|
ಪ್ರಯಾಗರಾಜ (ಉತ್ತರಪ್ರದೇಶ) – ಇಲ್ಲಿ ಪ್ರತಿವರ್ಷ ಡಿಸೆಂಬರ್ ಕೊನೆಯಲ್ಲಿ ರಷ್ಯಾ, ಸೈಬೇರಿಯ ಮತ್ತು ಪೋಲೆಂಡ್ ಇವುಗಳಂತಹ ಶೀತ ಪ್ರದೇಶದಿಂದ ಸಾವಿರಾರು ವಿದೇಶಿ ಪಕ್ಷಿಗಳು ಪ್ರಯಾಗರಾಜದಲ್ಲಿನ ಪವಿತ್ರ ತ್ರಿವೇಣಿ ಸಂಗಮ ಪರಿಸರಕ್ಕೆ ಬರುತ್ತವೆ. ಸಾಮಾನ್ಯವಾಗಿ ಫೆಬ್ರುವರಿಯ ಕೊನೆಗೆ ಹೊರಟು ಹೋಗುವ ಈ ಪಕ್ಷಿಗಳು ಈಗ ಮಾರ್ಚ್ ೧೩ ರ ವರೆಗೆ ಸಂಗಮ ದಡದಲ್ಲಿಯೇ ಉಳಿದುಕೊಂಡಿವೆ. ಮಹಾಕುಂಭ ಮೇಳದ ಸಮಾಪ್ತಿಯ ೧೫ ದಿನಗಳ ನಂತರ ಕೂಡ ಸಂಗಮ ದಡದಲ್ಲಿ ಭಾರಿ ಸಂಖ್ಯೆಯಲ್ಲಿ ವಿದೇಶಿ ಪಕ್ಷಿಗಳ ಇರುವೆಕೆಯಿಂದ ವಿಜ್ಞಾನಿಗಳು ಆಶ್ಚರ್ಯ ಚಕಿತರಾಗಿದ್ದಾರೆ. ಪಕ್ಷಿತಜ್ಞರು ಮತ್ತು ಜೀವವಿಜ್ಞಾನಿಗಳಿಗೆ, ಸಂಗಮದ ನೀರು ಮತ್ತು ಗಾಳಿಯಲ್ಲಿನ ಶುದ್ಧತೆಗೆ ಇದು ಸಾಕ್ಷಿ ಆಗಿದೆ, ಎಂಬ ನಂಬಿಕೆ ಇದೆ. ವಿದೇಶಿ ಪಕ್ಷಿಗಳು ದೀರ್ಘಕಾಲ ಇರುವುದು, ಇದು ವಾತಾವರಣದ ಶುದ್ಧತೆಯ ಲಕ್ಷಣವಾಗಿದೆ.
ಪಕ್ಷಿತಜ್ಞ ಪ್ರಾ. ಸಂದೀಪ ಮಲ್ಹೋತ್ರ ಇವರು, ಲಾರಸ್ ರಿಡಿಬುಂಡಾಸ್ ಪ್ರಜಾತಿಯ ಈ ವಿದೇಶಿ ಪಕ್ಷಿಗಳ ಇರುವಿಕೆ, ಇದು ಜಲಮಾಲಿನ್ಯ ಮುಕ್ತ ಮತ್ತು ಸ್ವಚ್ಛವಾದ ಗಾಳಿ ಇರುವದರ ಸೂಚಕ ಎಂದು ತಿಳಿಯಲಾಗಿದೆ. ಯಾವಾಗ ನೀರಿನಲ್ಲಿರುವ ಜಲಚರ ಸುರಕ್ಷಿತವಾಗಿರುತ್ತವೆ ಮತ್ತು ವಾತಾವರಣ ಅನುಕೂಲವಾಗಿರುತ್ತದೆ, ಆಗಲೇ ಈ ಪಕ್ಷಿಗಳು ನೈಸರ್ಗಿಕವಾಗಿ ಉಳಿಯುತ್ತವೆ. ಮಹಾಕುಂಭ ಮೇಳದ ಸಮಯದಲ್ಲಿ ಗಂಗಾ ನದಿಯ ನೀರು ಸ್ವಚ್ಛ ಇಡುವುದಕ್ಕಾಗಿ ಮಾಡಿರುವ ಪ್ರಯತ್ನ ಯಶಸ್ವಿ ಆಗಿದೆ, ಇದು ಅವುಗಳ ದೀರ್ಘಕಾಲದ ಉಪಸ್ಥಿತಿಯಿಂದ ಕಂಡು ಬರುತ್ತದೆ, ಎಂದು ಹೇಳಿದ್ದಾರೆ.
