ಹಿಂದೂ ಆಗಿ ಹುಟ್ಟಿದ್ದೇನೆ ಮತ್ತು ಹಿಂದೂ ಆಗಿಯೇ ಸಾಯುತ್ತೇನೆ ! – ಡಿ.ಕೆ. ಶಿವಕುಮಾರ, ಉಪಮುಖ್ಯಮಂತ್ರಿ

ಕಾಂಗ್ರೆಸ್ ಸರಕಾರದಲ್ಲಿನ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಇವರು ಮಹಾಕುಂಭಮೇಳ ಮತ್ತು ಮಹಾಶಿವರಾತ್ರಿ ಉತ್ಸವದಲ್ಲಿ ಸಹಭಾಗಿ ಆಗಿರುವ ಕುರಿತು ಹೇಳಿಕೆ

ಬೆಂಗಳೂರು – ನಾನು ಬೇರೆ ಧರ್ಮ ಏಕೆ ಸ್ವೀಕರಿಸಬೇಕು ? ನನಗೆ ಎಲ್ಲಾ ಧರ್ಮದ ಬಗ್ಗೆ ಪ್ರೀತಿ ಇದೆ. ನಾವು ಈ ಧರ್ಮದಲ್ಲಿ ಹುಟ್ಟಲು ಅರ್ಜಿ ಸಲ್ಲಿಸಲಿಲ್ಲ. ನಾನು ಹಿಂದೂ ಆಗಿ ಹುಟ್ಟಿದ್ದೇನೆ ಮತ್ತು ಹಿಂದೂ ಆಗಿಯೇ ಸಾಯುತ್ತೇನೆ, ಎಂದು ರಾಜ್ಯದ ಉಪಮುಖ್ಯಮಂತ್ರಿ ಮತ್ತು ಕಾಂಗ್ರೆಸ್ಸಿನ ಪ್ರದೇಶಾಧ್ಯಕ್ಷ ಡಿ.ಕೆ. ಶಿವಕುಮಾರ್ ಇವರು ಸ್ಪಷ್ಟನೆ ನೀಡಿದರು. ಅವರು ಈ ಸಲದ ಮಹಾಶಿವರಾತ್ರಿ ಉತ್ಸವ ಸದ್ಗುರು ಜಗ್ಗಿ ವಾಸುದೇವ್ ಇವರ ‘ಈಶ ಫೌಂಡೇಶನ್’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರು ಕಾಂಗ್ರೆಸ್ಸಿಗರು ಆಗಿದ್ದರೂ ಈ ರೀತಿಯ ಕಾರ್ಯಕ್ರಮಕ್ಕೆ ಹೋಗಿದ್ದಾರೆ ಎಂದು ಸ್ವಪಕ್ಷದವರೇ ಚರ್ಚಿಸಲು ಆರಂಭಿಸಿದಾಗ ಪತ್ರಕರ್ತರು ಕೇಳಿರುವ ಪ್ರಶ್ನೆಗೆ ಅವರು ಮೇಲಿನ ಉತ್ತರ ನೀಡಿದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮಾತು ಮುಂದುವರೆಸುತ್ತಾ,

೧. ಕಾಂಗ್ರೆಸ್ ಪಕ್ಷ ಇದು ಸರ್ವ ಧರ್ಮದ ಸಂಗಮವಾಗಿದೆ. ಯಾವಾಗ ನಾವು ಅಧಿಕಾರ ಮತ್ತು ಆಡಳಿತ ನಡೆಸುತ್ತೇವೆ ಆಗ ಎಲ್ಲರಿಗೂ ವಿಚಾರಪೂರ್ವಕವಾಗಿ ನೀಡುತ್ತೇವೆ (ಹೀಗಿದ್ದರೆ, ಸ್ವಪಕ್ಷದಲ್ಲಿನ ಜನರೇ ಇದರ ಕುರಿತು ಏಕೆ ಟೀಕಿಸುತ್ತಿದ್ದಾರೆ? ಇದರ ಅರ್ಥ ಹಿಂದುಗಳ ಕಾರ್ಯಕ್ರಮಕ್ಕೆ ಹೋಗುವುದು ಇದು ಕಾಂಗ್ರೆಸ್ಸಿನ ವಿಚಾರಧಾರೆಗೆ ಸರಿಹೊಂದುವುದಿಲ್ಲ, ಎಂದು ಕಾಣುತ್ತದೆ ! – ಸಂಪಾದಕರು)

೨. ರಾಜ್ಯದಲ್ಲಿ ನಮ್ಮ ಸರಕಾರ ಅಧಿಕಾರದಲ್ಲಿದೆ. ನಾವು ಹಿಂದೂ ಧರ್ಮದಾಯ ಇಲಾಖೆ ಮುಚ್ಚಿದ್ದೇವೆಯೇ? ಭಾಜಪ ಆಡಳಿತದಲ್ಲಿರುವಾಗ ವಕ್ಫ್ ಬೋರ್ಡ್ ಮುಚ್ಚಲಿಲ್ಲ. ಕ್ರೈಸ್ತ ಡೆವಲಪ್‌ಮೆಂಟ ಬೋರ್ಡ್ ಬಂದ್ ಆಗಿದೆಯೇ? ಇಲ್ಲ ಅಲ್ಲವೇ. ಇದರ ಕಾರಣ ನಮ್ಮ ಸಂವಿಧಾನ ಆಗಿದೆ. ನಮ್ಮ ದೇಶದಲ್ಲಿ ಎಲ್ಲಾ ಧರ್ಮಗಳಿಗೆ ಸಮಾನ ಅವಕಾಶ ನೀಡಲಾಗುತ್ತದೆ.

