ಮತಾಂಧರಿಂದ ಸಾಮಾಜಿಕ ಮಾಧ್ಯಮಗಳ ಮೂಲಕ ಸಿಡಿಎಸ್ ಬಿಪಿನ ರಾವತರವರ ಮೃತ್ಯುವಿನ ಬಗ್ಗೆ ದೊಡ್ಡ ಪ್ರಮಾಣದಲ್ಲಿ ಆನಂದಾಚರಣೆಯನ್ನು ಮಾಡಿದುದರ ಪರಿಣಾಮ !
(ಸಿಡಿಎಸ್ – ಚೀಫ್ ಅಫ್ ಡಿಫೆನ್ಸ್ ಸ್ಟಾಫ್ – ಮೂರೂ ಸೈನ್ಯದಳಗಳ ಪ್ರಮುಖರು)
|
ಕೊಚ್ಚಿ (ಕೇರಳ) – ಸಿಡಿಎಸ್ ಜನರಲ್ ಬಿಪಿನ ರಾವತರವರ ಅಪಘಾತದಲ್ಲಿ ಮೃತ್ಯುವಾದಾಗ ಕೆಲವು ವ್ಯಕ್ತಿಗಳಿಂದ ಅವರಿಗಾದ ಅಪಮಾನದಿಂದ ಬೇಸರಗೊಂಡು ತಾನು ಇಸ್ಲಾಮನ್ನು ತ್ಯಜಿಸಿ ಹಿಂದೂ ಧರ್ಮವನ್ನು ಸ್ವೀಕರಿಸುವ ನಿರ್ಣಯ ತೆಗೆದುಕೊಂಡಿದ್ದೇನೆ ಎಂಬ ಮಾಹಿತಿಯನ್ನು ಕೇರಳದಲ್ಲಿನ ಪ್ರಸಿದ್ಧ ಚಿತ್ರನಿರ್ಮಾಪಕರಾದ ಅಲಿ ಅಕಬರರವರು ನೀಡಿದ್ದಾರೆ. ಅವರು ತಮ್ಮ ಪತ್ನಿಯೊಂದಿಗೆ ಹಿಂದೂ ಧರ್ಮದಲ್ಲಿ ಪ್ರವೇಶಿಸಲಿದ್ದಾರೆ. ರಾವತರವರ ನಿಧನದ ಬಗ್ಗೆ ಮತಾಂಧರು ದೊಡ್ಡ ಸಂಖ್ಯೆಯಲ್ಲಿ ಆನಂದವನ್ನು ವ್ಯಕ್ತಪಡಿಸುವ ಹೇಳಿಕೆ ಮತ್ತು ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಿಂದ ಭಿತ್ತರಿಸಿದ್ದರು. ಆದುದರಿಂದಲೇ ಅಕಬರರವರಿಗೆ ಬೇಸರವೆನಿಸಿ ಅವರು ಮತಾಂತರ ಮಾಡುವ ನಿರ್ಣಯ ತೆಗೆದುಕೊಂಡರು. ಅವರು ಈ ವಿಷಯದಲ್ಲಿನ ಒಂದು ವಿಡಿಯೋವನ್ನು ಫೇಸ್‌ಬುಕನಲ್ಲಿ ಪ್ರಸಾರ ಮಾಡಿದ್ದಾರೆ. ಅವರ ಈ ವಿಡಿಯೋಗೆ ಅನೇಕ ಮುಸಲ್ಮಾನ ಖಾತೆದಾರರು ವಿರೋಧ ವ್ಯಕ್ತಪಡಿಸಿದ್ದಾರೆ, ಹಾಗೆಯೇ ಅವರನ್ನು ಟೀಕಿಸುವಾಗ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ.
