ಅಯೋಧ್ಯೆ (ಉತ್ತರ ಪ್ರದೇಶ) – ಇಲ್ಲಿನ ಶ್ರೀರಾಮ ಮಂದಿರದ ಮುಖ್ಯ ಶಿಖರಕ್ಕೆ ಏಪ್ರಿಲ್ ೧೪ ರಂದು ಕಲಶವನ್ನು ಸ್ಥಾಪಿಸಲಾಯಿತು. ಮೊದಲಿಗೆ ಕಲಶಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ ವೈದಿಕ ಜಪ ಮತ್ತು ಹವನ-ಪೂಜೆಯೊಂದಿಗೆ ಅದನ್ನು ಮುಖ್ಯ ಶಿಖರದ ಮೇಲೆ ಇರಿಸಲಾಯಿತು. ಮುಂದಿನ ಜೂನ್ ವೇಳೆಗೆ ಶ್ರೀರಾಮ ಮಂದಿರವು ಸಂಪೂರ್ಣವಾಗಿ ನಿರ್ಮಾಣಗೊಂಡು ಸಿದ್ಧವಾಗಲಿದೆ.
ಈಗ ಶ್ರೀರಾಮ ಮಂದಿರದ ರಕ್ಷಣೆಗಾಗಿ ೪ ಕಿ.ಮೀ ಉದ್ದದ ಗೋಡೆಯನ್ನು ನಿರ್ಮಿಸುವ ಕಾರ್ಯ ಪ್ರಾರಂಭವಾಗಲಿದೆ. ಈ ಗೋಡೆಯು ಒಂದೂವರೆ ವರ್ಷದಲ್ಲಿ ಸಿದ್ಧವಾಗಲಿದೆ. ಹಾಗೆಯೇ ೧೦ ಎಕರೆ ಜಾಗದಲ್ಲಿ ಚಪ್ಪಲಿ ಮತ್ತು ಇತರ ವಸ್ತುಗಳನ್ನು ಇಡಲು ವ್ಯವಸ್ಥೆ ಮಾಡಲಾಗುವುದು.