ಜಿತೇಂದ್ರ ತ್ಯಾಗಿ (ಪೂರ್ವಾಶ್ರಮದ ವಸೀಮ್ ರಿಝವಿ) ಅವರನ್ನು ಪೈಗಂಬರ್ ಮತ್ತು ಕುರಾನ ಬಗ್ಗೆ ಮಾತನಾಡಲು ನಿಷೇಧಿಸಬೇಕು ! – ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ

ಭಾರತದಲ್ಲಿ ಇತರ ಸಮಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂ ದೇವತೆಗಳ ಅವಮಾನವನ್ನು ಬೆಂಬಲಿಸಿ ಅನೇಕರು ಮುಂದೆ ಬರುತ್ತಾರೆ; ಆದರೆ ಅವರ ಪೈಕಿ ಯಾರೂ ಈ ಪ್ರಕರಣದಲ್ಲಿ ಮುಂದೆ ಬಂದು ಅರ್ಜಿಯನ್ನು ವಿರೋಧಿಸುವುದಿಲ್ಲ, ಇದನ್ನು ಗಮನದಲ್ಲಿಟ್ಟುಕೊಳ್ಳಿ !

ಪ್ರಯಾಗರಾಜ (ಉತ್ತರಪ್ರದೇಶ) – ಶಿಯಾ ವಕ್ಫ್ ಬೋರ್ಡ್‌ನ ಮಾಜಿ ಅಧ್ಯಕ್ಷ ಜಿತೇಂದ್ರ ನಾರಾಯಣ ತ್ಯಾಗಿ, ಅಂದರೆ ಪೂರ್ವಾಶ್ರಮದ ವಸೀಮ್ ರಿಝವಿ ಇವರನ್ನು ಮಹಮ್ಮದ್ ಪೈಗಂಬರ್ ಮತ್ತು ಕುರಾನ್ ಈ ವಿಷಯವಾಗಿ ಯಾವುದೇ ರೀತಿಯ ಹೇಳಿಕೆ ನೀಡಲು ನಿಷೇಧಿಸಬೇಕು, ಇಂತಹ ಬೇಡಿಕೆಯ ಅರ್ಜಿಯನ್ನು ‘ಹಜರತ್ ಖ್ವಾಜಾ ಗರಿಬ್ ನವಾಜ್ ಅಸೋಸಿಯೇಷನ್’ನ ಕಾರ್ಯದರ್ಶಿ ಮಹಮ್ಮದ್ ಯೂಸುಫ್ ಉಮರ್ ಅನ್ಸಾರಿ ಇವರು ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದಾರೆ. ಇದರಲ್ಲಿ ತ್ಯಾಗಿ ಅವರನ್ನು ಪ್ರಸಾರಮಾಧ್ಯಮಗಳಲ್ಲಿ ಮಾತನಾಡಲು ತಡೆಯಬೇಕು, ಎಂದು ಬೇಡಿಕೆ ಇಟ್ಟಿದ್ದಾರೆ. ಮೊದಲು ತ್ಯಾಗಿ ಇವರು ಮಹಮ್ಮದ್ ಪೈಗಂಬರ್ ಮತ್ತು ಕುರಾನ ವಿಷಯವಾಗಿ ಹೇಳಿಕೆ ನೀಡಿದ ಪ್ರಕರಣದಲ್ಲಿ ಅನ್ಸಾರಿ ಅವರು ಕೇಂದ್ರೀಯ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.

೧. ಅನ್ಸಾರಿ ಅವರು, ತ್ಯಾಗಿ ಇವರು ಅವರ ‘ಮಹಮ್ಮದ್’ ಈ ಪುಸ್ತಕದಲ್ಲಿ ‘ಇಸ್ಲಾಮಿ ಭಯೋತ್ಪಾದನೆ’ ಮತ್ತು ‘ಹುಸೇನ್‌ನ ಬಲಾತ್ಕಾರ ಕಾಂಡ’ ಇಂತಹ ಶಬ್ದಗಳ ಪ್ರಯೋಗ ಮಾಡಿದ್ದಾರೆ, ಇದು ಸಾಮಾಜಿಕ ಶಾಂತಿ ಮತ್ತು ಭದ್ರತೆಗೆ ಅಪಾಯಕಾರಿಯಾಗಿದೆ, ತ್ಯಾಗಿ ಒಬ್ಬ ಅಪರಾಧಿ ವೃತ್ತಿಯ ವ್ಯಕ್ತಿಯಾಗಿದ್ದಾರೆ. ಅವರ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ೨೭ ದೂರುಗಳು ದಾಖಲಾಗಿವೆ. ಅದರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.

೨. ಅನ್ಸಾರಿ ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ಕುರಾನ್‌ಗೆ ೧ ಸಾವಿರದ ೪೦೦ ವರ್ಷಗಳ ಇತಿಹಾಸವಿದೆ; ಆದರೆ ಈವರೆಗೂ ಯಾರು ಅದರ ಬಗ್ಗೆ ಪ್ರಶ್ನೆ ಎತ್ತಿರಲಿಲ್ಲ. ತ್ಯಾಗಿ ಯಾವುದೇ ಧರ್ಮ ನಂಬುವುದಿಲ್ಲ. ಅವರಲ್ಲಿ ಮಾನವೀಯತೆಯ ಕೊರತೆಯಿದೆ ಎಂದು ಹೇಳಿದರು.