ಹಿಮಾಚಲ ಪ್ರದೇಶದಲ್ಲಿ ಈಗ ಬಲವಂತವಾಗಿ ಸಾಮೂಹಿಕ ಮತಾಂತರ ಮಾಡಿದರೆ ೧೦ ವರ್ಷದ ಜೈಲು ಶಿಕ್ಷೆ

ಭಾಜಪ ಅಧಿಕಾರದಲ್ಲಿರುವ ಹಿಮಾಚಲ ಪ್ರದೇಶದಲ್ಲಿ ಸಾಮೂಹಿಕ ಮತಾಂತರದ ವಿರುದ್ಧ ಕಾನೂನಿನಲ್ಲಿ ತಿದ್ದುಪಡಿ ಮಾಡಲಾಗಿದೆ. ಈಗ ಈ ಕಾನೂನಿನ ಪ್ರಕಾರ ಬಲವಂತವಾಗಿ ಮತಾಂತರಗೊಳಿಸಿದರೆ ೧೦ ವರ್ಷ ಜೈಲು ಶಿಕ್ಷೆ ಆಗಬಹುದು. ಈ ಮೊದಲು ಮತಾಂತರ ಗೊಳಿಸಿದರೆ ೭ ವರ್ಷ ಶಿಕ್ಷೆ ವಿಧಿಸಲಾಗುತ್ತಿತ್ತು.

ಮಂಗಳೂರಿನ ಕ್ರೈಸ್ತ ಮಿಶನರಿ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳ ಕೈಯಲ್ಲಿರುವ ರಾಖಿಗಳನ್ನು ತೆಗೆದು ಕಸದ ಬುಟ್ಟಿಗೆ ಎಸೆದರು !

ಕ್ರೈಸ್ತ ಮಿಶನರಿ ಶಾಲೆಗಳಲ್ಲಿ ಹಿಂದೂಗಳ ಹಬ್ಬ ಮತ್ತು ಧಾರ್ಮಿಕ ಆಚರಣೆಗಳನ್ನು ವಿರೋಧಿಸುವುದು, ಇದೇನು ಹೊಸ ಘಟನೆ ಅಲ್ಲ. ಆದ್ದರಿಂದ ಹಿಂದೂಗಳ ಮೇಲೆ ನಡೆಯುವ ಈ ರೀತಿಯ ದಬ್ಬಾಳಿಕೆಯ ವಿರುದ್ಧ ಇನ್ನೂ ಕಾನೂನು ಜಾರಿ ಮಾಡುವುದು ಅನಿವಾರ್ಯ !

ಜಾಲೋರ್ (ರಾಜಸ್ಥಾನ) ಇಲ್ಲಿ ಕೇಸರಿ ಧ್ವಜ ಹರಿದು ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ನೀಡುವ ಮೂರು ಮತಾಂಧರ ಬಂಧನ

ಇಲ್ಲಿಯ ಜಿಲ್ಲಾಧಿಕಾರಿ ಕಾರ್ಯಾಲಯದ ಹತ್ತಿರ ಮತಾಂಧರು ಕೇಸರಿ ಧ್ವಜ ಹರಿದುಹಾಕಿ ‘ಪಾಕಿಸ್ತಾನ ಜಿಂದಾಬಾದ’ ಎಂಬ ಘೋಷಣೆ ನೀಡಿದರು. ಅದರ ನಂತರ ಪೊಲೀಸರು ಕ್ರಮ ಕೈಗೊಂಡು ಅರ್ಮಾನ್ ಖಾನ್, ಅಸ್ಲಾಂ ಮತ್ತು ಮನ್ಸೂರ್ ಇವರನ್ನು ಬಂಧಿಸಿದ್ದಾರೆ.

