ಈ ಬಗ್ಗೆ ಹಿಂದೂ ಮತ್ತು ಅವರ ಸಂಘಟನೆಗಳು ಕಳೆದ ಎರಡು ತಿಂಗಳಿಂದ ಗುರುಗ್ರಾಮದಲ್ಲಿ ಮಾಡುತ್ತಿರುವ ಆಂದೋಲನದಿಂದಾಗಿ ಈ ನಿಲುವನ್ನು ತೆಗೆದುಕೊಳ್ಳಲಾಗಿದೆ. ಇದನ್ನು ಹಿಂದೂಗಳು ಆಂದೋಲನ ಮಾಡುವ ಮೊದಲೇ ತೆಗೆದುಕೊಳ್ಳಬೇಕಾಗಿತ್ತು, ಎಂದು ಹಿಂದೂಗಳಿಗೆ ಅನಿಸುತ್ತದೆ !
ಗುರುಗ್ರಾಮ (ಹರಿಯಾಣಾ) – ಸಾರ್ವಜನಿಕ ಸ್ಥಳಗಳಲ್ಲಿ ನಮಾಜುಪಠಣ ಮಾಡುವ ಪದ್ಧತಿ ಸಹಿಸಲಾಗುವುದಿಲ್ಲ; ಆದರೆ ಚರ್ಚೆಯಿಂದ ಒಂದು ಸೌಹಾರ್ದಪೂರ್ಣ ಪರಿಹಾರ ಕಂಡುಕೊಳ್ಳಲಾಗುವುದು, ಎಂದು ರಾಜ್ಯದ ಭಾಜಪ ಸರಕಾರದ ಮುಖ್ಯಮಂತ್ರಿ ಮನೋಹರಲಾಲ ಖಟ್ಟರ ಇವರು ಎಚ್ಚರಿಕೆಯನ್ನು ನೀಡಿದ್ದಾರೆ. ಗುರುಗ್ರಾಮದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ನಮಾಜುಪಠಣವನ್ನು ಎರಡು ತಿಂಗಳಿನಿಂದ ಹಿಂದೂಗಳ ಪ್ರತಿಭಟನೆಯನ್ನು ನಡೆಸಿದ ವಿರೋಧಿಸುತ್ತಿರುವಾಗ ಇದೇ ಮೊದಲ ಬಾರಿ ಭಾಜಪ ಸರಕಾರದ ನಿಲುವನ್ನು ಮುಖ್ಯಮಂತ್ರಿ ಖಟ್ಟರ ಇವರು ಸ್ಪಷ್ಟಪಡಿಸಿದ್ದಾರೆ. ಕಳೆದ ಎರಡು ತಿಂಗಳಿನಿಂದ ಪ್ರತಿ ಶುಕ್ರವಾರ ನಮಾಜುಪಠಣ ಮಾಡುವ ವಿರುದ್ಧ ಪ್ರತಿಭಟನೆಯನ್ನು ಆಯೋಜಿಸಲಾಗುತ್ತಿದೆ, ಆದ್ದರಿಂದ ನಮಾಜುಪಠಣದ ಸ್ಥಳಕ್ಕೆ ಪೊಲೀಸ್ ಬಂದೋಬಸ್ತಿಗಾಗಿ ನೇಮಿಸಲಾಗಿದೆ. ಆಂದೋಲನಕಾರರನ್ನು ಎರಡು ಬಾರಿ ವಶಕ್ಕೆ ಪಡೆಯಲಾಗಿದೆ. ಹಿಂದೂ ಸಂಘಟನೆಗಳಿಂದ ನಮಾಜು ಪಠಣದ ಸ್ಥಳದಲ್ಲಿ, ಭಜನೆ, ಹವನ ಮತ್ತು ಪೂಜೆ ಮಾಡಲಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡುವುದನ್ನು ಸಹಿಸಲಾಗುವುದಿಲ್ಲ: ಹರಿಯಾಣ ಸಿಎಂ #Namaz #ManoharLalKhattar https://t.co/IHxnKXHQtT
— Prajavani (@prajavani) December 10, 2021
