ಭಾರತದಲ್ಲಿ ‘ವಿ.ಎಲ್.ಸಿ. ಮೀಡಿಯಾ ಪ್ಲೇಯರ್, ಈ ಚೀನಾ ಕಂಪ್ಯೂಟರ ಸಿಸ್ಟಮ್ ಮೇಲೆ ನಿಷೇಧ !

ಮುಂಬಯಿ – ಭಾರತದಲ್ಲಿ ಚಲಚಿತ್ರ(ವಿಡಿಯೋ) ನೋಡುವುದಕ್ಕೆ ದೊಡ್ಡ ಪ್ರಮಾಣದಲ್ಲಿ ಉಪಯೋಗಿಸಲಾಗುವ ವಿ.ಎಲ್.ಸಿ ಮೀಡಿಯಾ ಪ್ಲೇಯರ್’ ಈ ಚೀನಾದ ಕಂಪ್ಯೂಟರ್ ಸಿಸ್ಟಮ್ ಮೇಲೆ ನಿಷೇಧ ಹೇರಲಾಗಿದೆ. ಭಾರತ ಸರಕಾರ ಅಥವಾ ‘ವಿ.ಎಲ್.ಸಿ.’ ಕಂಪನಿಯು ಇಲ್ಲಿಯವರೆಗೆ ಈ ಸಂದರ್ಭದಲ್ಲಿ ಯಾವುದೇ ಅಧಿಕೃತ ಘೋಷಣೆ ಮಾಡದಿದ್ದರೂ ‘ಮೀಡಿಯಾನೇಮ್’ ಇದರ ವರದಿಯ ಪ್ರಕಾರ ವಿ.ಎಲ್.ಸಿ. ಮೀಡಿಯಾ ಪ್ಲೇಯರ್’ ಮೇಲೆ ಭಾರತದಲ್ಲಿ ೨ ತಿಂಗಳ ಹಿಂದೆಯೇ ನಿಷೇಧಿಸಲಾಗಿದೆ.

ಈ ಮೊದಲು ಭಾರತ ಸರಕಾರ ‘ಟಿಕ್‌ಟಾಕ್, ‘ಪಬ್ಜಿ ಸಂಚಾರವಾಣಿಯ ಆಟ’, ‘ಹಲೋ’ ಅಂತಹ ಚೀನಾ ಆಪ್’ ಮೇಲೆ ನಿಷೇಧ ಹೇರಿತ್ತು. ಈ ಸಿಸ್ಟಮ್‌ಅನ್ನು ಉಪಯೋಗಿಸುವವರು ಮಾಹಿತಿ ಚೀನಾಗೆ ಪೂರೈಸುತ್ತಿರುವುದರಿಂದ ರಾಷ್ಟ್ರೀಯ ಭದ್ರತೆಯ ಕಾರಣದಿಂದ ಈ ಕ್ರಮ ಕೈಗೊಳ್ಳಲಾಗಿತ್ತು.