ಕುಷಿನಗರ (ಉತ್ತರಪ್ರದೇಶ) ಇಲ್ಲಿ ಪಾಕಿಸ್ತಾನದ ರಾಷ್ಟ್ರಧ್ವಜ ಹಾರಿಸಿರುವ ಸಲ್ಮಾನ್‌ನ ಬಂಧನ

ಕುಶಿನಗರ ಜಿಲ್ಲೆಯ ಬೆಂದುಪಾರ್ ಮುಸ್ತಕಿಲ್ ಈ ಗ್ರಾಮದ ಸಲ್ಮಾನ್ ಎಂಬ ಯುವಕ ಅವನ ಮನೆಯ ಮೇಲೆ ಪಾಕಿಸ್ತಾನದ ರಾಷ್ಟ್ರಧ್ವಜ ಹಾರಿಸಿದ್ದನು. ಈ ಘಟನೆಯ ವಿಡಿಯೋ ಅವನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದನು. ಈ ಮಾಹಿತಿ ಸಿಗುತ್ತಲೇ ಪೊಲೀಸರು ಅವನನ್ನು ಬಂಧಿಸಿ ಧ್ವಜ ವಶಪಡಿಸಿಕೊಂಡಿದ್ದಾರೆ.

ಸರಕಾರಿ ನೌಕರಿ ಪಡೆಯುವುದಕ್ಕಾಗಿ ಯುವತಿಯರಿಗೆ ಹಾಸಿಗೆ ಹಂಚಿಕೊಳ್ಳಬೇಕಾಗುತ್ತದೆ !

ಸರಕಾರಿ ನೌಕರಿ ಪಡೆಯಲು ಯುವಕರು ಲಂಚ ನೀಡಬೇಕಾಗುತ್ತದೆ ಹಾಗೂ ಯುವತಿಯರಿಗೆ ಹಾಸಿಗೆ ಹಂಚಿಕೊಳ್ಳಬೇಕಾಗುತ್ತದೆ, ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ ಖರ್ಗೆ ಆರೋಪಿಸಿದ್ದಾರೆ. ಪ್ರಿಯಾಂಕ ಖರ್ಗೆ ಇವರು ಕಾಂಗ್ರೆಸ್ಸಿನ ಹಿರಿಯ ನಾಯಕ ಮತ್ತು ಸಂಸದ ಮಲ್ಲಿಕಾರ್ಜುನ ಖರ್ಗೆ ಇವರ ಮಗ ಆಗಿದ್ದಾರೆ.

ಭಾರತದಲ್ಲಿ ‘ವಿ.ಎಲ್.ಸಿ. ಮೀಡಿಯಾ ಪ್ಲೇಯರ್, ಈ ಚೀನಾ ಕಂಪ್ಯೂಟರ ಸಿಸ್ಟಮ್ ಮೇಲೆ ನಿಷೇಧ !

ಭಾರತದಲ್ಲಿ ಚಲಚಿತ್ರ(ವಿಡಿಯೋ) ನೋಡುವುದಕ್ಕೆ ದೊಡ್ಡ ಪ್ರಮಾಣದಲ್ಲಿ ಉಪಯೋಗಿಸಲಾಗುವ ವಿ.ಎಲ್.ಸಿ ಮೀಡಿಯಾ ಪ್ಲೇಯರ್’ ಈ ಚೀನಾದ ಕಂಪ್ಯೂಟರ್ ಸಿಸ್ಟಮ್ ಮೇಲೆ ನಿಷೇಧ ಹೇರಲಾಗಿದೆ.

ಯೋಗಿ ಆದಿತ್ಯನಾಥ ಇವರನ್ನು ಮತ್ತೊಮ್ಮೆ ಬಾಂಬ್‌ನಿಂದ ಕೊಲ್ಲುವ ಬೆದರಿಕೆ !

ಉತ್ತರ ಪ್ರದೇಶದ ಕಾನೂನುಬಾಹಿರ ಕಸಾಯಿ ಖಾನೆಗಳ ಮೇಲೆ ನಿಷೇಧ ಹೇರುವಂತೆ ಸಾರ್ವಜನಿಕ ಹಿತಾಸಕ್ತಿಯ ಮನವಿ ದಾಖಲಿಸಿರುವ ಹಿಂದುತ್ವನಿಷ್ಠ ನಾಯಕ ದೇವೇಂದ್ರ ತಿವಾರಿ ಇವರಿಗೆ ಜೀವ ಬೆದರಿಕೆ ಪತ್ರ ದೊರೆತಿದೆ.

