ಮಹಾರಾಷ್ಟ್ರ ನವನಿರ್ಮಾಣ ಸೇನೆ (ಮನಸೆ) ಅಧ್ಯಕ್ಷ ರಾಜ್ ಠಾಕ್ರೆ ಅವರಿಂದ ಪವಿತ್ರ ಗಂಗಾ ಸ್ನಾನಕ್ಕೆ ಅವಮಾನ!

ಪುಣೆ – ಗಂಗಾ ನದಿ ಸ್ವಚ್ಛವಾಗುತ್ತದೆ ಎಂದು ರಾಜೀವ್ ಗಾಂಧಿ ಕಾಲದಿಂದ ಕೇಳುತ್ತಿದ್ದೇನೆ. ನಮ್ಮ ಪಕ್ಷದ ನಾಯಕ ಬಾಲಾ ನಂದಗಾಂವ್ಕರ್ ಕುಂಭಮೇಳದಿಂದ ನನಗಾಗಿ ಗಂಗಾ ನೀರು ತಂದಿದ್ದರು. “ನಾನು ಅದನ್ನು ಕುಡಿಯುವುದಿಲ್ಲ” ಎಂದು ಅವರಿಗೆ ಹೇಳಿದೆ. ಆ ನದಿಯಲ್ಲಿ ಎಷ್ಟೋ ಜನ ಸ್ನಾನ ಮಾಡುತ್ತಿದ್ದರು. ಅಂತಹ ನೀರನ್ನು ಹೇಗೆ ಕುಡಿಯುವುದು? ದೇಶದಲ್ಲಿ ಒಂದೂ ನದಿ ಸ್ವಚ್ಛವಾಗಿಲ್ಲ. ಇಂತಹ ಪರಿಸ್ಥಿತಿ ಇದೆ ಮತ್ತು ನಾವು ನದಿಯನ್ನು ತಾಯಿ ಎಂದು ಪರಿಗಣಿಸುತ್ತೇವೆ. ಶ್ರದ್ಧೆ ಮತ್ತು ಮೂಢನಂಬಿಕೆಗಳ ನಡುವಿನ ವ್ಯತ್ಯಾಸವನ್ನು ತಿಳಿಯಿರಿ ಎಂದು ಮನಸೆ ಅಧ್ಯಕ್ಷ ರಾಜ್ ಠಾಕ್ರೆ ಹೇಳಿದ್ದಾರೆ. ಇಲ್ಲಿ ಮನಸೆಯ 19 ನೇ ಸಂಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲಿ ಆಯೋಜಿಸಲಾದ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು. ಗಂಗಾ ನದಿಗೆ ಅವಮಾನ ಮಾಡಿದ್ದಕ್ಕಾಗಿ ರಾಜ್ ಠಾಕ್ರೆ ವಿರುದ್ಧ ಎಲ್ಲೆಡೆಯಿಂದ ಟೀಕೆ ವ್ಯಕ್ತವಾಗುತ್ತಿದೆ.

ಗಂಗೆಯನ್ನು ಪರೀಕ್ಷಿಸಬಾರದು! – ಆಚಾರ್ಯ ಮಹಾಮಂಡಲೇಶ್ವರ ಶ್ರೀ ಮಹಂತ ಸುಧೀರದಾಸ್ ಮಹಾರಾಜ, ನಾಸಿಕ

ತೀರ್ಥಗಳನ್ನು ಅಥವಾ ಗಂಗೆಯನ್ನು ಪರೀಕ್ಷಿಸಬಾರದು. ಗಂಗಾ ನದಿಯ ಬಗ್ಗೆ ಇಂತಹ ಮೂರ್ಖತನದ ಟೀಕೆಗಳನ್ನು ಮಾಡಿ ಪ್ರಗತಿಪರರೆಂದು ತೋರಿಸಿಕೊಳ್ಳುವುದು ತಪ್ಪು, ಎಂದು ಹೇಳಿದರು.

ಗಂಗಾ ಸ್ನಾನ ಮಾಡುವುದು ಮೂಢನಂಬಿಕೆ ಅಲ್ಲ! – ಶಾಸಕ ಗಿರೀಶ್ ಮಹಾಜನ್, ಭಾಜಪ

ಕುಂಭಮೇಳದಲ್ಲಿ ಗಂಗಾ ಸ್ನಾನ ಮಾಡುವುದು ಮೂಢನಂಬಿಕೆ ಅಲ್ಲ, ಅದು ಶ್ರದ್ಧೆಯಾಗಿದೆ. ಇದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಇದಕ್ಕೆ ಧಾರ್ಮಿಕ ಹಿನ್ನೆಲೆ ಇದೆ, ಎಂದು ಹೇಳಿದರು.

ರಾಜ್ ಠಾಕ್ರೆ ಅವರಿಂದ ಭಕ್ತರ ಶ್ರದ್ಧೆಯ ಅವಮಾನ! – ಪ್ರವೀಣ್ ದರೆಕರ್, ಭಾಜಪ

ರಾಜ್ ಠಾಕ್ರೆ ಹೇಳಿಕೆ ಭಕ್ತರಿಗೆ ಅವಮಾನ ಮಾಡುವಂತಿದೆ. ಹಿಂದೂಗಳು ದೇವರುಗಳಲ್ಲಿ ಶ್ರದ್ಧೆ ಇಟ್ಟಿದ್ದಾರೆ, ಆದ್ದರಿಂದ ನಾವು ಕಲ್ಲಿನನ್ನೂ ದೇವರೆಂದು ಪರಿಗಣಿಸುತ್ತೇವೆ. ಆದ್ದರಿಂದ ಇತರರ ಶ್ರದ್ಧೆಗಳಿಗೆ ಅವಮಾನ ಮಾಡಬಾರದು, ಎಂದು ಹೇಳಿದರು.

ಪ್ರತಿಯೊಬ್ಬರ ಶ್ರದ್ಧೆಯನ್ನು ಗೌರವಿಸಬೇಕು! – ಶಾಸಕ ರಾಮ ಕದಂ, ಭಾಜಪ

ಆರೋಪ ಮಾಡುವ ಮೊದಲು ರಾಜ ಠಾಕ್ರೆ ಯೋಚಿಸಬೇಕು. ಮನೆಯಲ್ಲಿ ಕುಳಿತು ಹೀಗೆ ಹೇಳುವುದು ತಪ್ಪು. ಪ್ರತಿಯೊಬ್ಬರ ಶ್ರದ್ಧೆಯನ್ನು ಗೌರವಿಸಬೇಕು, ಎಂದು ಹೇಳಿದರು.

ಸಂಪಾದಕೀಯ ನಿಲುವು

ಗಂಗಾ ಸ್ನಾನಕ್ಕೆ ಹಿಂದೂ ಧರ್ಮದಲ್ಲಿ ಅನನ್ಯ ಮಹತ್ವವಿದೆ. ಹೀಗಿರುವಾಗ ರಾಜ್ ಠಾಕ್ರೆ ನೀಡಿರುವ ಹೇಳಿಕೆಯಿಂದ ಕೋಟ್ಯಂತರ ಹಿಂದೂ ಧರ್ಮೀಯರ ಭಾವನೆಗಳಿಗೆ ಧಕ್ಕೆಯಾಗಿದೆ!