ಬಡವಾನಿ (ಮಧ್ಯಪ್ರದೇಶ) ಇಲ್ಲಿಯ ಆದಿವಾಸಿ ಮಹಿಳೆಯರನ್ನು ಮತಾಂತರದ ಪ್ರಯತ್ನ ಮಾಡುವ ಕ್ರೈಸ್ತ ದಂಪತಿಗಳ ಬಂಧನ

ಜಗತ್ತಿನಲ್ಲಿ ಎಲ್ಲಿಯೂ ಹಿಂದೂಗಳಿಂದ ಎಂದಾದರೂ ಕ್ರೈಸ್ತರ ಅಥವಾ ಮುಸಲ್ಮಾನರನ್ನು ಮತಾಂತರ ಮಾಡಿರುವ ಮತ್ತು ಅದರಿಂದ ಅವರ ಬಂಧನವಾಗಿರುವುದು ಕೇಳಿದ್ದೇವೆಯೇ ? ಹಾಗಾದರೆ ಕ್ರೈಸ್ತರಿಂದ ಮತ್ತು ಮುಸಲ್ಮಾನರಿಂದ ಹಿಂದೂಗಳ ಸಂದರ್ಭದಲ್ಲಿ ಹೀಗೇಕೆ ನಡೆಯುತ್ತದೆ ?

ಇಟಲಿಯಲ್ಲಿ ‘ಅಮೆಝಾನ’ ಗೆ ಕಾನೂನುಬಾಹಿರ ಕೃತ್ಯ ಮಾಡಿದ್ದರಿಂದ ೯ ಸಾವಿರ ೮೪೩ ಕೋಟಿ ೭೩ ಲಕ್ಷ ರೂಪಾಯಿಯಗಳ ದಂಡ

ಇಟಲಿಯಲ್ಲಿ ‘ಅಮೆಝಾನ’ ಗೆ ಕಾನೂನುಬಾಹಿರ ಕೃತ್ಯ ಮಾಡಿದ್ದರಿಂದ ೯ ಸಾವಿರ ೮೪೩ ಕೋಟಿ ೭೩ ಲಕ್ಷ ರೂಪಾಯಿಯಗಳ ದಂಡ

ಜಿತೇಂದ್ರ ತ್ಯಾಗಿ (ಪೂರ್ವಾಶ್ರಮದ ವಸೀಮ್ ರಿಝವಿ) ಅವರನ್ನು ಪೈಗಂಬರ್ ಮತ್ತು ಕುರಾನ ಬಗ್ಗೆ ಮಾತನಾಡಲು ನಿಷೇಧಿಸಬೇಕು ! – ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ

ಶಿಯಾ ವಕ್ಫ್ ಬೋರ್ಡ್‌ನ ಮಾಜಿ ಅಧ್ಯಕ್ಷ ಜಿತೇಂದ್ರ ನಾರಾಯಣ ತ್ಯಾಗಿ, ಅಂದರೆ ಪೂರ್ವಾಶ್ರಮದ ವಸೀಮ್ ರಿಝವಿ ಇವರನ್ನು ಮಹಮ್ಮದ್ ಪೈಗಂಬರ್ ಮತ್ತು ಕುರಾನ್ ಈ ವಿಷಯವಾಗಿ ಯಾವುದೇ ರೀತಿಯ ಹೇಳಿಕೆ ನೀಡಲು ನಿಷೇಧಿಸಬೇಕು

ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ನಮಾಜುಪಠಣವನ್ನು ಸಹಿಸುವುದಿಲ್ಲ ! – ಹರಿಯಾಣಾದ ಮುಖ್ಯಮಂತ್ರಿ ಮನೋಹರಲಾಲ ಖಟ್ಟರ

