ಕಳ್ಳರಿಂದ ಸ್ಥಳೀಯರ ಮೇಲೆ ಗುಂಡು ಹಾರಾಟ !
ಗೋವಂಶ ಕಳ್ಳತನ ಮಾಡುವವರ ಬಳಿ ಬಂಧೂಕಿನಂತಹ ಶಸ್ತ್ರವಿದೆ, ಇದರಿಂದ ಈ ಅಪರಾಧದ ವ್ಯಾಪ್ತಿ ಗಮನಕ್ಕೆ ಬರುತ್ತದೆ. ಇಂತಹ ಕಳ್ಳರ ಹಿಂದೆ ಗೋಹತ್ಯೆ ಮಾಡುವವರ ಗುಂಪು ಸಕ್ರಿಯವಾಗಿದೆಯೇ, ಎಂಬುದನ್ನು ನೋಡಿ ಅವರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು. ಮೂಲದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಕಠಿಣ ಗೋಹತ್ಯೆ ನಿರ್ಬಂಧ ಕಾಯಿದೆಯಾಗಲಿ, ಎಂದು ಹಿಂದೂಗಳಿಗೆ ಅನಿಸುತ್ತದೆ !
ಅರರಿಯಾ (ಬಿಹಾರ) – ಇಲ್ಲಿನ ಭವಾನೀಪುರ ಗ್ರಾಮದಲ್ಲಿ ಗೋವಂಶದ ಕಳ್ಳತನ ಮಾಡುವ ೫೦ ವರ್ಷದ ಮಹಮ್ಮದ ಸಿದ್ದಿಕೀ ಎಂಬುವವನನ್ನು ಸ್ಥಳೀಯರು ಥಳಿಸಿದ್ದರಿಂದ ಅವನು ಮೃತಪಟ್ಟನು. ಇಲ್ಲಿ ಕೆಲವು ಜನರು ರಾತ್ರಿಯ ಸಮಯದಲ್ಲಿ ಗೋವಂಶವನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿರುವುದು ಸ್ಥಳೀಯರಿಗೆ ಕಂಡು ಬಂದಾಗ ಅವರನ್ನು ಬೆನ್ನಟ್ಟಿದರು. ಬೆನ್ನಟ್ಟುವಾಗ ಆ ಕಳ್ಳರು ಸ್ಥಳೀಯರ ಮೇಲೆ ಗುಂಡುಹಾರಾಟ ಮಾಡಿದರು. ಆದರೂ ಸ್ಥಳೀಯರು ಆ ಕಳ್ಳರ ಪೈಕಿ ಸಿದ್ದಿಕೀ ಎಂಬುವವನನ್ನು ಹಿಡಿದರು ಹಾಗೂ ಅವನನ್ನು ಥಳಿಸಿದರು. ಆಗ ಅವನು ಮೃತಪಟ್ಟನು. ಪೊಲೀಸರು ಈ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದ್ದಾರೆ.
Police have filed an FIR against unknown persons after a man was lynched by a mob allegedly for stealing cattle in #Bihar’s Araria district on December 8. | reports @AmarnathTewaryhttps://t.co/ashdzEKuQS
— The Hindu (@the_hindu) December 11, 2021
ಕೆಲವು ದಿನಗಳ ಹಿಂದೆ ಅರರಿಯಾದ ಪೂರ್ವ ಫತೇಹಪೂರ ಎಂಬ ಗ್ರಾಮದಲ್ಲಿ ೬ ಗೋವಂಶವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು. ಕಳ್ಳರನ್ನು ಹುಡುಕಲು ಹೋದವರ ಮೇಲೆ ಕಳ್ಳರು ಹಲ್ಲೆ ಮಾಡಿದ್ದರು.