Indian MEA Spokesperson Statement : ಸಾರ್ವಜನಿಕ ಹೇಳಿಕೆಗಳ ಬಗ್ಗೆ ಜಾಗರೂಕರಾಗಿರಿ; ಅವು ಎರಡು ರಾಷ್ಟ್ರಗಳ ನಡುವಿನ ಸಂಬಂಧಗಳ ಮೇಲೆ ಪರಿಣಾಮ ಬೀರಬಹುದು! – ರಣಧೀರ್ ಜೈಸ್ವಾಲ್, ವಕ್ತಾರ, ವಿದೇಶಾಂಗ ವ್ಯವಹಾರಗಳ ಸಚಿವಾಲಯ

ಬಾಂಗ್ಲಾದೇಶ ಸರಕಾರದ ಸಲಹೆಗಾರ ನಕ್ಷೆಯಲ್ಲಿ ಭಾರತದ ರಾಜ್ಯಗಳು ತೋರಿಸಿ 4 ದಿನದ ನಂತರ ಭಾರತದಿಂದ ಪ್ರತಿಕ್ರಿಯೆ !

ರಣಧೀರ್ ಜೈಸ್ವಾಲ್, ವಕ್ತಾರ, ವಿದೇಶಾಂಗ ವ್ಯವಹಾರಗಳ ಸಚಿವಾಲಯ

ನವ ದೆಹಲಿ – ಬಾಂಗ್ಲಾದೇಶದಲ್ಲಿನ ಮಧ್ಯಂತರ ಸರಕಾರದ ಪ್ರಮುಖ ಮಹಮ್ಮದ್ ಯುನೂಸ್ ಇವರ ಸಲಹೆಗಾರ ಮಹಫುಜ ಆಲಂ ಇವರು ಡಿಸೆಂಬರ್ ೧೬ ರಂದು ಬಾಂಗ್ಲಾದೇಶ ನಿರ್ಮಾಣದ ವರ್ಧ್ಯಂತ್ಯೂತ್ಸವದ ದಿನದಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಬಾಂಗ್ಲಾದೇಶದ ನಕ್ಷೆಯಲ್ಲಿ ಭಾರತದಲ್ಲಿನ ಬಂಗಾಲ, ತ್ರಿಪುರ ಮತ್ತು ಅಸ್ಸಾಂನ ಕೆಲವು ಭಾಗ ತೋರಿಸಿದ್ದರು. ಇದಕ್ಕೆ ವಿರೋಧವಾದ ನಂತರ ಅವರು ಈ ಪೋಸ್ಟ್ ತೆಗೆದುಹಾಕಿದರು. ಈ ಬಗ್ಗೆ ಭಾರತದ ವಿದೇಶಾಂಗ ಸಚಿವಾಲಯದಿಂದ ನಾಲ್ಕು ದಿನಗಳ ನಂತರ ಪ್ರತಿಕ್ರಿಯೆ ವ್ಯಕ್ತಪಡಿಸಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ ಜೈಸ್ವಾಲ್ ಇವರು ಪತ್ರಕರ್ತರ ಸಭೆಯಲ್ಲಿ, ಆ ಪೋಸ್ಟ್ ತೆಗೆದು ಹಾಕಲಾಗಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ; ಆದರೂ ಕೂಡ ನಾವು ಅವರಿಗೆ ಸಾರ್ವಜನಿಕ ಟಿಪ್ಪಣಿ ಬಗ್ಗೆ ಎಚ್ಚರವಾಗಿರಲು ನೆನಪಿಸಲು ಇಚ್ಛೆಸುತ್ತೇವೆ. ಇಂತಹ ಟಿಪ್ಪಣಿಗಳು ಪ್ರಸಾರ ಮಾಡುತ್ತಾರೆ, ಸಾರ್ವಜನಿಕ ಟಿಪ್ಪಣಿ ಮಾಡುವಾಗ ನಾವು ಹೆಚ್ಚು ಜವಾಬ್ದಾರವಾಗಿರುವುದು ಆವಶ್ಯಕವಾಗಿದೆ. ಭಾರತವು ಬಾಂಗ್ಲಾದೇಶದ ಜನರ ಜೊತೆಗೆ ಮತ್ತು ಮಧ್ಯಂತರ ಸರಕಾರದ ಜೊತೆಗೆ ಸಂಬಂಧ ಮುಂದುವರಿಸಲು ಮೇಲಿಂದ ಮೇಲೆ ಆಸಕ್ತಿ ತೋರುತ್ತದೆ; ಆದರೆ ಇಂತಹ ಕೃತಿಗಳಿಂದ ಎರಡು ದೇಶದ ಸಂಬಂಧದ ಮೇಲೆ ಪರಿಣಾಮ ಆಗಬಹುದು ಎಂದು ಹೇಳಿದರು.