ಸಾರ್ವಜನಿಕ ಸ್ಥಳಗಳಲ್ಲಿ ನಮಾಜುಪಠಣ ಮಾಡುವ ಪದ್ಧತಿ ಸಹಿಸಲಾಗುವುದಿಲ್ಲ; ಆದರೆ ಚರ್ಚೆಯಿಂದ ಒಂದು ಸೌಹಾರ್ದಪೂರ್ಣ ಪರಿಹಾರ ಕಂಡುಕೊಳ್ಳಲಾಗುವುದು, ಎಂದು ರಾಜ್ಯದ ಭಾಜಪ ಸರಕಾರದ ಮುಖ್ಯಮಂತ್ರಿ ಮನೋಹರಲಾಲ ಖಟ್ಟರ ಇವರು ಎಚ್ಚರಿಕೆಯನ್ನು ನೀಡಿದ್ದಾರೆ.

ಕೇಂದ್ರ ಸರಕಾರದ ‘ಬೇಟಿ ಬಚಾವೋ-ಬೇಟಿ ಪಢಾವೋ’ ಯೋಜನಗಾಗಿ ಶೇ. ೭೯ ರಷ್ಟು ಹಣ ಕೇವಲ ಜಾಹೀರಾತಿಗಾಗಿ ವಿನಿಯೋಗ ! – ಸಂಸದೀಯ ಸಮಿತಿಯ ವರದಿಯಲ್ಲಿ ಮಾಹಿತಿ

‘ಬೇಟಿ ಬಚಾವೋ ಬೇಟಿ ಪಢಾವೋ’ ಯೋಜನೆಗಾಗಿ ಖರ್ಚು ಮಾಡಿರುವ ೪೪೬ ಕೋಟಿ ೭೨ ಲಕ್ಷ ರೂಪಾಯಿಗಳ ಪೈಕಿ ಶೇ. ೭೮.೧೧ ರಷ್ಟು ಹಣ ಜಾಹೀರಾತಿಗಾಗಿ ಖರ್ಚು ಮಾಡಿರುವುದು ಬೆಳಕಿಗೆ ಬಂದಿದೆ.

ಕೇರಳದ ಪ್ರಸಿದ್ಧ ಚಿತ್ರನಿರ್ಮಾಪಕರಾದ ಅಲಿ ಅಕಬರರವರು ಇಸ್ಲಾಮನ್ನು ತ್ಯಜಿಸಿ ಹಿಂದೂ ಧರ್ಮವನ್ನು ಸ್ವೀಕರಿಸಿದರು !

ಸಿಡಿಎಸ್ ಜನರಲ್ ಬಿಪಿನ ರಾವತರವರ ಅಪಘಾತದಲ್ಲಿ ಮೃತ್ಯುವಾದಾಗ ಕೆಲವು ವ್ಯಕ್ತಿಗಳಿಂದ ಅವರಿಗಾದ ಅಪಮಾನದಿಂದ ಬೇಸರಗೊಂಡು ತಾನು ಇಸ್ಲಾಮನ್ನು ತ್ಯಜಿಸಿ ಹಿಂದೂ ಧರ್ಮವನ್ನು ಸ್ವೀಕರಿಸುವ ನಿರ್ಣಯ ತೆಗೆದುಕೊಂಡಿದ್ದೇನೆ ಎಂಬ ಮಾಹಿತಿಯನ್ನು ಕೇರಳದಲ್ಲಿನ ಪ್ರಸಿದ್ಧ ಚಿತ್ರನಿರ್ಮಾಪಕರಾದ ಅಲಿ ಅಕಬರರವರು ನೀಡಿದ್ದಾರೆ.

