|
ನವದೆಹಲಿ – ಪ್ರಯಾಗರಾಜನಲ್ಲಿ ಇತ್ತೀಚೆಗೆ ನಡೆದ ಮಹಾಕುಂಭದ ಸಮಯದಲ್ಲಿ ನದಿಗಳ ನೀರು ಸ್ನಾನಕ್ಕೆ ಯೋಗ್ಯವಾಗಿತ್ತು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ತಿಳಿಸಿದೆ. ಈ ಹಿಂದಿನ ವರದಿಯಲ್ಲಿ ಮಂಡಳಿಯು ಗಂಗಾ ಮತ್ತು ಯಮುನಾ ನದಿಗಳ ನೀರಿನಲ್ಲಿ ಮಾನವ ಮಲದ ಬ್ಯಾಕ್ಟೀರಿಯಾಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿವೆ ಎಂದು ಉಲ್ಲೇಖಿಸಿತ್ತು; ಆದರೆ ಸಂಖ್ಯಾಶಾಸ್ತ್ರದ ವಿಶ್ಲೇಷಣೆಯ ಪ್ರಕಾರ, ಸಂಗಮದ ನೀರು ಸ್ನಾನಕ್ಕೆ ಯೋಗ್ಯವಾಗಿತ್ತು ಎಂದು ಹೊಸ ವರದಿಯಲ್ಲಿ ತಿಳಿಸಲಾಗಿದೆ.
ನದಿಗಳ ನೀರಿನ ಮಾದರಿಗಳಲ್ಲಿ ವ್ಯತ್ಯಾಸವಿರುವುದರಿಂದ ಸಂಖ್ಯಾಶಾಸ್ತ್ರದ ವಿಶ್ಲೇಷಣೆ ನಡೆಸಲಾಗಿದೆ ಎಂದು ಮಂಡಳಿ ಹೇಳಿದೆ. ನೀರಿನ ಮಾದರಿಗಳನ್ನು ವಿವಿಧ ದಿನಾಂಕಗಳಲ್ಲಿ ಒಂದೇ ಸ್ಥಳಗಳಿಂದ ಮತ್ತು ಒಂದೇ ದಿನದಂದು ವಿವಿಧ ಸ್ಥಳಗಳಿಂದ ವಿವಿಧ ವಿಧಾನಗಳಲ್ಲಿ ತೆಗೆದುಕೊಳ್ಳಲಾಗಿತ್ತು. ಆದ್ದರಿಂದ, ಅವು ನದಿಯ ನೀರಿನ ಒಟ್ಟಾರೆ ಗುಣಮಟ್ಟವನ್ನು ಪ್ರತಿಬಿಂಬಿಸಲಿಲ್ಲ ಎಂದು ಹೊಸ ವರದಿಯಲ್ಲಿ ಹೇಳಲಾಗಿದೆ. ಮಂಡಳಿಯು ಈ ವರದಿಯನ್ನು ಫೆಬ್ರವರಿ 28 ರಂದು ಸಿದ್ಧಪಡಿಸಿದೆ.
‘ಜರ್ಮನ್ ಶೆಫರ್ಡ್’ ಎಂದು ಕರೆಯಲ್ಪಡುವ ಧ್ರುವ ರಾಠಿ ಎಂಬ ಯೂಟ್ಯೂಬರ್ ಮಹಾಕುಂಭ ಮೇಳದ ಕೊನೆಯ ಅವಧಿಯಲ್ಲಿ ‘ಸಂಗಮ ಸ್ನಾನದ ನೀರು ಅತ್ಯಂತ ಹಾನಿಕಾರಕ’ (ದಿಸ್ ಈಸ್ ಟಾಕ್ಸಿಕ್) ಎಂಬ ಶೀರ್ಷಿಕೆಯ ವೀಡಿಯೊವನ್ನು ಮಾಡಿದ್ದರು. ಈ ಮೂಲಕ ಸ್ನಾನಕ್ಕೆ ನೀರು ತುಂಬಾ ಕಲುಷಿತವಾಗಿದೆ ಎಂದು ಹೇಳುವ ಮೂಲಕ ರಾಠಿ ಹಿಂದೂಗಳನ್ನು ಮೂರ್ಖರನ್ನಾಗಿಸಲು ಪ್ರಯತ್ನಿಸಿದ್ದರು. ಈ ವೀಡಿಯೊವನ್ನು 10 ದಿನಗಳಲ್ಲಿ 1 ಕೋಟಿ 30 ಲಕ್ಷ ಜನರು ವೀಕ್ಷಿಸಿದ್ದರು.
ಸಂಪಾದಕೀಯ ನಿಲುವುಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿಂದಿನ ವರದಿಯನ್ನು ಬಂಡವಾಳವನ್ನಾಗಿ ಮಾಡಿಕೊಂಡು ಧ್ರುವ ರಾಠಿ ಮುಂತಾದ ಕಟ್ಟರ ಹಿಂದೂದ್ವೇಷಿ ಜನರು ಮಹಾಕುಂಭದ ವ್ಯವಸ್ಥೆ ನಿಷ್ಪ್ರಯೋಜಕ ಮತ್ತು ಜನವಿರೋಧಿ ಎಂದು ಬಿಂಬಿಸಲು ಪ್ರಯತ್ನಿಸಿದರು. ಈಗ ಈ ಸಂಪೂರ್ಣ ಗುಂಪು ಮಾಲಿನ್ಯ ನಿಯಂತ್ರಣ ಮಂಡಳಿಯು ಭಾಜಪ ಪರವಾಗಿದೆ ಎಂದು ಹೇಳಿದರೆ ಆಶ್ಚರ್ಯಪಡಬೇಕಾಗಿಲ್ಲ; ಆದರೆ ಮೊದಲು ಮಾಡಿದ ಟೀಕೆಯಿಂದ ಹಿಂದೂಗಳ ಶ್ರದ್ಧೆಯನ್ನು ತುಳಿದು ಮಹಾಪಾಪ ಮಾಡಿದ ಹಿಂದೂದ್ವೇಷಿಗಳಿಗೆ ಹಿಂದೂಗಳು ಈಗ ಉತ್ತರಿಸಬೇಕು! |