ಗಂಗಾ ನದಿಯಲ್ಲಿ ಡಾಲ್ಫಿನ್‌ಗಳ ಸಂಖ್ಯೆಯಲ್ಲಿ ಹೆಚ್ಚಳ !
ಉತ್ತರಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯಿಂದ ಸಂಗಮ ಪರಿಸರದಲ್ಲಿನ ನೀರು ಮತ್ತು ಗಾಳಿ ಹಿಂದಿನಗಿಂತಲೂ ಬಹಳ ಶುದ್ಧವಾಗಿರುವುದು ಸಿದ್ಧವಾಗುತ್ತದೆ. ಗಂಗಾನದಿಯಲ್ಲಿ ಡಾಲ್ಫಿನ್‌ಗಳ ಹೆಚ್ಚುತ್ತಿರುವ ಸಂಖ್ಯೆ, ಈ ನೀರಿನ ಸ್ವಚ್ಛತೆಯ ಸಾಕ್ಷಿ ಆಗಿದೆ. ಅಂತರಾಷ್ಟ್ರೀಯ ವನ್ಯಜೀವಿ ದಿನದ ಪ್ರಯುಕ್ತ (ಮಾರ್ಚ್ ೩,೨೦೨೫) ಪರಿಸರ ಸಚಿವಾಲಯದಿಂದ ಪ್ರಸಿದ್ಧಿಗೊಳಿಸಿರುವ ವರದಿಯ ಪ್ರಕಾರ ಗಂಗಾ ನದಿಯಲ್ಲಿ ಡಾಲ್ಫಿನ್‌ಗಳ ಸಂಖ್ಯೆ ೨೦೨೧ ರಲ್ಲಿ ಸುಮಾರು ೩ ಸಾವಿರದ ೨೭೫ ರಿಂದ ೬ ಸಾವಿರದ ೩೨೪ ರಷ್ಟು ಆಗಿದೆ. ವಿಶೇಷವಾಗಿ ಪ್ರಯಾಗರಾಜ ಮತ್ತು ಪಾಟಲಿಪುತ್ರ ಇಲ್ಲಿನ ಗಂಗಾ ನದಿಯ ಪ್ರವಾಹದಲ್ಲಿ ಡಾಲ್ಫಿನ್‌ಗಳ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಗಂಗಾನದಿಯ ನೀರಿನ ಗುಣಮಟ್ಟ ಸುಧಾರಿಸಿದೆ, ಇದು ಕಂಡು ಬರುತ್ತಿದೆ, ಎಂದು ಹೇಳಿದ್ದಾರೆ.
ಡಾಲ್ಫಿನ್‌ಗಳ ಹೆಚ್ಚುತ್ತಿರುವ ಸಂಖ್ಯೆಯಿಂದ ವಿಜ್ಞಾನಿಗಳಿಗೆ ಸಮಾಧಾನ !
ಸಂಗಮ ಪರಿಸರದಲ್ಲಿ ನೀರು ಮತ್ತು ಗಾಳಿ ಇದರ ಶುದ್ಧತೆ, ಕಾಪಾಡಿದರೆ ಜೈವವಿವಿಧತೆಯ ದೃಷ್ಟಿಯಿಂದ ಲಾಭದಾಯಕವಾಗುವುದು, ಎಂದು ಪರಿಸರ ತಜ್ಞರ ಮತ್ತು ಪಕ್ಷಿ ತಜ್ಞರ ಅಭಿಪ್ರಾಯವಾಗಿದೆ. ಗಂಗಾ ನದಿಯಲ್ಲಿ ವಿದೇಶಿ ಪಕ್ಷಿಗಳ ಸಂಖ್ಯೆ ಮತ್ತು ಡಾಲ್ಫಿನ್‌ಗಳ ಹೆಚ್ಚುತ್ತಿರುವ ಸಂಖ್ಯೆ, ಇದರಿಂದ ಪ್ರಯಾಗರಾಜದ ವಾತಾವರಣ ಹಿಂದಿನಗಿಂತಲೂ ಬಹಳ ಒಳ್ಳೆಯದಾಗಿರುವುದನ್ನು ಪುಷ್ಟಿಕರಿಸುತ್ತದೆ, ಎಂದು ಹೇಳಿದರು.
