ಮೆರಠನಲ್ಲಿ ಮುಸಲ್ಮಾನ ಸ್ನೇಹಿತರಿಂದ ಹಿಂದೂ ಯುವಕನ ಕೊಲೆ !

ತುಂಡುತುಂಡಾಗಿರಿಸಿದ ಮೃತದೇಹ ಪತ್ತೆ !

ಮೆರಠ (ಉತ್ತರ ಪ್ರದೇಶ) : ಇಲ್ಲಿ ಎಲ್ ಎಲ್ ಬಿ ವ್ಯಾಸಂಗ ಮಾಡುವ ೨೧ ವಯಸ್ಸಿನ ವಿದ್ಯಾರ್ಥಿ ಯಶ್ ರಸ್ತೋಗಿ ಇವನ ಕತ್ತುಹಿಸುಕಿ ಮತ್ತು ನಂತರ ಚಾಕುವಿನಿಂದ ಇರಿದು ಕೊಲೆ ಮಾಡಲಾಯಿತು. ಈ ಪ್ರಕರಣದಲ್ಲಿ ಅವನ ಸ್ನೇಹಿತರಾದ ಸಲ್ಮಾನ್, ಶಹವೇಜ, ಅಲಿ ಜಾನ್ ಮತ್ತು ಇಮ್ರಾನ್ ಇವರನ್ನು ಬಂಧಿಸಲಾಗಿದೆ. ಕೊಲೆಯ ನಂತರ ಈ ನಾಲ್ಕು ಜನ ಯಶ್ ಮೃತದೇಹವನ್ನು ಅನೇಕ ತುಂಡಗಳಾಗಿ ಕತ್ತರಿಸಿ ನಾಲೆಯಲ್ಲಿ ಎಸೆದಿದ್ದಾರೆ. ಕೊಲೆಯ ಮೊದಲು ಈ ನಾಲ್ಕು ಜನರು ಯಶ ಇವರ ಮೇಲೆ ಲೈಂಗಿಕ ಅತ್ಯಾಚಾರವೆಸಗಿದ್ದಾರೆ ಎಂಬ ಮಾಹಿತಿ ಪೊಲೀಸರು ನೀಡಿದರು. ಈ ನಾಲ್ಕು ಜನರು ಸಮಲೈಂಗಿಕರು. ಯಶ್ ಈ ನಾಲ್ಕು ಜನರ ಅಶ್ಲೀಲ ವೀಡಿಯೋ ತಯಾರಿಸಿದ್ದನು ಮತ್ತು ಅವರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದನು, ಎಂಬುವುದು ಪೊಲೀಸರ ಅಭಿಪ್ರಾಯವಾಗಿದೆ.

ಸಂಪಾದಕೀಯ ನಿಲುವು

ಇಂತಹವರಿಗೆ ಕಠಿಣ ಶಿಕ್ಷೆ ಆಗುವುದಕ್ಕೆ ಉತ್ತರ ಪ್ರದೇಶ ಸರಕಾರ ಪ್ರಯತ್ನಿಸಬೇಕೆಂದು ಹಿಂದೂಗಳಿಗೆ ಅನಿಸುತ್ತದೆ !