೧. ಸರಕಾರಿ ವಿಶ್ರಾಂತಿಗೃಹದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಖಟ್ಟರ ಅವರು, “ಯಾರಾದರೂ ಪೂಜೆ-ಅರ್ಚನೆಯ ಮಾಡುತ್ತಿದ್ದರೆ, ನಮಗೆ ಯಾವುದೇ ಅಡಚಣೆ ಇಲ್ಲ. ಧಾರ್ಮಿಕ ಸ್ಥಳಗಳನ್ನು ಅದಕ್ಕಾಗಿಯೇ ಕಟ್ಟಲಾಗುತ್ತದೆ. ಆದರೆ ಬಯಲಿನಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಉಪಾಸನೆ ಮಾಡಲು ಸಾಧ್ಯವಿಲ್ಲ. ಈ ಮೊದಲು ನಮಾಜುಪಠಣದ ಬಗ್ಗೆ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿತ್ತು; ಆದರೆ ಈಗ ಅದನ್ನು ಹಿಂಪಡೆಯಲಾಗಿದೆ. ಈ ವಿಷಯವಾಗಿ ಮತ್ತೊಮ್ಮೆ ಚರ್ಚೆ ನಡೆಸಲಾಗುವುದು. ನಾವು ಯಾವುದೇ ಪರಿಸ್ಥಿತಿಯಲ್ಲಿ ಘರ್ಷಣೆಗೆ ಅವಕಾಶ ನೀಡುವುದಿಲ್ಲ. ಯಾರ ಅಧಿಕಾರದಲ್ಲಿ ಯಾರೂ ಹಸ್ತಕ್ಷೇಪ ಮಾಡಬಾರದು. ಯಾರನ್ನು ಒತ್ತಾಯಿಸಲು ಬಿಡುವುದಿಲ್ಲ”, ಎಂದರು.
೨. ಮುಸಲ್ಮಾನ ಸಮಾಜದ ಬಳಿ ಬೃಹತ್ಪ್ರಮಾಣದ ಭೂಮಿಯಿದೆ. ಅಲ್ಲಿ ಅವರಿಗೆ ನಮಾಜುಪಠಣ ಮಾಡಲು ಅನುಮತಿ ನೀಡಬೇಕು. ಕೆಲವು ಭೂಮಿಯು ಮುಸಲ್ಮಾನರಿಗೆ ಅಥವಾ ಅವರ ‘ವಕ್ಫ್ ಬೋರ್ಡಿನ’ ಒಡೆತನದ್ದಾಗಿತ್ತು. ಅದರ ವಿಷಯವಾಗಿ ಯಾವುದೇ ವಿವಾದವಿಲ್ಲ. ಅವರಿಗೆ ಇಂತಹ ಭೂಮಿ ಲಭ್ಯ ಮಾಡಿಕೊಳ್ಳಬೇಕು ಅಥವಾ ಅವರು ಅವರ ಮನೆಯಲ್ಲಿ ನಮಾಜುಪಠಣ ಮಾಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಬಂದು ನಮಾಜುಪಠಣದಿಂದ ವಿವಾದ ಸೃಷ್ಟಿಯಾಗಲು ಬಿಡುವುದಿಲ್ಲ. ಮುಸಲ್ಮಾನರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು, ಎಂದೂ ಹೇಳಿದರು
೩. ೨೦೧೮ ರಲ್ಲಿ ಇದೇ ರೀತಿಯ ಅಂಶಗಳ ಮೇಲೆ ಖಟ್ಟರ ಇವರು, ‘ಮಸೀದಿ, ಈದ್ಗಾ ಅಥವಾ ಖಾಸಗಿ ಜಾಗದಲ್ಲಿ ನಮಾಜು ಪಠಣ ಮಾಡಬೇಕೆಂದು’, ಹೇಳಿದ್ದರು.