ಉತ್ತರಪ್ರದೇಶದ ಬಿಜೆಪಿ ಸರಕಾರದಿಂದ ಜನಸಂಖ್ಯಾನಿಯಂತ್ರಣ ಕಾಯ್ದೆಯ ಕರಡು ಸಿದ್ಧ !

ಒಂದು ಮಗು ಇದ್ದಲ್ಲಿ ವಿಶೇಷ ಸೌಲಭ್ಯ, ೨ ಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಸರಕಾರದ ಆಯೋಜನೆಗಳ ಲಾಭ ಇಲ್ಲ !

ಉತ್ತರಪ್ರದೇಶದ ಬಿಜೆಪಿ ಸರಕಾರಕ್ಕೆ ಅಭಿನಂದನೆಗಳು ! ಇಂತಹ ಕಾನೂನನ್ನು ರಾಜ್ಯಸ್ತರದಲ್ಲಿ ಮಾಡುವ ಬದಲು ಕೇಂದ್ರ ಸರಕಾರವು ಸಂಪೂರ್ಣ ದೇಶದಲ್ಲಿ ಜ್ಯಾರಿಗೆ ತರುವ ಅಗತ್ಯವಿದೆ. ಕಳೆದ ಅನೇಕ ವರ್ಷಗಳಿಂದ ಇದಕ್ಕೆ ಒತ್ತಾಯಿಸಲಾಗುತ್ತಿದೆ. ಈ ಬಗ್ಗೆ ಕೇಂದ್ರ ಸರಕಾರವು ಗಮನ ಹರಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತಿದೆ !

ನವ ದೆಹಲಿ – ಉತ್ತರಪ್ರದೇಶದ ಸರಕಾರದಿಂದ ಜನಸಂಖ್ಯಾ ನಿಯಂತ್ರಣ ಕಾಯ್ದೆಯನ್ನು ಜ್ಯಾರಿಗೆ ತರಲಾಗುತ್ತಿದೆ. ಈ ಕಾಯ್ದೆಯಿಂದ ೨ ಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಸರಕಾರದ ಅನುದಾನ ಅಥವಾ ಯೋಜನೆಗಳ ಲಾಭ ಪಡೆಯಲು ಸಾಧ್ಯವಿಲ್ಲ, ಅವರಿಗೆ ಕೆಲಸದಲ್ಲಿ ಭತ್ಯೆ ಸಿಗುವುದಿಲ್ಲ ಮತ್ತು ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. ಈ ಕಾಯ್ದೆಯ ಕರಡನ್ನು ನಿರ್ಮಿಸಲಾಗಿದೆ. ಇದಕ್ಕೆ ಜುಲೈ ೧೯ ರ ತನಕ ಅಭಿಪ್ರಾಯಗಳನ್ನು ಕೇಳಲಾಗಿದೆ.

೧. ಈ ಕಾಯ್ದೆಯ ಮೂಲಕ ೨ ಮಕ್ಕಳನ್ನು ಹೊಂದುವವರಿಗೆ ಪ್ರೊತ್ಸಾಹ ನೀಡಲಾಗುವುದು. ೨ ಮಕ್ಕಳ ನಂತರ ತಾವೇ ಸಂತಾನಹರಣ ಚಿಕಿತ್ಸೆ ಮಾಡಿಕೊಳ್ಳುವವರಿಗೆ ಮನೆ ಖರೀದಿಗಾಗಿ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲಾಗುವುದು. ಅದೇ ರೀತಿ ನೀರು, ವಿದ್ಯುತ್, ಮನೆಯ ತೆರಿಗೆ ಇತ್ಯಾದಿಗಳಲ್ಲಿ ವಿನಾಯತಿ ನೀಡಲಾಗುವುದು.

೨. ಯಾವ ದಂಪತಿಗಳಿಗೆ ಒಂದೇ ಮಗು ಇದೆ ಮತ್ತು ತಾವೇ ಸ್ವಪ್ರೇರಣೆಯಿಂದ ಸಂತಾನಹರಣ ಚಿಕಿತ್ಸೆ ಮಾಡಿಕೊಳ್ಳುವರೋ ಅವರಿಗೆ ಅವರ ಮಗು ೨೦ ವರ್ಷ ಆಗುವ ಉಚಿತ ಆರೋಗ್ಯ ಸೌಲಭ್ಯ ಮತ್ತು ವಿಮಾ ರಕ್ಷಣೆ ನೀಡಲಾಗುವುದು.

. ಇದರ ಹೊರತಾಗಿ ಒಂದೇ ಮಗು ಇರುವವರಿಗೆ ಐ.ಐ.ಎಮ್, ನಂತಹ ಉನ್ನತ ಶಿಕ್ಷಣ ನೀಡುವ ಸಂಸ್ಥೆಗಳಲ್ಲಿ ಉಚಿತ ಶಿಕ್ಷಣ ನೀಡಲಾಗುವುದು, ಅದೇ ರೀತಿ ಸರಕಾರಿ ಕೆಲಸಗಳಲ್ಲಿ ಆದ್ಯತೆ ನೀಡಲಾಗುವುದು.

. ಕೇವಲ ಒಬ್ಬ ಹುಡುಗಿಯು ಇದ್ದಲ್ಲಿ, ಆಕೆಯ ಪದವಿಯ ತನಕ ಉಚಿತ ಶಿಕ್ಷಣ ಹಾಗೂ ಸರಕಾರಿ ಕೆಲಸಕ್ಕೆ ಆದ್ಯತೆ ನೀಡಲಾಗುವುದು.