‘ಅಲ್ಲಾಹನು ಎಲ್ಲರನ್ನೂ ಜನ್ಮ ನೀಡುತ್ತಾನೆ ಮತ್ತು ಅವರನ್ನು ಪೋಷಿಸುತ್ತಾನೆ !'(ಅಂತೆ)

‘ಅಲ್ಲಾಹನು ಪ್ರತಿಯೊಬ್ಬರಿಗೆ ಜನ್ಮ ನೀಡುತ್ತಾನೆ ಮತ್ತು ಅವರನ್ನು ಪೋಷಿಸುತ್ತಾನೆ.’ ವ್ಯಕ್ತಿ ಬಡವನಾಗಿರಲಿ ಅಥವಾ ಶ್ರೀಮಂತನಾಗಿರಲಿ ಪೋಷಿಸುತ್ತಾನೆ. ಅವರನ್ನು ವಿರೋಧಿಸುವುದು ಸೂಕ್ತವಲ್ಲ. ಇದರಿಂದ ಹಾನಿಯೇ ಆಗುತ್ತದೆ. ಇದು ಜನರ ಹಿತದ ಕಾನೂನು ಅಲ್ಲ’, ಎಂಬಂತಹ ಹುರುಳಿಲ್ಲದ ಟೀಕೆಯನ್ನು ಮಾಡಿದರು.

ಹೆಚ್ಚುತ್ತಿರುವ ಜನಸಂಖ್ಯೆಯು ವಿಕಾಸಕ್ಕೆ ಮಾರಕ ! – ಯೋಗಿ ಆದಿತ್ಯನಾಥ

ಸ್ವಾತಂತ್ರ್ಯನಂತರದ ೭೪ ವರ್ಷಗಳಲ್ಲಿ ಎಲ್ಲಾ ಪಕ್ಷಗಳ ರಾಜಕಾರಣಿಗಳು ಈ ಬಗ್ಗೆ ಯಾವುದೇ ರೀತಿಯಲ್ಲಿ ಪ್ರಯತ್ನಿಸದ ಕಾರಣ ಇಂದು ದೇಶವು ಜನಸಂಖ್ಯಾಸ್ಫೋಟದ ತುತ್ತತುದಿಯಲ್ಲಿ ನಿಂತಿದೆ. ಈಗ ಜನಸಂಖ್ಯೆಯ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದರೆ ಸ್ವಲ್ಪವಾದರೂ ಪರಿಣಾಮವಾಗಬಹುದೆಂದು ಅಪೇಕ್ಷಿಸಬಹುದು !

ಕಟ್ಟುನಿಟ್ಟಾದ ‘ಜನಸಂಖ್ಯಾ ನಿಯಂತ್ರಣ ಕಾಯ್ದೆ’ ರಚಿಸಿದರೆ ದೇಶದ ಶೇಕಡಾ ೫೦ ರಷ್ಟು ಸಮಸ್ಯೆ ಕಡಿಮೆಯಾಗುತ್ತದೆ ! – ಅಶ್ವಿನಿ ಉಪಾಧ್ಯಾಯ, ನ್ಯಾಯವಾದಿ, ಸರ್ವೋಚ್ಚ ನ್ಯಾಯಾಲಯ

‘ಹಾಸಿಗೆ ಇದ್ದಷ್ಟು ಕಾಲು ಚಾಚು’ ಎಂದು ಹೇಳಲಾಗುತ್ತದೆ; ಆದರೆ ಜನಸಂಖ್ಯೆಯ ದೃಷ್ಟಿಯಿಂದ ಭಾರತವು ಈಗಾಗಲೇ ಹತ್ತು ಪಟ್ಟು ಹೆಚ್ಚು ಕಾಲು ಚಾಚಿದೆ. ಭಾರತವು ವಿಶ್ವದ ಶೇಕಡಾ ೨ ರಷ್ಟು ಭೂಮಿಯನ್ನು ಮತ್ತು ಶೇಕಡಾ ೪ ರಷ್ಟು ಕುಡಿಯುವ ನೀರನ್ನು ಹೊಂದಿದೆ; ಆದರೆ ಜನಸಂಖ್ಯೆ ಮಾತ್ರ ಶೇ. ೨೦ ರಷ್ಟಿದೆ.

ಉತ್ತರಪ್ರದೇಶದ ಬಿಜೆಪಿ ಸರಕಾರದಿಂದ ಜನಸಂಖ್ಯಾನಿಯಂತ್ರಣ ಕಾಯ್ದೆಯ ಕರಡು ಸಿದ್ಧ !

