‘ಅಲ್ಲಾಹನು ಎಲ್ಲರನ್ನೂ ಜನ್ಮ ನೀಡುತ್ತಾನೆ ಮತ್ತು ಅವರನ್ನು ಪೋಷಿಸುತ್ತಾನೆ !'(ಅಂತೆ)

ಸಮಾಜವಾದಿ ಪಕ್ಷದ ಶಾಸಕ ಶಫಿಕುರ್ರಹಮಾನ್ ಬರ್ಕ ಇವರಿಂದ ಉತ್ತರಪ್ರದೇಶದ ಜನಸಂಖ್ಯಾ ನಿಯಂತ್ರಣ ಕಾಯ್ದೆಗೆ ವಿರೋಧ

* ಹೀಗೆ ಹೇಳಿದರೂ, ತಾವು ಎಷ್ಟು ಜನರನ್ನು ಪೋಷಿಸಬಹುದು, ಇದರ ಬಗ್ಗೆ ಬರ್ಕ ಮತ್ತು ಅವರ ಧರ್ಮಬಾಂಧವರು ಏಕೆ ವಿಚಾರ ಮಾಡುವುದಿಲ್ಲ ? ಸ್ವಂತದ ಮಕ್ಕಳ ಪೋಷಣೆಯನ್ನು ಮಾಡದೇ ಸರಕಾರದ ಬಳಿ `ಅಲ್ಪಸಂಖ್ಯಾತ’ವೆಂದು ಸೌಲಭ್ಯಗಳನ್ನು ಏಕೆ ಕೇಳಲಾಗುತ್ತದೆ ? ಸೌಲಭ್ಯಗಳ ಮೂಲಕ ದೇಶದ ಸಂಪತ್ತಿನ ದೊಡ್ಡ ಪಾಲನ್ನು ತೆಗೆದುಕೊಂಡರೂ ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ಯಾರು ಮುಂದೆ ಇರುತ್ತಾರೆ, ಇದು ಜನರಿಗೆ ಸರಿಯಾಗಿ ತಿಳಿದಿದೆ !

* ಚೀನಾದಲ್ಲಿ ಕಳೆದ ಅನೇಕ ವರ್ಷ ಒಂದೇ ಮಗುವನ್ನು ಜನ್ಮ ನೀಡುವ ಕಾನೂನು ಇತ್ತು. ಆ ಸಮಯದಲ್ಲಿ ಅಲ್ಲಿನ ಮುಸಲ್ಮಾನರು ಅದನ್ನು ಏಕೆ ವಿರೋಧಿಸಲಿಲ್ಲ ಮತ್ತು ಅವರ ಪರವಾಗಿ ಜಗತ್ತಿನಾದ್ಯಂತದ ಮುಸಲ್ಮಾನರು ಏಕೆ ಮಾತನಾಡುತ್ತಿರಲಿಲ್ಲ ? ಈಗಲೂ ಸಹ ಚೀನಾದಲ್ಲಿ ಉಯಿಘರ ಮುಸಲ್ಮಾನರ ಮೇಲಾಗುತ್ತಿರುವ ದೌರ್ಜನ್ಯಗಳ ಬಗ್ಗೆ ಬರ್ಕ ಮತ್ತು ಅವರ ಪಕ್ಷ ಏಕೆ ಬಾಯಿ ಬಿಡುವುದಿಲ್ಲ ?