#Exclusive | I love my country, so I renounced my religion’, says #Kerala filmmaker #AliAkbar, who renounced Islam after being disturbed by jubilation within certain sections on the death of CDS General Bipin Rawat pic.twitter.com/avs4MbwmYJ
— TIMES NOW (@TimesNow) December 11, 2021
೧. ಅಕಬರರವರು ‘ಶೂರವೀರ ಸೈನ್ಯದಳ ಪ್ರಮುಖರ ಅಪಮಾನ ಮಾಡುವ ರಾಷ್ಟ್ರದ್ರೋಹಿಗಳನ್ನು ಇಸ್ಲಾಮಿನ ಹಿರಿಯ ನೇತಾರರೂ ವಿರೋಧಿಸಲಿಲ್ಲ. ಈ ಎಲ್ಲ ವಿಷಯಗಳಿಂದ ನನ್ನ ಧರ್ಮದ ಮೇಲಿನ ವಿಶ್ವಾಸವೇ ಇಲ್ಲವಾಗಿದೆ. ಆದುದರಿಂದ ಇಂದು ನಾನು ಜನ್ಮದಲ್ಲಿ ದೊರೆತಂತಹ ಈ ಪರಿಚಯವನ್ನು ತ್ಯಜಿಸುತ್ತಿದ್ದೇನೆ. ಇಂದಿನಿಂದ ನಾನು ಮುಸಲ್ಮಾನನಲ್ಲ. ನಾನೋರ್ವ ಭಾರತೀಯನಾಗಿದ್ದೇನೆ. ನನ್ನ ಈ ಉತ್ತರವು ಭಾರತದ ವಿರುದ್ಧ ಸಾವಿರಾರು ‘ಸ್ಮೈಲಿ ಇಮೋಜಿ’ (ಸಾಮಾಜಿಕ ಮಾಧ್ಯಮಗಳಲ್ಲಿ ಇರುವ ಚಿಕ್ಕ ನಗುವ ಚಿತ್ರಗಳು) ಗಳನ್ನು ಶೇರ್ ಮಾಡಿರುವವರಿಗಾಗಿ ಇದೆ’ ಎಂದು ಹೇಳಿದ್ದಾರೆ.
೨. ಇನ್ನೊಂದು ಪೋಸ್ಟ್‌ನಲ್ಲಿ ಅಕಬರರವರು ಜನರಲ್ ರಾವತರವರ ಮೃತ್ಯುವಿನ ನಂತರ ನಗುವ ಜನರನ್ನು ದೇಶವು ಹುಡುಕಿ ಅವರಿಗೆ ಶಿಕ್ಷೆ ನೀಡಬೇಕು. (ಓರ್ವ ಚಲನಚಿತ್ರ ನಿರ್ಮಾಪಕನಿಗೆ ತಿಳಿಯುವ ವಿಷಯವು ಪೊಲೀಸರು ಮತ್ತು ಸರಕಾರಕ್ಕೆ ಏಕೆ ತಿಳಿಯುತ್ತಿಲ್ಲ ? – ಸಂಪಾದಕರು) ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ದೇಶವಿರೋಧಿ ಕೃತ್ಯಗಳು ನಡೆಯುತ್ತಿರುತ್ತವೆ. ರಾವತರವರ ಮೃತ್ಯುವಿನ ಮೇಲೆ ನಗುವುದು, ಇದರ ಉದಾಹರಣೆಯಾಗಿದೆ. ರಾವತರವರ ಮೃತ್ಯುವಿನ ಬಗ್ಗೆ ಸಂಭ್ರಮಾಚರಣೆ ಮಾಡುವವರು ವಿಶಿಷ್ಟ ಧರ್ಮದವರಾಗಿದ್ದಾರೆ. ರಾವತರವರು ಪಾಕಿಸ್ತಾನ ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕರ ವಿರುದ್ಧ ಅನೇಕ ಕಠೋರ ಕಾರ್ಯಾಚರಣೆಗಳನ್ನು ಮಾಡಿದ್ದರು, ಆದುದರಿಂದ ಅವರು ಹೀಗೆ ಮಾಡಿರಬೇಕು’, ಎಂದು ಹೇಳಿದರು.