ಉತ್ತರಪ್ರದೇಶದ ಸರಕಾರದಿಂದ ಜನಸಂಖ್ಯಾ ನಿಯಂತ್ರಣ ಕಾಯ್ದೆಯನ್ನು ಜ್ಯಾರಿಗೆ ತರಲಾಗುತ್ತಿದೆ. ಈ ಕಾಯ್ದೆಯಿಂದ ೨ ಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಸರಕಾರದ ಅನುದಾನ ಅಥವಾ ಯೋಜನೆಗಳ ಲಾಭ ಪಡೆಯಲು ಸಾಧ್ಯವಿಲ್ಲ, ಅವರಿಗೆ ಕೆಲಸದಲ್ಲಿ ಭತ್ಯೆ ಸಿಗುವುದಿಲ್ಲ ಮತ್ತು ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. ಈ ಕಾಯ್ದೆಯ ಕರಡನ್ನು ನಿರ್ಮಿಸಲಾಗಿದೆ.

ವಾಟ್ಸ್ ಆಪ್‍ನ ಗೌಪ್ಯತೆಯ ಧೋರಣೆಯ ಮೇಲೆ ಸದ್ಯ ನಾವು ಸ್ವೇಚ್ಛೆಯಿಂದ ನಿಷೇಧ ಹೇರಿದ್ದೇವೆ ! – ವಾಟ್ಸ್ ಆಪ್‍ನಿಂದ ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಮಾಹಿತಿ

ವಾಟ್ಸ್ ಆಪ್‍ನ ಗೌಪ್ಯತೆಯ ಧೋರಣೆಯ ಬಗ್ಗೆ(`ಪ್ರೈವಸಿ ಪಾಲಿಸಿ’ಯ) ಸಧ್ಯ ನಾವು ಸ್ವೇಚ್ಛೆಯಿಂದ ನಿಷೇಧ ಹೇರಿದ್ದೇವೆ, ಎಂದು ದೆಹಲಿ ಉಚ್ಚ ನ್ಯಾಯಾಲಯಕ್ಕೆ ವಾಟ್ಸ್ ಆಪ್ ಮಾಹಿತಿ ನೀಡಿದೆ. ಗೌಪ್ಯತೆಯ ಧೋರಣೆಯಿಂದ ವಾಟ್ಸ್ ಆಪ್ ಸಂಸ್ಥೆಯ ವಿರುದ್ಧ ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಮತಾಂತರಕ್ಕಾಗಿ ನ್ಯಾಯಾಲಯದ ಚೇಂಬರ್ ಬಳಸುತ್ತಿದ್ದ ಮತಾಂಧ ನ್ಯಾಯವಾದಿಯ ಪರವಾನಗಿಯನ್ನು ತಾತ್ಕಾಲಿಕವಾಗಿ ರದ್ದು ಪಡಿಸಿದ ದೆಹಲಿ ಬಾರ್ ಕೌನ್ಸಿಲ್ !

ಕಡಕಡುಮಾ ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಯವಾದಿ ಇಕ್ಬಾಲ್ ಮಲಿಕ್ ಅವರ ಪರವಾನಗಿಯನ್ನು ದೆಹಲಿ ಬಾರ್ ಕೌನ್ಸಿಲ್ ತಾತ್ಕಾಲಿಕವಾಗಿ ರದ್ದುಪಡಿಸಿದೆ. ಪರಿಣಾಮವಾಗಿ, ಅವನ ಪರವಾನಗಿ ರದ್ದಾಗಿರುವ ತನಕ ಅವನಿಗೆ ಕಾನೂನು ವ್ಯವಸಾಯ ಮಾಡಲು ಸಾಧ್ಯವಾಗುವುದಿಲ್ಲ

ಅತ್ಯಾಚಾರದ ಆರೋಪಿಯು ಪರಾರಿಯಾಗುತ್ತಿರುವಾಗ ಪೊಲೀಸರು ಗುಂಡುಹಾರಾಟ ಮಾಡಲೇ ಬೇಕಾಗುತ್ತದೆ ! – ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ಅತ್ಯಾಚಾರ ಅಪರಾಧವಿರುವ ಆರೋಪಿಯು ಪರಾರಿಯಾಗುತ್ತಿದ್ದರೆ ಮತ್ತು ಆತ ಪೊಲೀಸರಿಂದ ಶಸ್ತ್ರವನ್ನು ಕಸಿಯಲು ಪ್ರಯತ್ನಿಸುತ್ತಿದ್ದರೆ, ಪೊಲೀಸರು ಗುಂಡು ಹಾರಾಟ ಮಾಡಲೇ ಬೇಕಾಗುತ್ತದೆ; ಆದರೆ ಎದೆಯ ಮೇಲೆ ಅಲ್ಲ. ಕಾನೂನಿನ ಪ್ರಕಾರ ‘ನೀವು ಕಾಲಿಗೆ ಗುಂಡು ಹೊಡೆಯಬಹುದು’, ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು ಪೊಲೀಸರ ಸಭೆಯಲ್ಲಿ ಹೇಳಿದರು.

