Yogi Message in Kumbh : ಮಹಾಕುಂಭ ಮೇಳದಿಂದ ರಾಷ್ಟ್ರೀಯ ಏಕತೆಯ ಸಂದೇಶ ! – ಯೋಗಿ ಆದಿತ್ಯನಾಥ್

ಮಹಾಕುಂಭ ಮೇಳದ ಸಮಾರೋಪದ ಸಂದರ್ಭದಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಪ್ರಯಾಗರಾಜ್‌ನಲ್ಲಿ ಇನ್ನೂ ಅಪಾರ ಜನಸಂದಣಿ ಇದೆ. ಜನವರಿ 13 ರಿಂದ ಮಹಾಶಿವರಾತ್ರಿಯ ದಿನ ಮಹಾಕುಂಭ ಮೇಳ ಮುಗಿಯುವವರೆಗೆ 66 ಕೋಟಿ ಭಕ್ತರು ಗಂಗಾ, ಯಮುನಾ ಮತ್ತು ಸರಸ್ವತಿ ತ್ರಿವೇಣಿಯಲ್ಲಿ ಸ್ನಾನ ಮಾಡಿದ್ದಾರೆ. ಇಷ್ಟು ದೊಡ್ಡ ಸಂಖ್ಯೆಯ ಭಕ್ತರು ಪ್ರಯಾಗರಾಜ್‌ನಲ್ಲಿ ಸ್ನಾನ ಮಾಡುವ ಮೂಲಕ ರಾಷ್ಟ್ರೀಯ ಏಕತೆಯ ಸಂದೇಶ ನೀಡಿದ್ದಾರೆ. ಪ್ರಯಾಗರಾಜ್‌ಗೆ ಬಂದ ಪ್ರತಿಯೊಬ್ಬ ಭಕ್ತನಿಗೂ ‘ವಸುದೈವ ಕುಟುಂಬಕಂ’ ಭಾವನೆ ಇತ್ತು. ಈ ಎಲ್ಲಾ ಭಕ್ತರನ್ನು ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ. ಮಹಾದೇವನು ಕಲ್ಯಾಣದ ದೇವರು. ಅವರ ಕೃಪಾಕಟಾಕ್ಷದಿಂದ ಎಲ್ಲಾ ವ್ಯವಸ್ಥೆಗಳು ನಡೆಯುತ್ತವೆ. ಮಹಾಶಿವರಾತ್ರಿಯ ಸಂದರ್ಭದಲ್ಲಿ ಉತ್ತರಪ್ರದೇಶದ ಎಲ್ಲಾ ಶಿವಾಲಯಗಳಲ್ಲಿ ಭಕ್ತರ ದೊಡ್ಡ ಜನಸಂದಣಿ ಇದೆ. ಕಾಶಿಯಲ್ಲಿ ನಿತ್ಯ 8-10 ಲಕ್ಷ ಭಕ್ತರು ಬಾಬಾ ವಿಶ್ವನಾಥನ ದರ್ಶನಕ್ಕೆ ಬರುತ್ತಿದ್ದಾರೆ. ಅಯೋಧ್ಯೆಯಲ್ಲಿಯೂ ಪ್ರಭು ರಾಮಲಲ್ಲಾನ ದರ್ಶನಕ್ಕೆ ನಿತ್ಯ 8-10 ಲಕ್ಷ ಭಕ್ತರು ಬರುತ್ತಿದ್ದಾರೆ. ಈ ಎಲ್ಲಾ ಭಕ್ತರ ಶ್ರದ್ಧೆಗೆ ನಾನು ನಮಿಸುತ್ತೇನೆ’, ಎಂದು ಹೇಳಿದರು.