ಪ್ರಯಾಗರಾಜ ಕುಂಭಮೇಳ 2025

ಪ್ರಯಾಗರಾಜ – ತೀರ್ಥರಾಜ ಪ್ರಯಾಗರಾಜನಲ್ಲಿ ಫೆಬ್ರವರಿ 26 ರಂದು ಮಹಾಕುಂಭಮೇಳಕ್ಕೆ ಮುಕ್ತಾಯಗೊಂಡಿತು. ಜನವರಿ 13 ರಿಂದ ಫೆಬ್ರವರಿ 26 ರವರೆಗೆ ನಡೆದ ಈ ಉತ್ಸವದಲ್ಲಿ, 65 ಕೋಟಿಗೂ ಹೆಚ್ಚು ಭಕ್ತರು ತ್ರಿವೇಣಿ ಸಂಗಮ ಮತ್ತು ಗಂಗಾ ನದಿಯಲ್ಲಿ ಅಪಾರ ಭಕ್ತಿಯಿಂದ ಸ್ನಾನ ಮಾಡಿದರು. ಇಲ್ಲಿಯವರೆಗಿನ ಕುಂಭಮೇಳಗಳಲ್ಲಿ ಬಂದಿರುವ ಭಕ್ತರ ಸಂಖ್ಯೆಯ ಎಲ್ಲಾ ದಾಖಲೆಗಳನ್ನು ಈ ಮಹಾಕುಂಭ ಮೇಳವು ಮುರಿದಿದೆ, ಬಹುತೇಕವಾಗಿ ಇದು ಪ್ರಯಾಗ್ರಾಜ್‌ನಲ್ಲಿ ನಡೆದ ಇದು ಅತಿದೊಡ್ಡ ಧಾರ್ಮಿಕ ಉತ್ಸವವಾಗಿದೆ.

ಫೆಬ್ರವರಿ 26 ರಂದು ಒಂದೇ ದಿನ ಸಂಜೆ 4 ಗಂಟೆ ವರೆಗೆ 1 ಕೋಟಿ 32 ಲಕ್ಷ ಭಕ್ತರು ಕುಂಭಸ್ನಾನವನ್ನು ಮಾಡಿದ್ದರು. ಉತ್ತರ ಪ್ರದೇಶ ಸರಕಾರ ಈ ಮಹಾಕುಂಭ ಉತ್ಸವವನ್ನು ‘ದೈವಿಕ-ಭವ್ಯ-ಡಿಜಿಟಲ್ ಮಹಾಕುಂಭ’ ಎಂದು ಜಾಹೀರಾತು ಮಾಡಿತ್ತು. ೧೪೪ ವರ್ಷಗಳ ನಂತರ ಬಂದ ಈ ಮಹಾ ಉತ್ಸವದಲ್ಲಿ ೪೦ ರಿಂದ ೪೫ ಕೋಟಿ ಭಕ್ತರು ಭಾಗವಹಿಸುತ್ತಾರೆ ಎಂದು ಸರಕಾರ ಅಂದಾಜಿಸಿತ್ತು; ಆದರೆ, ಮಹಾಕುಂಭ ಮೇಳಕ್ಕೆ ಭಕ್ತರಿಂದ ಅದಕ್ಕಿಂತ ಹೆಚ್ಚಿನ ಪ್ರತಿಕ್ರಿಯೆ ಸಿಕ್ಕಿತು. ಅಮೃತ ಸ್ನಾನದ ದಿನವಾದ ಮೌನಿ ಅಮವಾಸ್ಯೆಯಂದು ಸಂಭವಿಸಿದ ಭೀಕರ ಅಪಘಾತದಲ್ಲಿ ಕೆಲವು ಭಕ್ತರು ಸಾವನ್ನಪ್ಪಿದರು. ಈ ದುರಂತದ ನಂತರ ಭಕ್ತರ ಹರಿವು ಕಡಿಮೆಯಾಗುತ್ತದೆ ಎಂದು ಊಹಿಸಲಾಗಿತ್ತು; ಆದರೆ ಅದಾದ ನಂತರವೂ ಕೋಟ್ಯಂತರ ಭಕ್ತರು ಸಂಗಮಕ್ಕೆ ಬಂದು ಸ್ನಾನ ಮಾಡಿದರು.
ಎಲ್ಲಾ ವರ್ಗದ ಗಣ್ಯರಿಂದ ಸ್ನಾನ!

