ಗೋಧ್ರಾ ಹತ್ಯಾಕಾಂಡದಲ್ಲಿ ರಫೀಕ ಭಟುಕಗೆ ಜೀವಾವಧಿ ಶಿಕ್ಷೆ

ಗೋಧ್ರಾ(ಗುಜರಾತ) : ೨೦೦೨ರಲ್ಲಿ ಗೋಧ್ರಾ ರೈಲು ನಿಲ್ದಾಣದಲ್ಲಿ ಸಾಬರಮತಿ ಎಕ್ಸಪ್ರೆಸನಲ್ಲಿ ೫೯ ಕಾರಸೇವಕರನ್ನು (ಅಯೋಧ್ಯೆಯ ಶ್ರೀರಾಮ ಮಂದಿರಕ್ಕಾಗಿ ಚಳವಳಿಗಾರರು) ಸಜೀವ ದಹನ ಮಾಡಿದ ಪ್ರಕರಣದ ಆರೋಪಿ ರಫೀಕ ಭಟುಕನನ್ನು ಇಲ್ಲಿನ ಸೆಷನ್ಸ ನ್ಯಾಯಾಲಯವು ದೋಷಿ ಎಂದು ತೀರ್ಪು ನೀಡಿ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಘಟನೆ ನಡೆದ ೧೯ ವರ್ಷಗಳ ನಂತರ ರಫೀಕನನ್ನು ಗೋಧ್ರಾದಲ್ಲಿ ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಈತ ದೋಷಿ ಎಂದು ಸಾಬೀತಾದ ೩೫ ನೇ ಆರೋಪಿಯಾಗಿದ್ದಾನೆ. ಇದಕ್ಕೂ ಮುನ್ನ ವಿಶೇಷ ನ್ಯಾಯಾಲಯವು ೨೦೧೧ರ ಮಾರ್ಚನಲ್ಲಿ ೩೧ ಮಂದಿ, ೨೦೧೯ರಲ್ಲಿ ಇಬ್ಬರು ಹಾಗೂ ೨೦೧೯ರಲ್ಲಿ ಒಬ್ಬನನ್ನು ದೋಷಿ ಎಂದು ಘೋಷಿಸಿತ್ತು.

ಸಂಪಾದಕೀಯ ನಿಲುವು

ಇಂತಹವರಿಗೆ ಮರಣದಂಡನೆಯೇ ಸೂಕ್ತ ಎಂದು ಜನರಿಗೆ ಅನಿಸುತ್ತದೆ!