‘ಲಾಲ್ ಸಿಂಗ್ ಚಡ್ಡಾ’ ಚಲನಚಿತ್ರಕ್ಕೆ ವಿರೋಧವಾಗುತ್ತಿರುವುದರಿಂದ ಚಿತ್ರಮಂದಿರಗಳಲ್ಲಿ ನೀರಸ ಪ್ರತಿಕ್ರಿಯೆ

ನಟ ಅಮೀರ್ ಖಾನ್ ಅವರ ಇತ್ತೀಚೆಗೆ ಬಿಡುಗಡೆಯಾದ ‘ಲಾಲ್ ಸಿಂಗ್ ಚಡ್ಡಾ’ ಚಲನ ಚಿತ್ರಕ್ಕೆ ವಿರೋಧ ವ್ಯಕ್ತವಾಗುತ್ತಿರುವುದರಿಂದ ಈ ಚಲನಚಿತ್ರಕ್ಕೆ ದೇಶಾದ್ಯಂತ ಕಡಿಮೆ ಪ್ರತಿಕ್ರಿಯೆ ಸಿಕ್ಕಿದೆ. ಹಲವು ಪ್ರದರ್ಶನಗಳನ್ನು ರದ್ದು ಪಡಿಸಲಾಗಿದೆ. ಈ ಚಲನಚಿತ್ರದಲ್ಲಿ ನಟಿ ಕರೀನಾ ಖಾನ್ ಕೂಡ ನಟಿಸಿದ್ದಾರೆ.

‘ಲಾಲ ಸಿಂಗ್‌ ಚಢ್ಢಾ’ ಚಲನಚಿತ್ರದಲ್ಲಿ ಭಾರತೀಯ ಸೈನ್ಯ ಹಾಗೂ ಹಿಂದೂ ಸಮಾಜದ ಅವಮಾನ; ದೆಹಲಿಯಲ್ಲಿನ ನ್ಯಾಯವಾದಿಗಳಿಂದ ಪೊಲೀಸರಲ್ಲಿ ದೂರು ನೋಂದಣಿ

ಇತ್ತೀಚೆಗೆ ಪ್ರದರ್ಶಿತವಾದ ಆಮೀರ ಖಾನರ ‘ಲಾಲ ಸಿಂಗ ಚಢ್ಢಾ’ ಎಂಬ ಚಲನಚಿತ್ರದಲ್ಲಿ ಭಾರತೀಯ ಸೈನ್ಯ ಹಾಗೂ ಹಿಂದೂ ಸಮಾಜದ ಅಪಮಾನ ಮಾಡಲಾಗಿರುವ ಬಗ್ಗೆ ನ್ಯಾಯವಾದಿ ವಿನೀತ ಜಿಂದಾಲರವರು ದೆಹಲಿಯ ಪೊಲೀಸ ಆಯುಕ್ತರಾದ ಸಂಜಯ ಅರೋರಾರವರ ಬಳಿ ದೂರು ದಾಖಲಿಸಿದ್ದಾರೆ.

ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಾಖಿ ಕಟ್ಟಿದ ಸನಾತನ ಸಂಸ್ಥೆಯ ಸಾಧಕಿಯರು !

ಸಹೋದರನ ಏಳಿಗೆಯಾಗಬೇಕು ಮತ್ತು ಸಹೋದರನು ಸಹೋದರಿಯ ರಕ್ಷಣೆಯನ್ನು ಎಂಬ ದೃಷ್ಟಿಯಿಂದ ರಕ್ಷಾಬಂಧನ ಹಬ್ಬವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವರಿಗೆ ಅವರ ಆರ್. ಟಿ. ನಗರದಲ್ಲಿರುವ ನಿವಾಸಕ್ಕೆ ಭೇಟಿ ನೀಡಿ ಸನಾತನದ ಸಾಧಕಿ ಸೌ. ವನಜಾ ಇವರು ಸನಾತನ ಸಂಸ್ಥೆಯ ವತಿಯಿಂದ ರಾಖಿ ಕಟ್ಟಿದರು.