ಮಹಾಕುಂಭ ಮೇಳದಲ್ಲಿ ಮಾಡಿರುವ ಪ್ರಯತ್ನದ ಪರಿಣಾಮ !
ಮಹಾಕುಂಭ ಮೇಳ ೨೦೨೫ ರಲ್ಲಿ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಜಂಟಿಯಾಗಿ ಗಂಗಾ ನದಿಯ ಸ್ವಚ್ಛತೆ ಮತ್ತು ಮಾಲಿನ್ಯ ನಿಯಂತ್ರಣ ಗೊಳಿಸುವುದಕ್ಕಾಗಿ ವಿಶೇಷ ಅಭಿಯಾನ ನಡೆಸಿದರು. ‘ನಮಾಮಿ ಗಂಗೆ’ ಈ ಯೋಜನೆಯ ಅಡಿಯಲ್ಲಿ ಗಂಗಾ ನದಿಯ ನೀರಿನಲ್ಲಿ ನಾಲೆಗಳಿಂದ ಹೊಲಸು ನೀರು ನದಿಗೆ ಬಿಡುವುದನ್ನು ನಿಷೇಧಿಸಿತ್ತು. ಸರಕಾರದ ಈ ಪ್ರಯತ್ನದ ಪರಿಣಾಮ ಈಗ ಕಂಡು ಬರುತ್ತಿದೆ. ವಿಜ್ಞಾನಿಗಳಿಗೆ, ಈ ಪರಿಸ್ಥಿತಿ ಹೀಗೆ ಮುಂದುವರೆದರೆ ಮುಂಬರುವ ಕಾಲದಲ್ಲಿ ಗಂಗಾ ನದಿಯ ನೀರು ಇನ್ನಷ್ಟು ಸ್ವಚ್ಛವಾಗುವುದು, ಎಂದು ನಂಬಿದ್ದಾರೆ.
ಭವಿಷ್ಯದಲ್ಲಿ ಕೂಡ ಸ್ವಚ್ಛತಾ ಅಭಿಯಾನ ಮುಂದುವರೆಸುವುದು ಆವಶ್ಯಕವಾಗಿದೆ !
ಸರಕಾರವು ನೀರಿನ ಸ್ವಚ್ಛತೆಗಾಗಿ ಕಾರ್ಯಾಚರಣೆ ಮುಂದುವರಿಸುತ್ತಿರಬೇಕು ಎಂಬುವುದು ವಿಜ್ಞಾನಿಗಳ ಅಭಿಪ್ರಾಯವಾಗಿದೆ. ಮಹಾಕುಂಭ ಮೇಳದ ನಂತರ ಕೂಡ ಗಂಗಾ ನದಿಯಲ್ಲಿ ಗಲಿಜು ನೀರು ಸ್ವಚ್ಛತಾ ಪ್ರಕ್ರಿಯ ಪ್ರಕಲ್ಪ, ಕಸದ ವಿಲೇವಾರಿ ಮತ್ತು ಮಾಲಿನ್ಯ ನಿಯಂತ್ರಣ ಉಪಾಯ ಯೋಜನೆ ಪಾಲಿಸುವುದು ಅವಶ್ಯಕವಾಗಿದೆ, ಆಗ ಮಾತ್ರ ಈ ಪರಿಸ್ಥಿತಿ ದೀರ್ಘಕಾಲದ ವರೆಗೆ ಉಳಿಯಬಹುದು.