ಬಿಜನೋರಿನ ಬಾಂಬ ಸ್ಫೋಟ ಪ್ರಕರಣದಲ್ಲಿ ೫ ಜಿಹಾದಿ ಭಯೋತ್ಪಾದಕರಿಗೆ ೭ ವರ್ಷ ಜೈಲು ಶಿಕ್ಷೆ
ಉತ್ತರಪ್ರದೇಶದ ಬಿಜನೋರಿನಲ್ಲಿ ೨೦೧೪ ರ ಸೆಪ್ಟೆಂಬರ ೧೨ ರಂದು ನಡೆದ ಸರಣಿ ಬಾಂಬಸ್ಫೋಟದ ಐವರು ಆರೋಪಿಗಳಿಗೆ ರಾಷ್ಟ್ರೀಯ ತನಿಖಾ ದಳದ (ಎನಐಎ) ವಿಶೇಷ ನ್ಯಾಯಾಲಯ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಉತ್ತರಪ್ರದೇಶದ ಬಿಜನೋರಿನಲ್ಲಿ ೨೦೧೪ ರ ಸೆಪ್ಟೆಂಬರ ೧೨ ರಂದು ನಡೆದ ಸರಣಿ ಬಾಂಬಸ್ಫೋಟದ ಐವರು ಆರೋಪಿಗಳಿಗೆ ರಾಷ್ಟ್ರೀಯ ತನಿಖಾ ದಳದ (ಎನಐಎ) ವಿಶೇಷ ನ್ಯಾಯಾಲಯ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
೨೦೦೨ರಲ್ಲಿ ಗೋಧ್ರಾ ರೈಲು ನಿಲ್ದಾಣದಲ್ಲಿ ಸಾಬರಮತಿ ಎಕ್ಸಪ್ರೆಸನಲ್ಲಿ ೫೯ ಕಾರಸೇವಕರನ್ನು (ಅಯೋಧ್ಯೆಯ ಶ್ರೀರಾಮ ಮಂದಿರಕ್ಕಾಗಿ ಚಳವಳಿಗಾರರು) ಸಜೀವ ದಹನ ಮಾಡಿದ ಪ್ರಕರಣದ ಆರೋಪಿ ರಫೀಕ ಭಟುಕನನ್ನು ಇಲ್ಲಿನ ಸೆಷನ್ಸ ನ್ಯಾಯಾಲಯವು ದೋಷಿ ಎಂದು ತೀರ್ಪು ನೀಡಿ ಜೀವಾವಧಿ ಶಿಕ್ಷೆ ವಿಧಿಸಿದೆ.
ಭಾರತೀಯ ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲ್ ಅವರ ‘ಕಾಳಿ’ ಶೀರ್ಷಿಕೆಯ ಸಾಕ್ಷ್ಯಚಿತ್ರದ ವೀಡಿಯೋದಲ್ಲಿ ಶ್ರೀ ಮಹಾಕಾಳಿದೇವಿಯಂತೆ ವಸ್ತ್ರ ಧರಿಸಿರುವ ನಟಿಯೊಬ್ಬರು ಸಿಗರೇಟ್ ಸೇದುತ್ತಿರುವುದನ್ನು ತೋರಿಸಲಾಗಿದೆ. ಇದರ ಭಿತ್ತಿಪತ್ರವನ್ನೂ ಪ್ರಸಾರ ಮಾಡಲಾಗಿದೆ.
ತಮಿಳುನಾಡಿನ ಅಕ್ರಮ ಮಸೀದಿಗೆ ಬೀಗ ಹಾಕಲು ನ್ಯಾಯಾಲಯದ ಆದೇಶ ಇರುವಾಗ ಮುಸಲ್ಮಾನರು ನಮಾಜ ಮೂಲಕ ರಸ್ತೆ ತಡೆದು ಪ್ರತಿಭಟನೆ!
ಇಲ್ಲಿ ಒಂದು ಕಾನೂನು ಬಾಹಿರ ಮಸೀದಿಗೆ ಬೀಗ ಜಡಿಯಲು ಪ್ರಯತ್ನಿಸಿದಾಗ ಮುಸಲ್ಮಾನರು ಅಲ್ಲಿ ‘ರಸ್ತೆ ತಡೆ’ ಆಂದೋಲನ ನಡೆಸಿದ ಘಟನೆ ನಡೆದಿದೆ. ಅವರು ರಸ್ತೆಯ ಮೇಲೆ ನಮಾಜು ಪಠಣ ಆರಂಭಿಸಿ ದಾರಿಯನ್ನು ತಡೆದಿದ್ದಾರೆ. ಆದುದರಿಂದ ಇಲ್ಲಿ ದೊಡ್ಡ ಪ್ರಮಾಣದಲ್ಲಿ ಸಂಚಾರ ವ್ಯವಸ್ಥೆಗೆ ಅಡಚಣೆಯಾಯಿತು.
