ಅಮರನಾಥ ಯಾತ್ರೆಯ ಮೇಲೆ ಉಗ್ರ ದಾಳಿಯ ಸಂಚು ವಿಫಲ !

೨ ಭಯೋತ್ಪಾದಕರ ಬಂಧನ

ಹೊಸ ದೆಹಲಿ – ಅಮರನಾಥ ಯಾತ್ರೆಯ ಮೇಲೆ ಭಯೋತ್ಪಾದಕರ ದಾಳಿಯ ಸಂಚು ಪೊಲೀಸರು ವಿಫಲಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ಲಷ್ಕರೇ ತೊಯ್ಬಾ ಜಿಹಾದಿ ಉಗ್ರರ ಸಂಘಟನೆಯ ೨ ಉಗ್ರರನ್ನು ವಶಕ್ಕೆ ಪಡೆದು ಅವರಿಂದ ದೊಡ್ಡ ಪ್ರಮಾಣದಲ್ಲಿ ಮುದ್ದು ಗುಂಡು ಜಪ್ತಿ ಮಾಡಿದ್ದಾರೆ. ಫೈಸಲ್ ಅಹಮದ್ ದಾರ್ ಮತ್ತು ತಾಲಿಬ್ ಹುಸೇನ್ ಬಂಧಿಸಲಾದ ಉಗ್ರರು.

ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಜೂನ್ ೩೦ ರಂದು ಯಾತ್ರಿಕರ ಮೊದಲ ಗುಂಪು ಅಮರನಾಥ ಕಡೆ ಸಾಗುತ್ತಿತ್ತು. ಯಾತ್ರೆಯ ಮೇಲೆ ದಾಳಿ ಮಾಡುವ ಉದ್ದೇಶ ಈ ಉಗ್ರರಿಗಿತ್ತು. ಜಮ್ಮು ಕಾಶ್ಮೀರ್ ರಾಷ್ಟ್ರೀಯ ಹೆದ್ದಾರಿಯ ಮೇಲೆ ಈ ಆಕ್ರಮಣ ಮಾಡಲಾಗುವುದಿತ್ತು. ತಾಲಿಬ ಹುಸೇನ್ ಎಂಬವನು ಈ ದಾಳಿಯ ಸೂತ್ರಧಾರನಾಗಿದ್ದನು. ಅವನು ಪೈಸಲ್ ಜೊತೆಗೆ ಸಂಪರ್ಕದಲ್ಲಿದ್ದು, ಅದರ ನಂತರ ಅವರಿಬ್ಬರೂ ತೂಕಸಾನ ಜಿಲ್ಲೆಯ ಊರಿನಲ್ಲಿ ಅಡಗಿ ಕುಳಿತಿದ್ದರು. ಅವರು ಮುಂದಿನ ಹೆಜ್ಜೆ ಎತ್ತುವ ಮುನ್ನ ಪೊಲೀಸರು ಸ್ಥಳೀಯ ನಾಗರಿಕರ ಸಹಾಯದಿಂದ ಅವರನ್ನು ಬಂಧಿಸಿದರು. ತಾಲಿಬ ಹುಸೇನ್ ಇವನು ಈ ಮೊದಲು ರಜೌರಿಯಲ್ಲಿ ಎರಡು ಬಾಂಬ್ ಸ್ಫೋಟದ ಪರೀಕ್ಷಣೆ ನಡೆಸಿದ್ದನು.

ಉಗ್ರರನ್ನು ಬಂಧಿಸುವವರಿಗೆ ಬಹುಮಾನ !

ಈ ಉಗ್ರರನ್ನು ಹಿಡಿದು ಕೊಟ್ಟ ಗ್ರಾಮೀಣ ಪೊಲೀಸರಿಗೆ ೨ ಲಕ್ಷ ರೂಪಾಯಿ, ಹಾಗೂ ಜಮ್ಮು ಕಾಶ್ಮೀರದ ಉಪರಾಜ್ಯಪಾಲರಾದ ಮನೋಜ ಸಿಂಹ ಇವರು ೫ ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ.

ಸಂಪಾದಕೀಯ ನಿಲುವು

ಸ್ವಾತಂತ್ರ್ಯದ ೭೪ ವರ್ಷಗಳ ನಂತರ ಇಲ್ಲಿಯವರೆಗೆ ಸರಕಾರಗಳ ಭಯೋತ್ಪಾದಕರಲ್ಲಿ ಭಯಹುಟ್ಟಿಸುವ ಹಾಗೆ ಕಠಿಣದಲ್ಲಿ ಕಠಿಣ ಕ್ರಮ ಕೈಗೊಳ್ಳದೇ ಇರುವುದರಿಂದ ಪ್ರತಿ ವರ್ಷ ಭಯೋತ್ಪಾದಕರು ಹಿಂದೂಗಳು ಯಾತ್ರೆಯನ್ನು ಗುರಿಯಾಗಿಸುತ್ತಾರೆ. ಈ ಪರಿಸ್ಥಿತಿ ಇಲ್ಲಿಯವರೆಗೆ ಎಲ್ಲಾ ಸಾರಕಾರಗಳಿಗೆ ಲಜ್ಜಾಸ್ಪದವಾಗಿದೆ !

ಇನ್ನು ಎಷ್ಟು ವರ್ಷ ಹಿಂದೂಗಳ ಯಾತ್ರೆ ಭಯೋತ್ಪಾದಕರ ಭಯದ ನೆರಳಿನಲ್ಲಿ ನಡೆಯುವುದು? ಈ ಪರಿಸ್ಥಿತಿ ಹಿಂದೂ ರಾಷ್ಟ್ರದ ಅನಿವಾರ್ಯತೆಯನ್ನು ತೋರಿಸುತ್ತದೆ.