ಬಿಜನೋರಿನ ಬಾಂಬ ಸ್ಫೋಟ ಪ್ರಕರಣದಲ್ಲಿ ೫ ಜಿಹಾದಿ ಭಯೋತ್ಪಾದಕರಿಗೆ ೭ ವರ್ಷ ಜೈಲು ಶಿಕ್ಷೆ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರಪ್ರದೇಶದ ಬಿಜನೋರಿನಲ್ಲಿ ೨೦೧೪ ರ ಸೆಪ್ಟೆಂಬರ ೧೨ ರಂದು ನಡೆದ ಸರಣಿ ಬಾಂಬಸ್ಫೋಟದ ಐವರು ಆರೋಪಿಗಳಿಗೆ ರಾಷ್ಟ್ರೀಯ ತನಿಖಾ ದಳದ (ಎನಐಎ) ವಿಶೇಷ ನ್ಯಾಯಾಲಯ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅವರ ಹೆಸರುಗಳು ಹುಸ್ನಾ, ಅಬ್ದುಲ್ಲಾ, ರಯಿಸ ಅಹ್ಮದ, ನದೀಮ ಮತ್ತು ಫುರ್ಕಾನ. ಇದೇ ಸ್ಫೊಟದ ೨ ಅರೋಪಿಗಳು ತೆಲಂಗಾಣ ಪೊಲೀಸರು ನಡೆಸಿದ ಎನಕೌಂಟರನಲ್ಲಿ ಅಸ್ಲಂ ಅಯುಬ ಮತ್ತು ಝಾಕೀರ ಬದ್ರುಲ ಮೃತಪಟ್ಟಿದ್ದರು. ಇವರಿಬ್ಬರು ಸಿಎಂಐ ಎಂಬ ನಿಷೇಧಿತ ಭಯೋತ್ಪಾದಕ ಗುಂಪಿನ ಸದಸ್ಯರಾಗಿದ್ದರು.

ಸಂಪಾದಕೀಯ ನಿಲುವು

ಇಂತಹ ಭಯೋತ್ಪಾದಕರಿಗೆ ಮರಣದಂಡನೆ ವಿಧಿಸಬೇಕೆಂದು ಜನರಿಗೆ ಅನಿಸುತ್ತದೆ!