ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಾಖಿ ಕಟ್ಟಿದ ಸನಾತನ ಸಂಸ್ಥೆಯ ಸಾಧಕಿಯರು !

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇವರಿಗೆ ರಾಖಿ ಕಟ್ಟುತ್ತಿರುವ ಸನಾತನದ ಸಾಧಕಿ ಸೌ. ವನಜಾ

ಬೆಂಗಳೂರು, ಆಗಸ್ಟ ೧೩ (ವಾರ್ತೆ.) – ಸಹೋದರನ ಏಳಿಗೆಯಾಗಬೇಕು ಮತ್ತು ಸಹೋದರನು ಸಹೋದರಿಯ ರಕ್ಷಣೆಯನ್ನು ಎಂಬ ದೃಷ್ಟಿಯಿಂದ ರಕ್ಷಾಬಂಧನ ಹಬ್ಬವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವರಿಗೆ ಅವರ ಆರ್. ಟಿ. ನಗರದಲ್ಲಿರುವ ನಿವಾಸಕ್ಕೆ ಭೇಟಿ ನೀಡಿ ಸನಾತನದ ಸಾಧಕಿ ಸೌ. ವನಜಾ ಇವರು ಸನಾತನ ಸಂಸ್ಥೆಯ ವತಿಯಿಂದ ರಾಖಿ ಕಟ್ಟಿದರು. ಈ ಸಮಯದಲ್ಲಿ ವೇಳೆ ಸಾಧಕಿ ಸೌ. ಸುಧಾ ಸದಾನಂದ ಇವರೂ ಉಪಸ್ಥಿತರಿದ್ದರು. ಆ ಸಮಯದಲ್ಲಿ ಬೊಮ್ಮಾಯಿ ಅವರಿಗೆ ಸನಾತನ ಸಂಸ್ಥೆ ತಯಾರಿಸಿದ ಸಾತ್ವಿಕ ಉತ್ಪನ್ನಗಳನ್ನು ಒಳಗೊಂಡ ವಿಶೇಷ ಉಡುಗೊರೆ ಪೆಟ್ಟಿಗೆ(ಗಿಫ್ಟ ಬಾಕ್ಸ್)ಯನ್ನು ನೀಡಲಾಯಿತು. ರಾಖಿ ಕಟ್ಟಿದ ನಂತರ ಬೊಮ್ಮಾಯಿ ಅವರು ‘ಸಾಧಕಿಯ ಮತ್ತು ಸನಾತನ ಸಂಸ್ಥೆಯ ಎಲ್ಲಾ ಕಾರ್ಯಕರ್ತರ ಕಲ್ಯಾಣವಾಗಲಿ’, ಎಂದು ಶುಭ ಹಾರೈಸಿದರು.

(ಸೌಜನ್ಯ : Tv9 Kannada)