೩. ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಇವರ ನೇತೃತ್ವದಲ್ಲಿ ನಾವು ಹಿಂದೆ ಚುನಾವಣೆಗಳನ್ನು ಎದುರಿಸಿದ್ದೇವೆ. ಆಗ ನಾವು ಚುನಾವಣೆ ಅಭಿಯಾನಕ್ಕೆ ‘ಪಾಂಚಜನ್ಯ’ ಎಂದು ಹೆಸರು ನೀಡಿದ್ದೆವು. ಆಗ ಕೆಲವು ಜನರು ಸೋನಿಯಾ ಗಾಂಧಿ ಇವರ ಬಳಿ ಹೋಗಿ ದೂರು ನೀಡಿದರು; ಆದರೆ ಸೋನಿಯಾ ಗಾಂಧಿ ಇವರು ಅದನ್ನು ನಿಲ್ಲಿಸಲಿಲ್ಲ. (ಇದರಿಂದ ಕಾಂಗ್ರೆಸ್‌ನಲ್ಲಿ ಬಹಳಷ್ಟು ಜನರು ಹಿಂದೂ ಶ್ರದ್ಧೆಗೆ ಸಂಬಂಧಿಸಿದ ಹೆಸರುಗಳನ್ನು ಆಕ್ಷೇಪಿಸುತ್ತಾರೆ. ಇದರಿಂದ ಕಾಂಗ್ರೆಸ್ ನಲ್ಲಿ ಹಿಂದೂದ್ವೇಷಿಗಳು ತುಂಬಿದ್ದಾರೆ, ಇದೇ ಗಮನಕ್ಕೆ ಬರುತ್ತದೆ – ಸಂಪಾದಕರು)

೪. ನಾವು ಹಿಂದುಗಳನ್ನು ಭಾಜಪ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಬಿಟ್ಟು ಕೊಟ್ಟಿದ್ದೇವೆಯೇ ? ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನನ್ನ ಹೆಸರು ದೇವರ ಹೆಸರೇ ಆಗಿದೆ ಎಂದು ಬದಲಾಯಿಸಲು ಸಾಧ್ಯವೇ? ನಮ್ಮ ನಾಯಕರು ರಾಹುಲ ಗಾಂಧಿ ಬಹಳ ದೊಡ್ಡ ಶಿವಭಕ್ತರಾಗಿದ್ದಾರೆ. (ಹೀಗಿದ್ದರೆ; ಅವರು ಕುಂಭಮೇಳದಲ್ಲಿ ಪವಿತ್ರ ಸ್ನಾನಕ್ಕಾಗಿ ಏಕೆ ಹೋಗಲಿಲ್ಲ ? – ಸಂಪಾದಕರು)

೫. ಈ ಪ್ರಕರಣದ ಕುಂಭಮೇಳಕ್ಕೆ ಏನು ಸಂಬಂಧ ಇದೆ? ನೀರಿಗೆ ಜಾತಿ ಅಥವಾ ಧರ್ಮ ಇರುತ್ತದೆಯೇ? ಇದು ಒಂದು ಪರಂಪರೆ ಆಗಿದೆ. ಅದು ಪ್ರಾಚೀನ ಕಾಲದಿಂದ ನಡೆದುಕೊಂಡು ಬಂದಿದೆ. ಇದರಲ್ಲಿ ಯಾವುದೇ ರಾಜಕಾರಣ ಇಲ್ಲ. ಧರ್ಮ ಮತ್ತು ಶ್ರದ್ಧೆ ಇದರಲ್ಲಿ ರಾಜಕಾರಣ ಬೆರೆಸಬಾರದು. (ಸ್ವಪಕ್ಷದಲ್ಲಿನ ನಾಯಕರು ಇದರ ಅನುಕರಣೆ ಮಾಡುವರೆ? ಸ್ವತಃ ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇವರೇ ಕುಂಭಮೇಳದ ಕುರಿತು ಟೀಕಿಸಿದ್ದಾರೆ. – ಸಂಪಾದಕರು) ನಮ್ಮ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ ಕೂಡ ಕುಂಭಮೇಳಕ್ಕೆ ಹೋಗಿದ್ದರು.

೬. ಪ್ರಯಾಗರಾಜದಲ್ಲಿ ನಡೆದ ಕುಂಭಮೇಳದಲ್ಲಿ ಮತ್ತು ಈಶಾ ಯೋಗ ಕೇಂದ್ರದಲ್ಲಿ ನಡೆಯುವ ಮಹಾ ಶಿವರಾತ್ರಿಯ ಕಾರ್ಯಕ್ರಮದಲ್ಲಿ ನಾನು ಸಹಭಾಗಿ ಆಗಿದ್ದೇನೆ, ಇದು ನನ್ನ ಶ್ರದ್ದೆ ಆಗಿದೆ. ನನ್ನ ವಿಶ್ವಾಸ ಇದು ನನ್ನದೇ ಆಗಿದೆ. ಯಾರೂ ಕೂಡ ಅದರ ಬಗ್ಗೆ ಮಾತನಾಡಬಾರದು. ನನ್ನ ಕೃತಿಗೆ ಯಾರು (ಭಾಜಪವು) ಶಾಬ್ಧಿಕ ಸ್ವಾಗತ ಮಾಡಬೇಕು, ಇದರ ಅಗತ್ಯ ಕೂಡ ಇಲ್ಲ.