ಕಾನಪೂರ (ಉತ್ತರಪ್ರದೇಶ) ಇಲ್ಲಿ ಹಿಂದೂ ಧರ್ಮವನ್ನು ಸ್ವೀಕರಿಸಲು ಇಚ್ಛೆ ವ್ಯಕ್ತಪಡಿಸಿದ್ದ ಮುಸಲ್ಮಾನ ಯುವಕನಿಗೆ ಮತಾಂಧರಿಂದ ಹಿಗ್ಗಾಮುಗ್ಗಾ ಥಳಿತ

ಈ ವಿಷಯದಲ್ಲಿ ಜಾತ್ಯತೀತರು, ಪ್ರಗತಿ(ಅಧೋಗತಿ)ಪರರು ಮಾತನಾಡುವರೇ ? ಅಥವಾ ಇಂತಹ ಘಟನೆಗಳಲ್ಲಿ ಜಾತ್ಯತೀತತೆ ಮುಂತಾದವನ್ನು ತೋರಿಸುವ ಅವಶ್ಯಕತೆ ಇಲ್ಲ ಎಂದು ಅವರಿಗೆ ಅನಿಸುತ್ತದೆಯೇ ?

ಕಾನಪೂರ (ಜಯಪುರ) – ಇಲ್ಲಿಯ ಕರ್ನಲ್‌ಗಂಜ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಅಸ್ಲಂ ಅಲಿ ಎಂಬ ಯುವಕನು ಮುಸಲ್ಮಾನ ಧರ್ಮವನ್ನು ತ್ಯಜಿಸಿ ಹಿಂದೂ ಧರ್ಮವನ್ನು ಸ್ವೀಕರಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಕ್ಕೆ ಮತಾಂಧರು ಆತನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಂತರ ಅಸ್ಲಂ ಅಲಿಯು ತನ್ನನ್ನು ಥಳಿಸಿದ್ದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾನೆ. ಪೊಲೀಸರು ಸಂಬಂಧಿತರ ಮೇಲೆ ಅಪರಾಧವನ್ನು ದಾಖಲಿಸಿಕೊಂಡಿದ್ದಾರೆ. ಪೊಲೀಸರು ‘ಅವನು ಮನೋ ರೋಗಿ’, ಎಂದು ಹೇಳಿದ್ದಾರೆ. (ಮುಸಲ್ಮಾನ ಧರ್ಮ ತ್ಯಜಿಸಿ ಯಾರಾದರೂ ಹಿಂದೂ ಧರ್ಮಕ್ಕೆ ಬರುತ್ತಿದ್ದರೆ, ಪೊಲೀಸರಿಗೆ ಆತನು ‘ಮನೋರೋಗಿ’ ಎಂದು ಹೇಗೆ ಅನಿಸುತ್ತದೆ ಅಥವಾ ಪೊಲೀಸರೇ ಮನೋರೋಗಿಗಳಾಗಿದ್ದಾರೆಯೇ ? ಎಂಬ ಪ್ರಶ್ನೆಯು ಉದ್ಭವಿಸುತ್ತದೆ. ಉತ್ತರಪ್ರದೇಶದಲ್ಲಿ ಭಾಜಪದ ಸರಕಾರ ಇರುವಾಗ ಅಲ್ಲಿಯ ಪೊಲೀಸರಲ್ಲಿ ಇಂತಹ ಮಾನಸಿಕತೆ ಇರುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ. ಸರಕಾರವು ಇಂತಹ ಪೊಲೀಸರಿಗೆ ತಿಳುವಳಿಕೆ ನೀಡಬೇಕು ! – ಸಂಪಾದಕರು)

ಅಸ್ಲಂ, “ಪರಿಸರದಲ್ಲಿರುವ ಜನರು ನನಗೆ ಬಹಳ ತೊಂದರೆ ನೀಡುತ್ತಾರೆ. ಮಹಮ್ಮದ್ ಅಲಿ ಹೆಸರಿನ ಒಬ್ಬ ತರುಣ ನನಗೆ ಹಿಗ್ಗಾಮುಗ್ಗ ಹೊಡೆದಿದ್ದಾನೆ ಮತ್ತು ಹಲವಾರು ಬಾರಿ ತೊಂದರೆ ನೀಡಿದ್ದಾನೆ. ಈಗ ನಾನು ‘ಜಿಹಾದಿ’ಯಾಗಿ ಬದುಕಲು ಸಾಧ್ಯವಿಲ್ಲ. ಅಕ್ಕ-ಪಕ್ಕದ ಜನರು ನನ್ನನ್ನು ಮುಸಲ್ಮಾನ ಧರ್ಮದಲ್ಲಿಯೇ ಇರುವಂತೆ ಹೇಳುತ್ತಿದ್ದಾರೆ; ಆದರೆ ನನಗೆ ಈಗ ಹಿಂದೂ ಆಗಬೇಕಿದೆ. ನನಗೆ ಹಿಂದೂ ಆಗಿ ನನ್ನ ವ್ಯವಸಾಯ ನಡೆಸುವುದಿದೆ. ಒಂದು ನಾನು ಹಿಂದೂ ಆಗುವೆ ಇಲ್ಲವಾದರೆ ಈ ಸ್ಥಳ ಬಿಟ್ಟು ಬೇರೆಡೆ ಹೋಗುವೆ.” ಎಂದು ಹೇಳಿದನು.