ಭಾರತದಲ್ಲಿ ಹಿಂದೂಗಳದ್ದೇ ಹೆಚ್ಚಿನ ಮತಾಂತರ ! – ‘ಪ್ಯೂ ರಿಸರ್ಚ್ ಸೆಂಟರ್’ನ ಸಮೀಕ್ಷೆ

ಹಿಂದೂಗಳು ಕ್ರೈಸ್ತ ಧರ್ಮವನ್ನು ಸ್ವೀಕರಿಸುವ ಶೇಕಡಾವಾರು ಅತೀಹೆಚ್ಚು !

ದಕ್ಷಿಣ ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳ ಮತಾಂತರ !

ಮತಾಂತರಗೊಂಡವರಲ್ಲಿ ಅರ್ಧದಷ್ಟು ಜನರು ಹಿಂದೂ ಪರಿಶಿಷ್ಟ ಜಾತಿಯವರು !

ಬೇಧಭಾವ ಮಾಡುಲಾಗುತ್ತದೆ ಎಂಬ ಕಾರಣದಿಂದ ಮತಾಂತರ !

* ಈ ಭಯಾನಕ ಅಂಕಿ ಅಂಶಗಳು ಸಮೀಕ್ಷೆಯಿಂದ ಬೆಳಕಿಗೆ ಬಂದ ನಂತರ, ಕೇಂದ್ರ ಸರಕಾರವು ಈಗಲಾದರೂ ಹಾಗೂ ತಕ್ಷಣವೇ ಇಡೀ ದೇಶದಲ್ಲಿ ಮತಾಂತರ ವಿರೋಧಿ ಕಾನೂನನ್ನು ಜಾರಿಗೆ ತರಬೇಕು ಮತ್ತು ಹಿಂದೂ ಸಂಘಟನೆಗಳು ಇದಕ್ಕಾಗಿ ಒತ್ತಡವನ್ನು ಹೇರಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !

* ಕ್ರೈಸ್ತ ಮಿಷನರಿಗಳು ಸಮಾಜಸೇವೆಯ ಹೆಸರಿನಲ್ಲಿ ಕೇವಲ ಹಿಂದೂಗಳನ್ನು ಮತಾಂತರಿಸಲು ಭಾರತದಲ್ಲಿ ಕಾರ್ಯನಿರತವಾಗಿವೆ. ಅದರ ಆಚೆಗೆ ಅವರಿಗೆ ಯಾವುದೇ ಉದ್ದೇಶವಿರುವುದಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ! ಈ ಬಗ್ಗೆ ತಥಾಕಥಿತ ಜಾತ್ಯತೀತವಾದಿಗಳು ಮತ್ತು ಪ್ರಗತಿ(ಅಧೋಗತಿ)ಪರರು ಎಂದಾದರೂ ಬಾಯಿ ತೆರೆಯುವರೇ ?

* ಈ ಸಮೀಕ್ಷೆಯನ್ನು ಅಮೆರಿಕದ ಸಂಸ್ಥೆಯು ನಡೆಸಿದ್ದರಿಂದ, ಈಗ ದೇಶದ ತಥಾಕಥಿತ ಹಿಂದುದ್ವೇಷಿ ಪಕ್ಷಗಳು ಮತ್ತು ಸಂಘಟನೆಗಳು ಹಿಂದೂ ಸಂಘಟನೆಗಳ ಮೇಲೆ ಆರೋಪ ಹೊರಿಸುವುದಿಲ್ಲ ಎಂಬ ಅಪೇಕ್ಷೆ !

( ಸಾಂಕೇತಿಕ ಚಿತ್ರ )

