’ಕಾಳಿ’ ಎಂಬ ಹೆಸರಿನ ಸಾಕ್ಷ್ಯಚಿತ್ರದಲ್ಲಿ ಶ್ರೀ ಕಾಳಿಮಾತೆ ಸಿಗರೇಟ್ ಸೇದುವುದನ್ನು ತೋರಿಸಲಾಗಿದೆ !

  • ಸಾಕ್ಷ್ಯಚಿತ್ರದಲ್ಲಿ ಶ್ರೀ ಮಹಾಕಾಳಿದೇವಿಯ ಅವಮಾನ !

  • ಸಾಮಾಜಿಕ ಜಾಲತಾಣಗಳ ಮೂಲಕ ಪ್ರಧಾನಿ ಮತ್ತು ಗೃಹ ಸಚಿವರಿಗೆ ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಿಂದೂಗಳಿಂದ ಮನವಿ

ಈ ಚಿತ್ರ ಪ್ರಕಟಿಸುವುದರ ಹಿಂದೆ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವನ್ನು ಉಂಟುಮಾಡುವುದಾಗಿರದೆ ನಿಜ ಸ್ಥಿತಿ ತಳಿಸುವುದಾಗಿದೆ 

ಮುಂಬಯಿ : ಭಾರತೀಯ ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲ್ ಅವರ ‘ಕಾಳಿ’ ಶೀರ್ಷಿಕೆಯ ಸಾಕ್ಷ್ಯಚಿತ್ರದ ವೀಡಿಯೋದಲ್ಲಿ ಶ್ರೀ ಮಹಾಕಾಳಿದೇವಿಯಂತೆ ವಸ್ತ್ರ ಧರಿಸಿರುವ ನಟಿಯೊಬ್ಬರು ಸಿಗರೇಟ್ ಸೇದುತ್ತಿರುವುದನ್ನು ತೋರಿಸಲಾಗಿದೆ. ಇದರ ಭಿತ್ತಿಪತ್ರವನ್ನೂ ಪ್ರಸಾರ ಮಾಡಲಾಗಿದೆ. ‘ರೈಮ್ಸ್ ಆಫ್ ಕೆನಡಾ’ ಎಂಬ ಕಾರ್ಯಕ್ರಮದ ಸಂದರ್ಭದಲ್ಲಿ ಈ ಭಿತ್ತಿಪತ್ರವನ್ನು ಪ್ರಸಾರ ಮಾಡಲಾಯಿತು. ಇದರಲ್ಲಿ ಮಹಿಳೆಯ ಕೈಯಲ್ಲಿ ಸಲಿಂಗಕಾಮಿಗಳ ಮಳೆಬಿಲ್ಲಿನ ಧ್ವಜವು ಕಂಡುಬರುತ್ತದೆ. ಈ ಅವಮಾನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ‘ಲೀನಾ ಮಣಿಮೇಕಲ್ ಇವರನ್ನು ಬಂಧಿಸಿ’, ಎಂಬ ‘#ArrestLeenaManimekal’ ಎಂಬ ಹ್ಯಾಶ್‌ಟ್ಯಾಗ್ ಅನ್ನು ಅನೇಕರು ಬಳಸಿದ್ದಾರೆ. ಜೊತೆಗೆ ಸಾಕ್ಷ್ಯಚಿತ್ರದ ಬಗ್ಗೆ ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವರಿಗೂ ಮನವಿ ಮಾಡಲಾಗಿದೆ.

ಸಾಮಾಜಿಕ ಮಾಧ್ಯಮಗಳ ಮೂಲಕ ವ್ಯಕ್ತವಾದ ಪ್ರತಿಕ್ರಿಯೆಗಳು

೧. ಇದು ಉದ್ದೇಶಪೂರ್ವಕವಾಗಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ಪ್ರಯತ್ನವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ಕಲೆಯ ಹೆಸರಿನಲ್ಲಿ ಏನನ್ನೂ ಮಾಡಬಹುದು ಎಂದಲ್ಲ.

೨. ನಾನು ಲಿನಾ ಮಣಿಮೆಕಲ ಇವರಲ್ಲಿ, ಅವರು ಈ ಭಿತ್ತಿಪತ್ರವನ್ನು ತೆಗೆದುಹಾಕಲು ವಿನಂತಿಸುತ್ತೇನೆ. ಇದರಿಂದ ಕೋಟ್ಯಂತರ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗುತ್ತಿದೆ.

೩. ಈ ಭಿತ್ತಿಪತ್ರ ನೋಡಿ ನಾನು ಬೆಚ್ಚಿಬಿದ್ದೆ. ಎಂ.ಎಫ್. ಹುಸೇನ್‌ನಿಂದ ಹಿಡಿದು ನಿಮ್ಮ ವರೆಗೆ ಎಲ್ಲರೂ ಹಿಂದೂ ದೇವತೆಗಳನ್ನು ಗೌರವಿಸದೇ ಇರುವುದರಲ್ಲೇ ನಿಮಗೆ ಸಂತೋಷವಾಗುತ್ತದೆ ಮತ್ತು ಅದೇ ನಿಮ್ಮ ಉದ್ದೇಶವಾಗಿದೆ. ಇದು ಆಕ್ಷೇಪಾರ್ಹವಾಗಿದೆ. ದಯವಿಟ್ಟು ಈ ಭಿತ್ತಿಪತ್ರವನ್ನು ತೆಗೆದುಹಾಕಿ.

ಸಂಪಾದಕೀಯ ನಿಲುವು

ಭಾರತದಲ್ಲಿ ಪಾಕಿಸ್ತಾನದಲ್ಲಿರುವಂತೆ ಈಶನಿಂದನೆ ವಿರೋಧಿ ಕಾನೂನು ಇರುವಂತೆ ಕಾನೂನು ಇಲ್ಲದ್ದರಿಂದ ಈ ರೀತಿ ದೇವತೆಗಳ ಅವಮಾನ ಮಾಡುವವರು ರಾಜಾರೋಷವಾಗಿ ಇರುತ್ತಾರೆ. ಕೇಂದ್ರ ಸರಕಾರ ಗಲ್ಲು ಶಿಕ್ಷೆ ಇರುವಂತಹ ಕಾನೂನನ್ನು ಜಾರಿಗೆ ತರಬೇಕು ಎಂಬುದು ಹಿಂದೂಗಳಿಗೆ ಅನಿಸುತ್ತದೆ !