ತಿರುಪೂರ(ತಮಿಳುನಾಡು)ದಲ್ಲಿನ ಕಾನೂನು ಬಾಹಿರ ಮಸೀದಿಗೆ ಬೀಗ ಜಡಿಯುವ ನ್ಯಾಯಾಲಯದ ಆದೇಶವನ್ನು ವಿರೋಧಿಸಿ ಮುಸಲ್ಮಾನರಿಂದ ‘ರಸ್ತೆ ತಡೆ’ ಆಂದೋಲನ !

ತಿರುಪೂರ (ತಮಿಳುನಾಡು) – ಇಲ್ಲಿ ಒಂದು ಕಾನೂನು ಬಾಹಿರ ಮಸೀದಿಗೆ ಬೀಗ ಜಡಿಯಲು ಪ್ರಯತ್ನಿಸಿದಾಗ ಮುಸಲ್ಮಾನರು ಅಲ್ಲಿ ‘ರಸ್ತೆ ತಡೆ’ ಆಂದೋಲನ ನಡೆಸಿದ ಘಟನೆ ನಡೆದಿದೆ. ಅವರು ರಸ್ತೆಯ ಮೇಲೆ ನಮಾಜು ಪಠಣ ಆರಂಭಿಸಿ ದಾರಿಯನ್ನು ತಡೆದಿದ್ದಾರೆ. ಆದುದರಿಂದ ಇಲ್ಲಿ ದೊಡ್ಡ ಪ್ರಮಾಣದಲ್ಲಿ ಸಂಚಾರ ವ್ಯವಸ್ಥೆಗೆ ಅಡಚಣೆಯಾಯಿತು. ಕಂದಾಯ ವಿಭಾಗವು ಮಹಾಲಕ್ಷ್ಮೀ ನಗರದಲ್ಲಿರುವ ಕಾನೂನು ಬಾಹಿರ ಮಸೀದಿಯನ್ನು ಮುಚ್ಚಲು ಪ್ರಯತ್ನಿಸಿದಾಗ ಈ ಘಟನೆ ನಡೆದಿದೆ. ಈ ಮಸೀದಿಯು ಕಳೆದ ೧೦ ವರ್ಷಗಳಿಂದ ಇದೆ. ೨೦೧೬ರಲ್ಲಿ ಮದ್ರಾಸ ಉಚ್ಚ ನ್ಯಾಯಾಲಯವು ಕಂದಾಯ ವಿಭಾಗಕ್ಕೆ ಈ ಮಸೀದಿಯನ್ನು ಮುಚ್ಚಲು ಆದೇಶಿಸಿತ್ತು. ಆದರೆ ಅದನ್ನು ಮಾಡಲು ಆಗಿರಲಿಲ್ಲ. ಅನಂತರ ನ್ಯಾಯಾಲಯವು ಜೂನ ೩೦, ೨೦೨೨ರ ವರೆಗೆ ಮಸೀದಿಯನ್ನು ಮುಚ್ಚಲು ಸಮಯ ಮಿತಿ ಹಾಕಿತ್ತು.

ಕಂದಾಯ ವಿಭಾಗದ ಅಧಿಕಾರಿಗಳು ಮಸೀದಿಯನ್ನು ಮುಚ್ಚಲು ಹೋದಾಗ ೩೦೦ಕ್ಕೂ ಹೆಚ್ಚಿನ ಮುಸಲ್ಮಾನರು ತಿರುಪೂರ ನಗರಸಭೆಯ ಕಾರ್ಯಾಲಯದ ಹೊರಗೆ ರಸ್ತೆ ತಡೆ ಆಂದೋಲನವನ್ನು ಆರಂಭಿಸಿದ್ದಾರೆ. ಇದರೊಂದಿಗೆ ಅವರು ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಿದ್ದಾರೆ. ಅವರ ಮೇಲೆ ನ್ಯಾಯಾಲಯವು ಜುಲೈ ೪ರ ವರೆಗೆ ಪರಿಹಾರೋಪಾಯ ಹುಡುಕಲು ಆದೇಶಿಸಿದೆ.

ಮುಸಲ್ಮಾನರ ಆಂದೋಲನದ ಸಮಯದಲ್ಲಿ ಮೂಕದರ್ಶಕ ಪೊಲೀಸರ ವಿರುದ್ಧ ಹಿಂದುತ್ತ್ವನಿಷ್ಠರೂ ರಸ್ತೆ ತಡೆ ನಡೆಸಿದರು !

ಮುಸಲ್ಮಾನರ ಆಂದೋಲನದ ಸಮಯದಲ್ಲಿ ಪೊಲೀಸರು ಮೂಕದರ್ಶಕರಾಗಿದ್ದನ್ನು ವಿರೋಧಿಸಿ ಹಿಂದೂ ಮುನ್ನಾನಿ (ಹಿಂದೂ ಮುಂಚೂಣಿಯಲ್ಲಿ) ಸಂಘಟನೆಯೂ ರಸ್ತೆ ತಡೆ ಆಂದೋಲನವನ್ನು ನಡೆಸಿತು. (ಕಾನೂನು ಪಾಲನೆ ಮಾಡದ ಮುಸಲ್ಮಾನರು ಕಾನೂನನ್ನು ಕೈಗೆತ್ತಿ ಆಂದೋಲನ ಮಾಡುತ್ತಿರುವಾಗ ಅವರ ಮೇಲೆ ಯಾವುದೇ ಕಾರ್ಯಾಚರಣೆಯನ್ನು ಮಾಡದ ಪೊಲೀಸರು ಹಿಂದೂಗಳು ಏಕೆ ಕರ ನೀಡಿ ಸಾಕಬೇಕು ? – ಸಂಪಾದಕರು) ಅಧಿಕಾರದಲ್ಲಿರುವ ದ್ರವಿಡ ಮುನ್ನೇತ್ರ ಕಳಘಮ (ದ್ರವಿಡ ಪ್ರಗತಿ ಸಂಘ) ಪಕ್ಷದ ಸ್ಥಳೀಯ ಶಾಸಕರು ಮುಸಲ್ಮಾನರನ್ನು ಸಮರ್ಥಿಸುತ್ತಿರುವುದಾಗಿ ಹಿಂದೂ ಮುನ್ನಾನಿಯು ಮುಖ್ಯಮಂತ್ರಿ ಸ್ಟಾಲಿನರವರಿಗೆ ಪತ್ರ ಬರೆದಿದೆ.

ಸಂಪಾದಕೀಯ ನಿಲುವು

ನ್ಯಾಯಾಲಯದ ಆದೇಶದ ಅವಮಾನ ಮಾಡುವವರ ವಿರುದ್ಧ ದೇಶದಲ್ಲಿನ ಒಂದೇ ಒಂದು ಜಾತ್ಯಾತೀತವಾದಿ ರಾಜಕೀಯ ಪಕ್ಷ ಅಥವಾ ಸಂಘಟನೆಯು ಚಕಾರವೆತ್ತುತ್ತಿಲ್ಲ, ಎಂಬುದನ್ನು ಗಮನದಲ್ಲಿಡಿ !