ಬಡವಾನಿ (ಮಧ್ಯಪ್ರದೇಶ) ಇಲ್ಲಿಯ ಆದಿವಾಸಿ ಮಹಿಳೆಯರನ್ನು ಮತಾಂತರದ ಪ್ರಯತ್ನ ಮಾಡುವ ಕ್ರೈಸ್ತ ದಂಪತಿಗಳ ಬಂಧನ

ಜಗತ್ತಿನಲ್ಲಿ ಎಲ್ಲಿಯೂ ಹಿಂದೂಗಳಿಂದ ಎಂದಾದರೂ ಕ್ರೈಸ್ತರ ಅಥವಾ ಮುಸಲ್ಮಾನರನ್ನು ಮತಾಂತರ ಮಾಡಿರುವ ಮತ್ತು ಅದರಿಂದ ಅವರ ಬಂಧನವಾಗಿರುವುದು ಕೇಳಿದ್ದೇವೆಯೇ ? ಹಾಗಾದರೆ ಕ್ರೈಸ್ತರಿಂದ ಮತ್ತು ಮುಸಲ್ಮಾನರಿಂದ ಹಿಂದೂಗಳ ಸಂದರ್ಭದಲ್ಲಿ ಹೀಗೇಕೆ ನಡೆಯುತ್ತದೆ ? ಇದರ ಉತ್ತರವನ್ನು ಭಾರತದಲ್ಲಿನ ಜಾತ್ಯತೀತರು, ಧರ್ಮನಿರಪೇಕ್ಷರು ಮತ್ತು ಪ್ರಗತಿ(ಅಧೋಗತಿ)ಪರರು ನೀಡುವರೇ ?- ಸಂಪಾದಕರು 

ಬಡವಾನಿ (ಮಧ್ಯಪ್ರದೇಶ) – ಇಲ್ಲಿ ಉಚಿತ ಶಿಕ್ಷಣ, ಔಷಧಿ ಮುಂತಾದ ಆಮಿಷಗಳನ್ನು ಒಡ್ಡಿ ಆದಿವಾಸಿ ಮಹಿಳೆಯರನ್ನು ಮತಾಂತರಿಸಲು ಪ್ರಯತ್ನಿಸುವ ಓರ್ವ ಕ್ರೈಸ್ತ ದಂಪತಿಯನ್ನು ಬಂಧಿಸಲಾಗಿದೆ. ಅನಾರ ಸಿಂಹ ಜಮರೆ (ವಯಸ್ಸು 35 ವರ್ಷ) ಮತ್ತು ಅವರ ಪತ್ನಿ ಲಕ್ಷ್ಮಿ ಜಮರೆ ಎಂದು ಹೆಸರುಗಳಿಗಿವೆ. (ಮತಾಂತರಿತ ಕ್ರೈಸ್ತರು ಉದ್ದೇಶಪೂರ್ವಕವಾಗಿ ಹಿಂದೂ ಹೆಸರುಗಳನ್ನು ಹಾಗೆ ಇಟ್ಟು ಹಿಂದೂಗಳನ್ನು ಮೋಸ ಮಾಡುತ್ತಾರೆ, ಎಂಬುದನ್ನು ಗಮನದಲ್ಲಿಟ್ಟಕೊಳ್ಳಿ ! – ಸಂಪಾದಕರು) ಇವರಿಬ್ಬರನ್ನು ಮತಾಂತರ ನಿಷೇಧ ಕಾನೂನಿನ ಅಡಿಯಲ್ಲಿ ಬಂಧಿಸಲಾಗಿದೆ. ಈ ಕಾನೂನಿನ ಅಡಿಯಲ್ಲಿ ಆರೋಪ ಸಾಬೀತಾದರೆ 10 ವರ್ಷ ಸೆರೆಮನೆ ಮತ್ತು 1 ಲಕ್ಷ ರೂಪಾಯಿ ದಂಡ, ಹೀಗೆ ಶಿಕ್ಷೆಯಾಗಬಹುದು.