ಮಹಾಕುಂಭದಲ್ಲಿ ಕಾಣೆಯಾಗಿದ್ದ 54,357 ಭಕ್ತರನ್ನು ಅವರ ಕುಟುಂಬಕ್ಕೆ ಸೇರಿಸಿದ ‘ಡಿಜಿಟಲ್ ಖೋಯಾ-ಪಾಯಾ ಕೇಂದ್ರ’ !

ಪ್ರಯಾಗ್ ರಾಜ್ (ಉತ್ತರ ಪ್ರದೇಶ) – 2025 ರ ಪ್ರಯಾಗ್ ರಾಜ್ ಮಹಾಕುಂಭವು ಭವ್ಯ ಮತ್ತು ವೈಭವದಿಂದ ಆಚರಿಸಲಾಯಿತು. 144 ವರ್ಷಗಳ ನಂತರ ನಡೆದ ಈ ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮದಲ್ಲಿ 66 ಕೋಟಿಗೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದರು. ಕುಂಭಮೇಳದ ಆಡಳಿತ ಮಂಡಳಿಯು ಈ ಮಹಾಕಾರ್ಯಕ್ರಮದ ವೇಳೆ ಕಾಣೆಯಾಗಿದ್ದ 54,357 ಭಕ್ತರನ್ನು ಅವರ ಕುಟುಂಬಸ್ಥರೊಂದಿಗೆ ಮರಳಿ ಸೇರಿಸುವಲ್ಲಿ ಯಶಸ್ವಿಯಾಗಿದೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರಕಾರದ ದೂರದೃಷ್ಟಿ ಮತ್ತು ಸಮರ್ಪಿತ ಪ್ರಯತ್ನದಿಂದ ಇದು ಸಾಧ್ಯವಾಗಿದೆ. ಈ ಕಠಿಣ ಕಾರ್ಯದಲ್ಲಿ ರಾಜ್ಯ ಸರಕಾರವು ರಚಿಸಿದ ‘ಡಿಜಿಟಲ್ ಲಾಸ್ಟ್ ಅಂಡ್ ಫೌಂಡ್ ಸೆಂಟರ್’ ಅಂದರೆ ‘ಡಿಜಿಟಲ್ ಖೋಯಾ-ಪಾಯಾ ಕೇಂದ್ರ’ ದ ದೊಡ್ಡ ಕೊಡುಗೆಯಿದೆ.

ಅಂಕಿಅಂಶಗಳು ಈ ರೀತಿ ಇವೆ!

1. ಕಾಣೆಯಾಗಿದ್ದ ಭಕ್ತರು ಒಂದೇ ದಿನದಲ್ಲಿ ಪತ್ತೆಯಾದ ಸಂಖ್ಯೆ : ಕಾಣೆಯಾದ ಒಟ್ಟು 54,357 ಭಕ್ತರ ಪೈಕಿ 35 ಸಾವಿರಕ್ಕೂ ಹೆಚ್ಚು ಭಕ್ತರನ್ನು ಅದೇ ದಿನದಂದು ಕುಟುಂಬಸ್ಥರೊಂದಿಗೆ ಸೇರ್ಪಡೆ ಮಾಡಲಾಗಿದೆ.

2. ಮಕರ ಸಂಕ್ರಾಂತಿಯ ಅಮೃತಸ್ನಾನದ ಯಲ್ಲಿ(ಜನವರಿ 13-15): ಕಾಣೆಯಾಗಿದ್ದ 598 ಜನರು ತಮ್ಮ ಕುಟುಂಬವನ್ನು ಸೇರಿದ್ದಾರೆ.

3. ಮೌನಿ ಅಮವಾಸ್ಯೆಯ ಅವಧಿಯಲ್ಲಿ (ಜನವರಿ 28-30) : 8,725 ಜನರು ಹಾಗೂ

4. ವಸಂತ ಪಂಚಮಿಯ ಅವಧಿಯಲ್ಲಿ (ಫೆಬ್ರವರಿ 2-4) : ಕಾಣೆಯಾಗಿದ್ದ 864 ಜನರು ವಾಪಸ್ ತಮ್ಮ ಕುಟುಂಬವನ್ನು ಸೇರಿದ್ದಾರೆ.

ಸಂಪಾದಕೀಯ ನಿಲುವು

ಈ ಸಾಧನೆಗಾಗಿ ಯೋಗಿ ಆದಿತ್ಯನಾಥ್ ಸರಕಾರಕ್ಕೆ ಅಭಿನಂದನೆಗಳು! ‘ಗಂಗಾನದಿ ಅಶುದ್ಧವಾಗಿತ್ತು’, ‘ಕುಂಭಮೇಳದಲ್ಲಿ ಕಾಲ್ತುಳಿತ ಸಂಭವಿಸಿದವು’, ಎಂದು ಹೇಳಿ ಉತ್ತರ ಪ್ರದೇಶ ಸರಕಾರವನ್ನು ಟೀಕಿಸುವವರು ಈಗ ಅವರ ಈ ಸಾಧನೆಯ ಬಗ್ಗೆ ಮಾತನಾಡುತ್ತಿಲ್ಲ ಏಕೆ ?