‘ಲಾಲ್ ಸಿಂಗ್ ಚಡ್ಡಾ’ ಚಲನಚಿತ್ರಕ್ಕೆ ವಿರೋಧವಾಗುತ್ತಿರುವುದರಿಂದ ಚಿತ್ರಮಂದಿರಗಳಲ್ಲಿ ನೀರಸ ಪ್ರತಿಕ್ರಿಯೆ

‘ಸಿನಿಮಾ ನೋಡಲು ಬಲವಂತ ಇಲ್ಲ’, ಎನ್ನುತ್ತಿದ್ದ ಕರೀನಾ ಖಾನ್ ರಿಂದ ಈಗ ಚಲನಚಿತ್ರ ನೋಡುವಂತೆ ಮನವಿ !

ಮುಂಬಯಿ – ನಟ ಅಮೀರ್ ಖಾನ್ ಅವರ ಇತ್ತೀಚೆಗೆ ಬಿಡುಗಡೆಯಾದ ‘ಲಾಲ್ ಸಿಂಗ್ ಚಡ್ಡಾ’ ಚಲನ ಚಿತ್ರಕ್ಕೆ ವಿರೋಧ ವ್ಯಕ್ತವಾಗುತ್ತಿರುವುದರಿಂದ ಈ ಚಲನಚಿತ್ರಕ್ಕೆ ದೇಶಾದ್ಯಂತ ಕಡಿಮೆ ಪ್ರತಿಕ್ರಿಯೆ ಸಿಕ್ಕಿದೆ. ಹಲವು ಪ್ರದರ್ಶನಗಳನ್ನು ರದ್ದು ಪಡಿಸಲಾಗಿದೆ. ಈ ಚಲನಚಿತ್ರದಲ್ಲಿ ನಟಿ ಕರೀನಾ ಖಾನ್ ಕೂಡ ನಟಿಸಿದ್ದಾರೆ. ಈ ಚಲನಚಿತ್ರ ಬಿಡುಗಡೆಗೂ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ಚಲನಚಿತ್ರ ಬಹಿಷ್ಕರಿಸುವ ಕೂಗು ಸಾಮಾಜಿಕ ಮಾಧ್ಯಮಗಳಿಂದ ಕೇಳಿಬಂದಿತ್ತು. ಆ ವೇಳೆ ಕರೀನಾ ಖಾನ್, ‘ನೀವು ಚಿತ್ರ ನೋಡಲು ಬಯಸದಿದ್ದರೆ, ಅದನ್ನು ನೋಡಬೇಡಿ. ಯಾರ ಮೇಲೂ ಬಲವಂತ ಇಲ್ಲ;’ ಎಂದು ಹೇಳಿದ್ದರು. ಆದರೆ ಈಗ ಚಲನಚಿತ್ರಕ್ಕೆ ನೀರಸ ಪ್ರತಿಕ್ರಿಯೆ ಕಂಡು ಬರುತ್ತಿರುವುದರಿಂದ ಅವರು, ಸಾರ್ವಜನಿಕರಿಗೆ ಚಲನಚಿತ್ರ ವೀಕ್ಷಿಸುವಂತೆ ಮನವಿ ಮಾಡಿದ್ದಾರೆ. ಅವರು, ದಯವಿಟ್ಟು ಈ ಚಲನಚಿತ್ರವನ್ನು ಬಹಿಷ್ಕರಿಸಬಾರದು; ಏಕೆಂದರೆ ವಾಸ್ತವದಲ್ಲಿ ಈ ಚಲನಚಿತ್ರದಲ್ಲಿ ಬಹಿಷ್ಕರಿಸುವಂತಹದ್ದೇನೂ ಇಲ್ಲ ಎಂದು ಮನವಿ ಮಾಡಿಕೊಂಡರು. ಜನರು ಈ ನಿಟ್ಟಿನಲ್ಲಿ ಶ್ರಮಿಸಿದ್ದಾರೆ. ಇದಕ್ಕಾಗಿ ೨೫೦ ಮಂದಿ ಎರಡೂವರೆ ವರ್ಷಗಳಿಂದ ದುಡಿಯುತ್ತಿದ್ದರು.’ ಎಂದು ಹೇಳಿದರು.

ಸಂಪಾದಕೀಯ ನಿಲುವು

ಹಿಂದೂಗಳು ಸಂಘಟಿತರಾದರೆ ಏನಾಗಬಹುದು ಎಂಬುದಕ್ಕೆ ಇದೊಂದು ಸಣ್ಣ ಉದಾಹರಣೆ !