ಇಲ್ಲಿನ ಧನೋರಿಯಾ ಎಂಬ ಊರಿನ ಓರ್ವ ಆದಿವಾಸಿ ಮಹಿಳೆಯನ್ನು ಭೂಮಿಯ ವಾದದಿಂದಾಗಿ ಕೆಲವರು ಜೀವಂತವಾಗಿ ಸುಡಲು ಪ್ರಯತ್ನಿಸಿದರು. ಇದರಲ್ಲಿ ಆ ಮಹಿಳೆಯು ಶೇ. ೮೦ ಸುಟ್ಟುಹೋಗಿದ್ದಾಳೆ. ಆಕೆಯನ್ನು ಉಪಚಾರಕ್ಕಾಗಿ ಭೋಪಾಲದಲ್ಲಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಇಲ್ಲಿಯ ಭುವಾಪುರ ದೇವಗಾವ ಎಂಬಲ್ಲಿ ಹನುಮಾನ ದೇವಸ್ಥಾನದಲ್ಲಿ ಪಂಕಜ ಶುಕ್ಲಾ ಎಂಬ ೩೫ ವಯಸ್ಸಿನ ಯುವಕನ ಶಿರಚ್ಛೇದ ಮಾಡಿ ಹತ್ಯೆ ಮಾಡಲಾಗಿದೆ. ಮನೆಯಲ್ಲಿ ಸೆಕೆ ಹೆಚ್ಚಾಗಿರುವುದರಿಂದ ಪಂಕಜ ದೇವಸ್ಥಾನದಲ್ಲಿ ಮಲಗಿರುವಾಗ ಕೆಲವು ಅಜ್ಞಾತರು ಅವರ ಹತ್ಯೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇಲ್ಲಿ ಎಲ್ ಎಲ್ ಬಿ ವ್ಯಾಸಂಗ ಮಾಡುವ ೨೧ ವಯಸ್ಸಿನ ವಿದ್ಯಾರ್ಥಿ ಯಶ್ ರಸ್ತೋಗಿ ಇವನ ಕತ್ತುಹಿಸುಕಿ ಮತ್ತು ನಂತರ ಚಾಕುವಿನಿಂದ ಇರಿದು ಕೊಲೆ ಮಾಡಲಾಯಿತು. ಈ ಪ್ರಕರಣದಲ್ಲಿ ಅವನ ಸ್ನೇಹಿತರಾದ ಸಲ್ಮಾನ್, ಶಹವೇಜ, ಅಲಿ ಜಾನ್ ಮತ್ತು ಇಮ್ರಾನ್ ಇವರನ್ನು ಬಂಧಿಸಲಾಗಿದೆ.
ಭಾರತೀಯ ಸೈನ್ಯ ಒಂದೇ ರಾತ್ರಿಯಲ್ಲೇ ಜಮ್ಮು ಕಾಶ್ಮೀರದ ಎರಡು ಸೇತುವೆಗಳನ್ನು ಕಟ್ಟಿದ್ದಾರೆ. ಆದ್ದರಿಂದ ಅಮರನಾಥ ಯಾತ್ರೆ ಪ್ರಾರಂಭವಾಗಿದೆ. ಅಮರನಾಥ ಯಾತ್ರೆಯ ಮಾರ್ಗದಲ್ಲಿ ಬಾಲಟಾಲ ಎಂಬಲ್ಲಿ ಎರಡು ಸೇತುವೆಗಳು ಭೂಕುಸಿತದಿಂದ ಕೊಚ್ಚಿ ಹೋಗಿದ್ದವು, ಅಮರನಾಥ ಯಾತ್ರೆಯ ಮಾರ್ಗದಲ್ಲಿ ವಿಘ್ನ ನಿರ್ಮಾಣವಾಗಿತ್ತು.
ಅಮರನಾಥ ಯಾತ್ರೆಯ ಮೇಲೆ ಭಯೋತ್ಪಾದಕರ ದಾಳಿಯ ಸಂಚು ಪೊಲೀಸರು ವಿಫಲಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ಲಷ್ಕರೇ ತೊಯ್ಬಾ ಜಿಹಾದಿ ಉಗ್ರರ ಸಂಘಟನೆಯ ೨ ಉಗ್ರರನ್ನು ವಶಕ್ಕೆ ಪಡೆದು ಅವರಿಂದ ದೊಡ್ಡ ಪ್ರಮಾಣದಲ್ಲಿ ಮುದ್ದು ಗುಂಡು ಜಪ್ತಿ ಮಾಡಿದ್ದಾರೆ.