ಬಾಂಗ್ಲಾದೇಶದಲ್ಲಿ ಆಗಸ್ಟ್ ನಿಂದ ಹಿಂದೂಗಳ ವಿರುದ್ಧದ ಹಿಂಸಾಚಾರದಲ್ಲಿ ೨ ಸಾವಿರದ ೨೦೦ ಘಟನೆಗಳು

ರಣಧೀರ ಜೈಸ್ವಾಲ್ ಇವರು ಈ ಸಮಯದಲ್ಲಿ, ಶೇಖ ಹಸೀನಾ ಇವರು ಆಗಸ್ಟ್ ೫, ೨೦೨೪ ರಂದು ರಾಜೀನಾಮೆ ನೀಡಿದ ನಂತರ ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧದ ಹಿಂಸಾಚಾರದ ೨ ಸಾವಿರದ ೨೦೦ ಪ್ರಕರಣಗಳು ದಾಖಲಾಗಿವೆ. ಇದೇ ಸಮಯದಲ್ಲಿ ಪಾಕಿಸ್ತಾನದಲ್ಲಿ ಕೂಡ ಇಂತಹದೇ ೧೧೨ ಪ್ರಕರಣಗಳು ಬೆಳಕಿಗೆ ಬಂದಿವೆ. ಭಾರತ ಸರಕಾರವು ಈ ಘಟನೆಗಳು ಗಂಭೀರವಾಗಿ ಪರಿಗಣಿಸಿದೆ ಮತ್ತು ಬಾಂಗ್ಲಾದೇಶ ಸರಕಾರದ ಹತ್ತಿರ ಕಳವಳ ವ್ಯಕ್ತಪಡಿಸಿದೆ. ಬಾಂಗ್ಲಾದೇಶ ಸರಕಾರ ಹಿಂದೂ ಮತ್ತು ಇತರ ಅಲ್ಪಸಂಖ್ಯಾತರ ಸುರಕ್ಷೆಗಾಗಿ ಅಗತ್ಯವಿರುವ ಕ್ರಮ ಕೈಗೊಳ್ಳಬೇಕು ಎಂದು ಭಾರತಕ್ಕೆ ಆಸೆ ಇದೆ. (ಜಿಹಾದಿ ಮನಸ್ಥಿತಿಯ ಜನರಿಂದ ಈ ರೀತಿಯ ಆಸೆ ಪಡುವುದು ಹಾಸ್ಯಾಸ್ಪದ ಮತ್ತು ಮೂರ್ಖತನವಾಗಿದೆ, ಇದು ಭಾರತಕ್ಕೆ ಇನ್ನೂ ಕೂಡ ಹೇಗೆ ತಿಳಿಯುತ್ತಿಲ್ಲ ? – ಸಂಪಾದಕರು)

ಸಂಪಾದಕೀಯ ನಿಲುವು

ಭಾರತದೊಂದಿಗಿನ ಒಳ್ಳೆಯ ಸಂಬಂಧ ಇರಿಸಲು ಬಾಂಗ್ಲಾದೇಶದಿಂದ ಯಾವುದೇ ಪ್ರಯತ್ನ ನಡೆಯುತ್ತಿಲ್ಲ, ತದ್ವಿರುದ್ಧ ಅದು ಭಾರತವನ್ನು ಪ್ರಚೋದಿಸುವುದನ್ನೇ ಮಾಡುತ್ತಿದೆ, ಹೀಗೆ ಇರುವಾಗ ಭಾರತ ಅಹಿಂಸಾವಾದಿ ಗಾಂಧಿಗಿರಿ ಏಕೆ ತೋರುತ್ತಿದೆ ? ಎಂದು ರಾಷ್ಟ್ರಪ್ರೇಮಿಗಳಿಗೆ ಪ್ರಶ್ನೆ ಎದುರಾಗಿದೆ !