ಸಮಾಜವಾದಿ ಪಕ್ಷದ ಶಾಸಕ ಶಫಿಕರ್ರಹಮಾನ ಬರ್ಕ

ಸಂಭಲ (ಉತ್ತರಪ್ರದೇಶ) – ಇಲ್ಲಿಯ ಸಮಾಜವಾದಿ ಪಕ್ಷದ ಶಾಸಕ ಶಫಿಕರ್ರಹಮಾನ ಬರ್ಕ ಇವರು ರಾಜ್ಯದ ಬಿಜೆಪಿ ಸರಕಾರದಿಂದ ಜನಸಂಖ್ಯಾ ನಿಯಂತ್ರಣ ಕಾನೂನನ್ನು ನಿರ್ಮಿಸುವ ಪ್ರಕ್ರಿಯೆಯನ್ನು ಟೀಕಿಸಿದ್ದಾರೆ. ‘ಅಲ್ಲಾಹನು ಪ್ರತಿಯೊಬ್ಬರಿಗೆ ಜನ್ಮ ನೀಡುತ್ತಾನೆ ಮತ್ತು ಅವರನ್ನು ಪೋಷಿಸುತ್ತಾನೆ.’ ವ್ಯಕ್ತಿ ಬಡವನಾಗಿರಲಿ ಅಥವಾ ಶ್ರೀಮಂತನಾಗಿರಲಿ ಪೋಷಿಸುತ್ತಾನೆ. ಅವರನ್ನು ವಿರೋಧಿಸುವುದು ಸೂಕ್ತವಲ್ಲ. ಇದರಿಂದ ಹಾನಿಯೇ ಆಗುತ್ತದೆ. ಇದು ಜನರ ಹಿತದ ಕಾನೂನು ಅಲ್ಲ’, ಎಂಬಂತಹ ಹುರುಳಿಲ್ಲದ ಟೀಕೆಯನ್ನು ಮಾಡಿದರು.

ಶಾಸಕ ಶಫಿಕುರ್ರಹಮಾನ ಬರ್ಕ ಇವರು ಕಾನೂನಿನ ವಿರುದ್ಧ ಮಂಡಿಸಿದ ಅಂಶಗಳು

೧. ಒಂದು ವೇಳೆ ಜನಸಂಖ್ಯೆ ಕಡಿಮೆ ಆಯಿತು ಮತ್ತು ಇಂತಹ ಸಮಯದಲ್ಲಿ ಶತ್ರುರಾಷ್ಟ್ರವು ಭಾರತದ ಮೇಲೆ ದಾಳಿ ನಡೆಸಿದರೆ, ಆಗ ಏನು ಮಾಡುವಿರಿ ? (ಭಾರತದ ಮೇಲೆ ದಾಳಿ ಮಾಡಿದರೆ ಅದರ ವಿರುದ್ಧ ಬಹುಸಂಖ್ಯಾತ ಹಿಂದೂಗಳೇ ಹೋರಾಡುವರು. ತದ್ವಿರುದ್ಧ ದೇಶದ್ರೋಹಿ ಚಟುವಟಿಕೆಗಳಲ್ಲಿ ಯಾರು ಇರುತ್ತಾರೆ, ಇದು ಭಾರತೀಯರಿಗೆ ತಿಳಿದಿದೆ. ಆದ್ದರಿಂದ ದಾಳಿಯ ಬಗ್ಗೆ ಬರ್ಕ ಚಿಂತೆ ಮಾಡಬೇಕೆಂದಿಲ್ಲ ! – ಸಂಪಾದಕರು)

೨. ಬಿಜೆಪಿ ಜನರಿಗೆ ಏನನ್ನೂ ನೀಡಿಲ್ಲ. ಈಗ ಈ ಕಾನೂನಿನ ಮೂಲಕ ಜನರಿಗೆ ತೊಂದರೆಯನ್ನು ನೀಡಲು ಪ್ರಯತ್ನಿಸಲಾಗುತ್ತಿದೆ.

೩. ಸಮಾನ ನಾಗರಿಕ ಕಾನೂನು ತರಲು ಪ್ರಯತ್ನವಾಗುವಾಗ ಇದರ ಬಗ್ಗೆ ಚರ್ಚೆ ಮಾಡೊಣ ಈಗ ಯಾವುದೇ ಭವಿಷ್ಯ ಹೇಳಲು ಸಾಧ್ಯವಿಲ್ಲ.