ವಾಷಿಂಗ್ಟನ್ (ಅಮೇರಿಕಾ) – ಇಲ್ಲಿಯ ‘ಪ್ಯೂ ರಿಸರ್ಚ್ ಸೆಂಟರ್’ ಪ್ರಕಾಶಿಸಿದ ಭಾರತದ ವಿವಿಧ ಧರ್ಮಗಳ ಬಗೆಗಿನ ಒಂದು ಸಮೀಕ್ಷೆಯ ವರದಿಯಲ್ಲಿ ಭಾರತದಲ್ಲಿ ಹಿಂದೂಗಳನ್ನು ಅತಿ ಹೆಚ್ಚು ಪ್ರಮಾಣದಲ್ಲಿ ಮತಾಂತರಿಸಲಾಗುತ್ತದೆ, ಎಂದು ಹೇಳಿದೆ. ಅದರಲ್ಲೂ ಹಿಂದೂಗಳು ಕ್ರೈಸ್ತ ಧರ್ಮವನ್ನು ಸ್ವೀಕರಿಸುವ ಶೇಕಡಾವಾರು ಅತಿಹೆಚ್ಚು ಇದೆ. ಈ ಪೈಕಿ ೭೪ % ಮತಾಂತರಗೊಂಡ ಹಿಂದೂಗಳು ದಕ್ಷಿಣ ಭಾರತದ ರಾಜ್ಯದವರಾಗಿದ್ದಾರೆ. ಇದರಿಂದಲೇ ದಕ್ಷಿಣ ಭಾರತದ ರಾಜ್ಯಗಳಲ್ಲಿ ಕ್ರೈಸ್ತರ ಜನಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಮತಾಂತರಗೊಂಡವರಲ್ಲಿ ಅರ್ಧದಷ್ಟು ಮಂದಿ ಪರಿಶಿಷ್ಟ ಜಾತಿಯವರಾಗಿದ್ದು, ಶೇ. ೧೪ ರಷ್ಟು ಪರಿಶಿಷ್ಟ ಪಂಗಡ ಮತ್ತು ಶೇ. ೨೬ ರಷ್ಟು ಒಬಿಸಿ (ಇತರ ಹಿಂದುಳಿದ ವರ್ಗ) ದಿಂದ ಬಂದವರಾಗಿದ್ದಾರೆ. ಮತಾಂತರಗೊಂಡವರಲ್ಲಿ ಶೇ. ೪೫ ರಷ್ಟು ಜನರು ವಿಶೇಷವಾಗಿ ಪರಿಶಿಷ್ಟ ಜಾತಿಯವರೊಂದಿಗೆ ಮಾಡಲಾಗುವ ಬೇಧಭಾವವು ಇದಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ಹಿಂದೂ ಯುವತಿಯರು ಇತರ ಧರ್ಮಗಳಲ್ಲಿ ಮದುವೆಯಾಗುವುದು ಅಯೋಗ್ಯವಾಗಿದೆ ! – ಸಮೀಕ್ಷೆಯಲ್ಲಿ ಹಿಂದೂಗಳು ವ್ಯಕ್ತಪಡಿಸಿದ ಅಭಿಪ್ರಾಯಗಳು !

ಭಾರತದ ಹಿಂದೂಗಳು ತಮ್ಮ ಹೆಣ್ಣುಮಕ್ಕಳು ಇತರ ಧರ್ಮಗಳಲ್ಲಿ ಮದುವೆಯಾಗುವುದು ಯೋಗ್ಯವಲ್ಲ ಎಂದಿರುವುದಾಗಿ ಸಮೀಕ್ಷೆಯಲ್ಲಿ ಹೇಳಲಾಗಿದೆ. ಶೇ.೬೭ ರಷ್ಟು ಹಿಂದೂಗಳು, ‘ತಮ್ಮ ಹೆಣ್ಣುಮಕ್ಕಳು ಇತರ ಧರ್ಮಗಳಲ್ಲಿ ಮದುವೆಯಾಗುವುದು ಸರಿಯಲ್ಲ.’ ಪುರುಷರೂ ಕೂಡ ಇತರ ಧರ್ಮಗಳ ಯುವತಿಯರನ್ನು ಮದುವೆಯಾಗಬಾರದು ಎಂದು ಶೇ ೬೫ ರಷ್ಟು ಹಿಂದೂಗಳಿಗೆ ಅನಿಸುತ್ತದೆ. ಈ ಬಗ್ಗೆ ಶೇ. ೮೦ ರಷ್ಟು ಮುಸಲ್ಮಾನರು ‘ತಮ್ಮ ಯುವತಿಯರು ಇತರ ಧರ್ಮದವರೊಂದಿಗೆ ಮದುವೆಯಾಗಬಾರದು’, ಹಾಗೂ ಶೇ. ೭೬ ರಷ್ಟು ಮುಸಲ್ಮಾನರು ‘ತಮ್ಮ ಪುರುಷರು ಇತರ ಧರ್ಮದವರೊಂದಿಗೆ ಮದುವೆಯಾಗಬಾರದು’, ಎಂದು ಹೇಳಿದ್ದಾರೆ.

ಗೋಮಾಂಸ ತಿನ್ನುವವರು ಮತ್ತು ದೇವಸ್ಥಾನಕ್ಕೆ ಹೋಗದವರು ಹಿಂದೂ ಆಗಿರಲು ಸಾಧ್ಯವಿಲ್ಲ !

