ಜಲಪಾಯಿಗುಡಿ(ಬಂಗಾಳ)ದಲ್ಲಿ ಮಕ್ಕಳಿಗೆ ಕಲಿಸುವಾಗ ತೊಂದರೆಯಾಗಬಾರದೆಂದು ಮಸೀದಿಯ ಧ್ವನಿವರ್ಧಕ ಸ್ಥಗಿತ

ವಿದ್ಯಾರ್ಥಿಗಳು ಇಡೀ ಭಾರತದಲ್ಲಿ ಕಲಿಯುತ್ತಿರುತ್ತಾರೆ, ಲಕ್ಷಾಂತರ ರೋಗಿಗಳು ಹಾಗೂ ವೃದ್ಧರು ಇದ್ದಾರೆ, ಅವರಿಗಾಗಿಯೂ ಇಡೀ ದೇಶದಲ್ಲಿ ಇಂತಹ ನಿರ್ಣಯವನ್ನು ತೆಗೆದುಕೊಳ್ಳಬೇಕು

ಜಲಪಾಯಿಗುಡಿ(ಬಂಗಾಳ) – ಇಲ್ಲಿಯ ವಿದ್ಯಾರ್ಥಿಗಳಿಗೆ ಕಲಿಯುವಾಗ ತೊಂದರೆಯಾಗಬಾರದೆಂದು ಅಲ್ಲಿಯ ಒಂದು ಮಸೀದಿಯಿಂದ ಅಜಾನ್ ಕೇಳಿಸಲು ಬಳಸಲಾಗುತ್ತಿದ್ದ ಧ್ವನಿವರ್ಧಕವನ್ನು ಉಪಯೋಗಿಸದಿರಲು ನಿರ್ಣಯಿಸಿದ್ದಾರೆ. ಹಾಗೆಯೇ ಈ ಮಸೀದಿಯು ಮಕ್ಕಳ ಶಿಕ್ಷಣಕ್ಕಾಗಿ ಸ್ಥಳವನ್ನೂ ನೀಡಿದೆ.

೧. ಮಸೀದಿಯ ಇಮಾಮ ನಜೀಮುಲ್ ಹಕ್ ಇವರು ಮಾತನಾಡುತ್ತಾ, ಇನ್ನು ಮುಂದೆ ನಾವು ಧ್ವನಿವರ್ಧಕವನ್ನು ಬಳಸದೇ ಮಸೀದಿಯಲ್ಲಿ ಅಜಾನ್ ಕೂಗುತ್ತೇವೆ. (ಒಂದು ವೇಳೆ ಧ್ವನಿವರ್ಧಕವಿಲ್ಲದೇ ಅಜಾನ್ ಕೂಗಲು ಸಾಧ್ಯವಾಗುತ್ತಿದ್ದರೆ, ಇಡೀ ಭಾರತದಲ್ಲಿಯೂ ಹೀಗೆ ಮಾಡಲು ಸಾಧ್ಯವಿದೆ; ಹೀಗಿರುವಾಗ ಇದಕ್ಕಾಗಿ ಏಕೆ ಪ್ರಯತ್ನಿಸುತ್ತಿಲ್ಲ ? – ಸಂಪಾದಕರು) ಇದರಿಂದ ಶಬ್ದಮಾಲಿನ್ಯವಾಗುವುದಿಲ್ಲ ಮತ್ತು ಮಕ್ಕಳಿಗೆ ಶಾಲೆಯಲ್ಲಿ ಶಾಂತವಾಗಿ ಅಧ್ಯಯನ ಮಾಡಲು ಸಾಧ್ಯವಾಗಲಿದೆ, ಎಂದರು (ಮಸೀದಿಯ ಧ್ವನಿವರ್ಧಕದಿಂದ ಶಬ್ದಮಾಲಿನ್ಯವಾಗುತ್ತದೆಯೆಂದು ತಿಳಿದಿದ್ದರೂ ಇಷ್ಟು ದಿನಗಳ ಕಾಲ ಅದನ್ನು ಮತ್ತು ಭಾರತದಲ್ಲಿರುವ ಇತರ ಮಸೀದಿಯಲ್ಲಿ ಧ್ವನಿವರ್ಧಕಗಳನ್ನು ಏಕೆ ಉಪಯೋಗಿಸಲಾಗುತ್ತಿದೆ? ಎನ್ನುವ ಪ್ರಶ್ನೆಯೇಳುತ್ತದೆ! – ಸಂಪಾದಕರು)

೨.ಶಾಲೆಯ ಶಿಕ್ಷಕ ಇಂದ್ರನೀಲ ಸಾಹಾ ಇವರು ಮಾತನಾಡುತ್ತಾ, ಮಸೀದಿಯಲ್ಲಿ ಅಜಾನ್ ಮತ್ತು ನಮಾಜುಪಠಣಕ್ಕಾಗಿ ಧ್ವನಿವರ್ಧಕವನ್ನು ಉಪಯೋಗಿಸದಿರುವ ನಿರ್ಣಯವನ್ನು ನಾವು ಸ್ವಾಗತಿಸುತ್ತೇವೆ. ಮಸೀದಿಯ ಆಡಳಿತ ಮಂಡಳಿಯು ನಮಗೆ ಒಳ್ಳೆಯ ರೀತಿಯಲ್ಲಿ ಸಹಕರಿಸಿದೆ’, ಎಂದರು. (ಮಸೀದಿಯ ಆಡಳಿತ ಮಂಡಳಿಯು ಸಹಕರಿಸದೇ ಇದ್ದರೆ ಮತ್ತು ಧ್ವನಿವರ್ಧಕದಲ್ಲಿ ಅಜಾನ್ ಕೂಗುವುದನ್ನು ಮುಂದುವರಿಸಿದ್ದರೆ, ಶಾಲೆಯ ಆಡಳಿತ ಮಂಡಳಿಯು ಭಯದಿಂದ ಅದನ್ನು ತಡೆಯಲು ಪ್ರಯತ್ನಿಸುತ್ತಿರಲಿಲ್ಲ ಎನ್ನುವುದೂ ಅಷ್ಟೇ ಸತ್ಯವಾಗಿದೆ !- ಸಂಪಾದಕರು)