ೪ ಚುಕ್ಕೆ (ಆಧಾರ : ಸನಾತನದ ಕಿರುಗ್ರಂಥ ‘ದೇವತೆಗಳ ತತ್ತ್ವ ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ರಂಗೋಲಿಗಳು)

Kannada Weekly | Offline reading | PDF