ಶೇ.೬೪ ರಷ್ಟು ಜನರು, ನಿಜವಾದ ಭಾರತೀಯನಾಗಲು ಹಿಂದೂ ಆಗಿರುವುದು ಅತ್ಯಗತ್ಯ ಅದರಲ್ಲಿಯೂ ಶೇ. ೮೦ ರಷ್ಟು ಹಿಂದೂಗಳು, ಇದಕ್ಕಾಗಿ ಹಿಂದಿ ಭಾಷೆ ಗೊತ್ತಿರುವುದು ಅಗತ್ಯವಿದೆ. ಉತ್ತರ ಭಾರತದಲ್ಲಿ ಶೇ. ೬೯ ರಷ್ಟು, ಮಧ್ಯ ಭಾರತದಲ್ಲಿ ಶೇ. ೮೩ ರಷ್ಟು ಮತ್ತು ದಕ್ಷಿಣ ಭಾರತದಲ್ಲಿ ಶೇ. ೪೨ ರಷ್ಟು ಹಿಂದೂಗಳು ತಮ್ಮ ಪರಿಚಯವನ್ನು ರಾಷ್ಟ್ರವಾದದೊಂದಿಗೆ ಜೋಡಿಸಿದ್ದಾರೆ. ಶೇ. ೭೨ ರಷ್ಟು ಹಿಂದೂಗಳು, ಗೋಮಾಂಸ ಭಕ್ಷಕನು ‘ಹಿಂದೂ’ ಆಗಲು ಸಾಧ್ಯವಿಲ್ಲ, ಜೊತೆಗೆ ‘ದೇವರ ಮೇಲೆ ಶ್ರದ್ಧೆ ಇಡದವರು ಹಿಂದೂಗಳಾಗಿರಲು ಸಾಧ್ಯವಿಲ್ಲ’, ಎಂದು ಶೇ. ೪೯ ರಷ್ಟು ಜನರು ಹೇಳಿದ್ದು ‘ದೇವಾಲಯಕ್ಕೆ ಹೋಗದವರು ಹಿಂದೂಗಳಲ್ಲ’ ಎಂದು ೮೪ ಶೇ. ಹಿಂದೂಗಳು ಹೇಳಿದ್ದಾರೆ.

‘ಪ್ಯೂ ರೀಸರ್ಚ್ ಸೆಂಟರ್’ ಪ್ರಕಟಿಸಿದ ವರದಿಯಲ್ಲಿ ಕೆಲವು ಪ್ರಮುಖ ಅಂಶಗಳು

೧. ೨೦೧೯-೨೦ ನೇ ಸಾಲಿನಲ್ಲಿ ೨೬ ರಾಜ್ಯಗಳು ಮತ್ತು ೩ ಕೇಂದ್ರಾಡಳಿತ ಪ್ರದೇಶಗಳಿಂದ ೧೭ ಭಾಷೆಗಳನ್ನು ಮಾತನಾಡುವ ಜನರು ಸಮೀಕ್ಷೆಯಲ್ಲಿ ಭಾಗವಹಿಸಿದ್ದರು. ಈ ಮೂಲಕ ರಾಷ್ಟ್ರೀಯತೆ, ಧಾರ್ಮಿಕ ನಂಬಿಕೆ ಮತ್ತು ಸಹಿಷ್ಣುತೆಯ ಬಗ್ಗೆ ಅಧ್ಯಯನ ಮಾಡಲಾಯಿತು. ಇದರಲ್ಲಿ ಭಾರತದ ಜನರು ಧಾರ್ಮಿಕವಾಗಿ ಸಹಿಷ್ಣುರಾಗಿದ್ದಾರೆ ಮತ್ತು ಅವರ ಧರ್ಮದ ಪ್ರಕಾರ ಸ್ವತಂತ್ರವಾಗಿ ಬದುಕಲು ಇಷ್ಟಪಡುತ್ತಾರೆ, ಎಂಬುದು ಗಮನಕ್ಕೆ ಬಂದಿತು.

೨. ಈ ಸಮೀಕ್ಷೆಯಲ್ಲಿ, ಶೇ. ೮೪ ರಷ್ಟು ಜನರು ತಾವು ನಿಜವಾದ ಭಾರತೀಯರು ಎಂದು ಹೇಳುತ್ತಾ ಎಲ್ಲಾ ಧರ್ಮಗಳನ್ನು ಗೌರವಿಸುತ್ತೇವೆ ಎಂದು ಹೇಳಿದರು. ಅಲ್ಲದೆ, ಶೇ. ೭೮ ರಷ್ಟು ಮುಸಲ್ಮಾನರು ಸಹ ಹಾಗೆ ಹೇಳಿದ್ದಾರೆ. (ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮುಸಲ್ಮಾನರು ಎಲ್ಲಾ ಧರ್ಮಗಳನ್ನು ಗೌರವಿಸುವುದು ಪ್ರತ್ಯಕ್ಷದಲ್ಲಿ ಮಾತ್ರ ಏಕೆ ಕಾಣುತ್ತಿಲ್ಲ ? – ಸಂಪಾದಕ)

. ಸ್ನೇಹಿತರಾಗಿ, ಪ್ರತಿಯೊಬ್ಬ ಧಾರ್ಮಿಕ ವ್ಯಕ್ತಿಯು ತಮ್ಮ ಧರ್ಮದ ವ್ಯಕ್ತಿಗೆ ಆದ್ಯತೆ ನೀಡುತ್ತಾರೆ.