ಟ್ವಿಟರ್ ಕಾನೂನು ಪಾಲಿಸದಿದ್ದಲ್ಲಿ ಸರಕಾರವು ಕ್ರಮ ಕೈಗೊಳ್ಳಬಲ್ಲದು ! – ದೆಹಲಿ ಉಚ್ಚ ನ್ಯಾಯಾಲಯ

ಟ್ವಿಟರ್ ತಾನು ಮಾಹಿತಿ ಮತ್ತು ತಂತ್ರಜ್ಞಾನದ ಕಾನೂನನ್ನು ಪಾಲಿಸುತ್ತಿಲ್ಲ ಎಂದು ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದೆ. ಈ ಬಗ್ಗೆ ಇನ್ನು ನಾವು ಟ್ವಿಟರ್ ಗೆ ಯಾವುದೇ ಭದ್ರತೆಯನ್ನು ನೀಡುವುದಿಲ್ಲ. ಸರಕಾರವು ಟ್ವಿಟರ್ ಮೇಲೆ ಕ್ರಮ ಕೈಗೊಳ್ಳಲು ಸ್ವತಂತ್ರವಾಗಿದೆ ಎಂದು ನ್ಯಾಯಾಲಯವು ಸ್ಪಷ್ಟ ಪಡಿಸುವಾಗ ತಿಳಿಸಿದೆ.

ಭಾರತದಲ್ಲಿ ಹಿಂದೂಗಳದ್ದೇ ಹೆಚ್ಚಿನ ಮತಾಂತರ ! – ‘ಪ್ಯೂ ರಿಸರ್ಚ್ ಸೆಂಟರ್’ನ ಸಮೀಕ್ಷೆ

ಕ್ರೈಸ್ತ ಮಿಷನರಿಗಳು ಸಮಾಜಸೇವೆಯ ಹೆಸರಿನಲ್ಲಿ ಕೇವಲ ಹಿಂದೂಗಳನ್ನು ಮತಾಂತರಿಸಲು ಭಾರತದಲ್ಲಿ ಕಾರ್ಯನಿರತವಾಗಿವೆ. ಅದರ ಆಚೆಗೆ ಅವರಿಗೆ ಯಾವುದೇ ಉದ್ದೇಶವಿರುವುದಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ! ಈ ಬಗ್ಗೆ ತಥಾಕಥಿತ ಜಾತ್ಯತೀತವಾದಿಗಳು ಮತ್ತು ಪ್ರಗತಿ(ಅಧೋಗತಿ)ಪರರು ಎಂದಾದರೂ ಬಾಯಿ ತೆರೆಯುವರೇ ?

‘ಮತಾಂತರದ ಹೆಚ್ಚುತ್ತಿರುವ ಸಮಸ್ಯೆ : ಅದಕ್ಕೆ ಉಪಾಯವೇನು ?’ ಕುರಿತು ಆನ್‌ಲೈನ್ ವಿಶೇಷ ಚರ್ಚಾಗೋಷ್ಠಿ !

ಮತಾಂತರದ ಸಮಸ್ಯೆಯು ಭಾರತದ ಸ್ವಾತಂತ್ರ್ಯಪೂರ್ವದಿಂದಲೇ ಇದೆ. ವಿದೇಶಿ ಆಕ್ರಮಣಕಾರರು ಭಾರತವನ್ನು ಕೇವಲ ಅಧಿಕಾರವನ್ನುಗಳಿಸಲು ಮಾತ್ರವಲ್ಲ, ಬದಲಾಗಿ ಭಾರತವನ್ನು ‘ಗಝವಾ-ಎ-ಹಿಂದ್’ (ಇಸ್ಲಾಮಿಕ್ ರಾಜ್ಯ) ವನ್ನಾಗಿ ಮಾಡಲು ಆಕ್ರಮಣ ಮಾಡಿದ್ದರು. ಇಂದು ಮತಾಂತರಕ್ಕಾಗಿ ವಿದೇಶದಿಂದ ‘ಹವಾಲಾ’ ಮತ್ತು ‘ಕಪ್ಪು ಹಣ’ಗಳ ಮಾಧ್ಯಮದಿಂದ ದೊಡ್ಡ ಪ್ರಮಾಣದಲ್ಲಿ ಹಣ ಬರುತ್ತಿದೆ.