ಧಾರ್ಮಿಕ ಕ್ಷೇತ್ರ ಸೇರಿದಂತೆ, ರಾಜಕಾರಣಿಗಳು, ನಟರು, ಕ್ರೀಡೆ, ಕಲೆ, ವಿಜ್ಞಾನ, ಕೈಗಾರಿಕೆ ಇತ್ಯಾದಿ ಕ್ಷೇತ್ರಗಳ ವಿವಿಧ ಗಣ್ಯರು ಸಂಗಮಸ್ನಾನ ಮಾಡಿದರು. ಆಡಳಿತ ಮತ್ತು ವಿರೋಧ ಪಕ್ಷಗಳ ಎಲ್ಲಾ ರಾಜಕೀಯ ನಾಯಕರು ಸ್ನಾನ ಮಾಡಲು ಮಹಾ ಕುಂಭ ಮೇಳಕ್ಕೆ ಬಂದಿದ್ದರು.
‘ಹಿಂದೂ ರಾಷ್ಟ್ರ ಸ್ಥಾಪನೆ’ ಘೋಷಣೆ ಕೇಂದ್ರಬಿಂದುವಾಯಿತು!

ಮಹಾಕುಂಭ ಮೇಳದಲ್ಲಿ ಎಲ್ಲಾ ಸಂತರು, ಮಹಂತರು, ಅಖಾಡಗಳು ಮತ್ತು ಆಧ್ಯಾತ್ಮಿಕ ಸಂಸ್ಥೆಗಳು ‘ಭಾರತ ಹಿಂದೂ ರಾಷ್ಟ್ರವಾಗಬೇಕು’ ಎಂದು ಮಾಡಿದ ಘೋಷಣೆಯು ಇಡೀ ಮಹಾಕುಂಭ ಮೇಳದ ಕೇಂದ್ರಬಿಂದುವಾಯಿತು. ಪಾದಯಾತ್ರೆಗಳು, ಧರ್ಮ ಸಂಸತ್ತು, ಫಲಕಗಳು, ಯಜ್ಞ-ಯಾಗಗಳು, ಸಹಿ ಅಭಿಯಾನಗಳು, ಮುಂತಾದ ವಿವಿಧ ವಿಧಾನಗಳ ಮೂಲಕ ಮಹಾಕುಂಭ ಮೇಳದ ಸಮಯದಲ್ಲಿ ಹಿಂದೂ ರಾಷ್ಟ್ರದ ಘೋಷಣೆಯಾಯಿತು.
ಕುಂಭಮೇಳದ ಆಕರ್ಷಣೆಗಳು!
1. ಕುಂಭಮೇಳದ ನಂತರ, ಕಾಶಿ, ಅಯೋಧ್ಯೆ ಮತ್ತು ಮಥುರಾದಂತಹ ಧಾರ್ಮಿಕ ಸ್ಥಳಗಳಿಗೆ ಕೊಟ್ಯಾಂತರ ಭಕ್ತರ ಸಂಖ್ಯೆಯಲ್ಲಿ ಏರಿಕೆ.
2. ಮಹಾಕುಂಭ ಮೇಳದಲ್ಲಿ ಸಂಚಾರ ದಟ್ಟಣೆಯ ವಿಷಯದ ಬಗ್ಗೆ ಹೆಚ್ಚಿನ ಚರ್ಚೆ ನಡೆಯಿತು.
3. ಮಹಾ ಕುಂಭ ಮೇಳದಲ್ಲಿ ಹಿಂದೂ ವಿರೋಧಿ ಶಕ್ತಿಗಳು ಅಶುಚಿತ್ವ ಮತ್ತು ಅಶ್ಲೀಲತೆಯ ಬಗ್ಗೆ ಸಾಮಾಜಿಕ ಮಾಧ್ಯಮಗಳ ಮೂಲಕ ತಪ್ಪು ಮಾಹಿತಿಯನ್ನು ಹರಡಲು ಪ್ರಯತ್ನಿಸಿದವು; ಆದರೆ ಅದಕ್ಕೆ ಎಲ್ಲ ಸ್ತರಗಳಿಂದಲೂ ಭಕ್ತರು ಬಲವಾದ ಪ್ರತಿಕ್ರಿಯೆಯನ್ನು ನೀಡಿದರು. ಆದ್ದರಿಂದ, ಮಹಾಕುಂಭ ಮೇಳದ ಮಾನಹಾನಿ ಮಾಡುವ ಪಿತೂರಿ ವಿಫಲವಾಯಿತು.
4. ಕೆಲವು ಮಾಧ್ಯಮಗಳು ಮಹಾಕುಂಭ ಮೇಳದ ಧಾರ್ಮಿಕ ಉತ್ಸಾಹವನ್ನು ಪ್ರದರ್ಶಿಸುವ ಬದಲು, ಪ್ರಚಾರಕ್ಕೆ ಹಾತೊರೆಯುತ್ತಿದ್ದ ವ್ಯಕ್ತಿಗಳ ಬಗ್ಗೆ ನಿರಂತರವಾಗಿ ವರದಿ ಮಾಡುವ ಮೂಲಕ ಮಹಾಕುಂಭ ಮೇಳದ ಅಪಖ್ಯಾತಿ ಮಾಡಲು ಪ್ರಯತ್ನಿಸಿದವು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