ಯೋಗಿ ಆದಿತ್ಯನಾಥ ಇವರನ್ನು ಮತ್ತೊಮ್ಮೆ ಬಾಂಬ್‌ನಿಂದ ಕೊಲ್ಲುವ ಬೆದರಿಕೆ !

ಕಾನೂನುಬಾಹಿರ ಕಸಾಯಿ ಖಾನೆಯ ವಿರೋಧದಲ್ಲಿ ಸಾರ್ವಜನಿಕ ಹಿತಾಸಕ್ತಿ ಮನವಿ ದಾಖಲಿಸಿರುವ ಹಿಂದುತ್ವನಿಷ್ಠ ನಾಯಕ ದೇವೇಂದ್ರ ತಿವಾರಿ ಇವರಿಗೆ ಕೂಡ ಜೀವ ಬೆದರಿಕೆ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರ ಪ್ರದೇಶದ ಕಾನೂನುಬಾಹಿರ ಕಸಾಯಿ ಖಾನೆಗಳ ಮೇಲೆ ನಿಷೇಧ ಹೇರುವಂತೆ ಸಾರ್ವಜನಿಕ ಹಿತಾಸಕ್ತಿಯ ಮನವಿ ದಾಖಲಿಸಿರುವ ಹಿಂದುತ್ವನಿಷ್ಠ ನಾಯಕ ದೇವೇಂದ್ರ ತಿವಾರಿ ಇವರಿಗೆ ಜೀವ ಬೆದರಿಕೆ ಪತ್ರ ದೊರೆತಿದೆ. ಈ ಪತ್ರದಲ್ಲಿ ತಿವಾರಿ ಹಾಗೂ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರನ್ನು ಬಾಂಬ್‌ನಿಂದ ಕೊಳ್ಳುವುದಾಗಿ ಬೆದರಿಕೆ ನೀಡಲಾಗಿದೆ. ಸಲ್ಮಾನ್ ಸಿದ್ದಕಿ ಹೆಸರಿನ ವ್ಯಕ್ತಿ ಈ ಪತ್ರ ಬರೆದಿದ್ದಾನೆ. ಪೊಲೀಸರು ಈ ಪ್ರಕರಣದ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ದೇವೇಂದ್ರ ತಿವಾರಿ ಇವರಿಗೆ ಸಿಕ್ಕಿರುವ ಪತ್ರದಲ್ಲಿ,“ದೆವೇಂದ್ರ ತಿವಾರಿ, ನಿನಗೆ ಎಷ್ಟು ಸಲ ತಿಳಿಸಿ ಹೇಳಿದೆವು; ಆದರೆ ನೀನು ಕೇಳುತ್ತಿಲ್ಲ. ನಿನ್ನ ಸಾರ್ವಜನಿಕ ಹಿತಾಸಕ್ತಿ ಮನವಿಯಿಂದ ಮುಸಲ್ಮಾನರ ಹೊಟ್ಟೆಪಾಡಿಗೆ ನಷ್ಟವಾಗಿದೆ. ಆದ್ದರಿಂದ ಎಲ್ಲಾ ಕಸಾಯಿಖಾನೆ ಮುಚ್ಚಲಾಗಿದೆ. ಇನ್ನು ನೋಡು ನಿನ್ನ ಏನು ಅವಸ್ಥೆ ಮಾಡುತ್ತೇನೆ ! ನೀನು ದೇವಬಂದದಿಂದ ಚಾಲಾಕಿಯಿಂದ ಹೊರಟು ಹೋದಿ, ಆದರೆ ಈಗ ನಿನ್ನನ್ನು ಮತ್ತು ಯೋಗಿ ಆದಿತ್ಯನಾಥನನ್ನು ಬಾಂಬ್‌ನಿಂದ ಮುಗಿಸುತ್ತೇನೆ. ಮುಂದಿನ ೧೫ ದಿನದಲ್ಲಿ ನಿನಗೆ ಇದರ ಪರಿಣಾಮ ನೋಡಲು ಸಿಗುವುದು. ಬೇರೆಯವರ ಶಿರಶ್ಚೇಧ ಮಾಡಲಾಗಿದೆ; ಆದರೆ ನಿಮ್ಮಿಬ್ಬರನ್ನು ಬಾಂಬ್‌ನಿಂದ ಮುಗಿಸುತ್ತೇನೆ !” ಎಂದು ಬರೆದಿದೆ.

ಈ ಪತ್ರದಲ್ಲಿ, ನೀವೆಲ್ಲರು (ಹಿಂದೂಗಳು) ನಮ್ಮ ನಾಯಕ ಅಸುದ್ದುದ್ದೀನ್ ಓವೈಸಿ ಮತ್ತು ಮೌಲಾನ ಮದನಿ ಇವರಿಗೆ ತೊಂದರೆ ನೀಡಿದ್ದಿರಿ. ಅವರ ಒಂದೊಂದು ಹನಿ ಕಣ್ಣೀರಿನ ಸೇಡು ನಾವು(ಮುಸಲ್ಮಾನರು) ತೀರಿಸಿಕೊಳ್ಳುತ್ತೇವೆ ಎಂದು ಬರೆಯಲಾಗಿದೆ.

ಸಂಪಾದಕೀಯ ನಿಲುವು

ಹಿಂದೂ ಬಹುಸಂಖ್ಯಾತವಿರುವ ದೇಶದಲ್ಲಿ ಅವರದೇ ಜನಪ್ರತಿನಿಧಿಗಳು ಮತ್ತು ಹಿಂದುತ್ವನಿಷ್ಠ ನಾಯಕರು ಅಸುರಕ್ಷಿತವಾಗಿರುವುದು ಮತ್ತೆ ಮತ್ತೆ ಕಂಡು ಬರುತ್ತಿದೆ. ‘ಈ ದೇಶದಲ್ಲಿ ಮುಸಲ್ಮಾನರು ಅಸುರಕ್ಷಿತರಾಗಿದ್ದಾರೆ’, ಎಂದು ಹೇಳುವವರು ಈಗ ಏನು ಹೇಳುವರು ?

ಈ ಪರಿಸ್ಥಿತಿ ಹಿಂದೂ ರಾಷ್ಟ್ರ ಸ್ಥಾಪನೆಯ ಅನಿವಾರ್ಯತೆ ಸ್ಪಷ್ಟ ಪಡಿಸುತ್ತದೆ !