ಜಲಪಾಯಿಗುಡಿ(ಬಂಗಾಳ)ದಲ್ಲಿ ಮಕ್ಕಳಿಗೆ ಕಲಿಸುವಾಗ ತೊಂದರೆಯಾಗಬಾರದೆಂದು ಮಸೀದಿಯ ಧ್ವನಿವರ್ಧಕ ಸ್ಥಗಿತ

ವಿದ್ಯಾರ್ಥಿಗಳಿಗೆ ಕಲಿಯುವಾಗ ತೊಂದರೆಯಾಗಬಾರದೆಂದು ಅಲ್ಲಿಯ ಒಂದು ಮಸೀದಿಯಿಂದ ಅಜಾನ್ ಕೇಳಿಸಲು ಬಳಸಲಾಗುತ್ತಿದ್ದ ಧ್ವನಿವರ್ಧಕವನ್ನು ಉಪಯೋಗಿಸದಿರಲು ನಿರ್ಣಯಿಸಿದ್ದಾರೆ. ಹಾಗೆಯೇ ಈ ಮಸೀದಿಯು ಮಕ್ಕಳ ಶಿಕ್ಷಣಕ್ಕಾಗಿ ಸ್ಥಳವನ್ನೂ ನೀಡಿದೆ.

ಅರರಿಯಾ (ಬಿಹಾರ) ಇಲ್ಲಿನ ಗ್ರಾಮದಲ್ಲಿ ಗೋವಂಶ ಕಳ್ಳತನ ಮಾಡುವ ಕಳ್ಳರನ್ನು ಥಳಿಸಿದ್ದರಿಂದ ಓರ್ವನ ಸಾವು

ಭವಾನೀಪುರ ಗ್ರಾಮದಲ್ಲಿ ಗೋವಂಶದ ಕಳ್ಳತನ ಮಾಡುವ ೫೦ ವರ್ಷದ ಮಹಮ್ಮದ ಸಿದ್ದಿಕೀ ಎಂಬುವವನನ್ನು ಸ್ಥಳೀಯರು ಥಳಿಸಿದ್ದರಿಂದ ಅವನು ಮೃತಪಟ್ಟನು.

ಕಾನಪೂರ (ಉತ್ತರಪ್ರದೇಶ) ಇಲ್ಲಿ ಹಿಂದೂ ಧರ್ಮವನ್ನು ಸ್ವೀಕರಿಸಲು ಇಚ್ಛೆ ವ್ಯಕ್ತಪಡಿಸಿದ್ದ ಮುಸಲ್ಮಾನ ಯುವಕನಿಗೆ ಮತಾಂಧರಿಂದ ಹಿಗ್ಗಾಮುಗ್ಗಾ ಥಳಿತ

ಇಲ್ಲಿಯ ಕರ್ನಲ್‌ಗಂಜ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಅಸ್ಲಂ ಅಲಿ ಎಂಬ ಯುವಕನು ಮುಸಲ್ಮಾನ ಧರ್ಮವನ್ನು ತ್ಯಜಿಸಿ ಹಿಂದೂ ಧರ್ಮವನ್ನು ಸ್ವೀಕರಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಕ್ಕೆ ಮತಾಂಧರು ಆತನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಶ್ರೀಕೃಷ್ಣನ ಜನ್ಮಭೂಮಿಯಲ್ಲಿ ಆರತಿ ಮಾಡಲು ಅನುಮತಿ ನಿರಾಕರಣೆ!

ಅಖಿಲ ಭಾರತ ಹಿಂದೂ ಮಹಾಸಭೆಯು ಇಲ್ಲಿಯ ಶ್ರೀಕೃಷ್ಣ ಜನ್ಮಭೂಮಿಯಲ್ಲಿ ಇರುವ ಈದ್ಗಾ ಪರಿಸರದಲ್ಲಿ ಡಿಸೆಂಬರ್ ೧೦ ರಂದು ಭಗವಾನ್ ಶ್ರೀಕೃಷ್ಣನಿಗೆ ಆರತಿ ಮಾಡಲು ಜಿಲ್ಲಾಧಿಕಾರಿಗಳಲ್ಲಿ ಅನುಮತಿ ಕೇಳಿತ್ತು. ಆದರೆ ಸರಕಾರವು ಅದನ್ನು ನಿರಾಕರಿಸಿದೆ.