೪. ಶೇ. ೭೪ ರಷ್ಟು ಮುಸಲ್ಮಾನರು ತಮ್ಮವರು ತಮ್ಮದೇ ಧರ್ಮದ ಷರಿಯತ ನ್ಯಾಯಾಲಯಕ್ಕೆ ಹೋಗಬೇಕು ಎಂದು ಹೇಳಿದರು. ಭಾರತದಲ್ಲಿ, ೧೯೩೭ ರಿಂದ, ಮುಸ್ಲಿಂ ಧಾರ್ಮಿಕ ವಿಷಯಗಳನ್ನು ನಿರ್ಧರಿಸಲು ಷರಿಯತ ನ್ಯಾಯಾಲಯದ ವ್ಯವಸ್ಥೆ ಇದೆ. ಇದರ ಅಡಿಯಲ್ಲಿ, ಕಾಜಿಗಳು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಕಾನೂನಿನ ದೃಷ್ಟಿಕೋನದಿಂದ, ಈ ನ್ಯಾಯಾಲಯವು ನೀಡಿದ ನಿರ್ಧಾರಗಳನ್ನು ಅನುಸರಿಸಲು ಒತ್ತಡ ಹೇರಲು ಸಾಧ್ಯವಿಲ್ಲ. (ಷರಿಯತ ನ್ಯಾಯಾಲಯಗಳನ್ನು ತಡೆಯಲು ದೇಶದಲ್ಲಿ ಸಮಾನ ನಾಗರಿಕ ಕಾನೂನು ಬೇಕು ! – ಸಂಪಾದಕರು)

. ಶೇ. ೪೮ ರಷ್ಟು ಮುಸಲ್ಮಾನರು, ೧೯೪೭ ರಲ್ಲಿ ಭಾರತದ ವಿಭಜನೆಯು ಹಿಂದೂ-ಮುಸ್ಲಿಂ ಸಂಬಂಧಗಳ ಮೇಲೆ ಹಾನಿಕಾರಕ ಪರಿಣಾಮ ಬೀರಿದೆ ಎಂದಿದ್ದು, ಇನ್ನೊಂದು ಕಡೆ ಕೇವಲ ಶೇ. ೩೭ ರಷ್ಟು ಹಿಂದೂಗಳು ಮತ್ತು ಶೇ. ೬೬ ರಷ್ಟು ಸಿಖ್ಖರು ಮಾತ್ರ ಇದನ್ನು ದೃಢ ಪಡಿಸಿದ್ದಾರೆ.

೬. ಶೇ. ೯೭ ರಷ್ಟು ಭಾರತೀಯರು ದೇವರನ್ನು ನಂಬಿದರೆ, ಅವರಲ್ಲಿ ಶೇ. ೮೦ ರಷ್ಟು ಜನರು ‘ಈಶ್ವರನ ಅಸ್ತಿತ್ವ ಇದೆ.’ ಎಂದು ಹೇಳುತ್ತಾರೆ. ಶೇ. ೭೭ ರಷ್ಟು ಮುಸಲ್ಮಾನರು ಮತ್ತು ಶೇ. ೫೪ ರಷ್ಟು ಕ್ರೈಸ್ತರು, ‘ಅವರು ಕರ್ಮ ಸಿದ್ಧಾಂತವನ್ನು ನಂಬುತ್ತಾರೆ’ ಎಂದು ಹೇಳುತ್ತಾರೆ. ಶೇ. ೭ ರಷ್ಟು ಹಿಂದೂ ಈದ್ ಮತ್ತು ಶೇ. ೧೮ ರಷ್ಟು ಹಿಂದೂ ಕ್ರಿಸ್ಮಸ್ ಅನ್ನು ಆಚರಿಸುತ್ತಾರೆ. (ಎಷ್ಟು ಶೇಕಡಾವಾರು ಮುಸಲ್ಮಾನರು ಮತ್ತು ಕ್ರೈಸ್ತರು ಹಿಂದೂ ಹಬ್ಬಗಳನ್ನು ಆಚರಿಸುತ್ತಾರೆ, ಪ್ಯೂ ರೀಸರ್ಚ್ ಸೆಂಟರ್ ಅದರ ಅಂಕಿಅಂಶಗಳು ಏಕೆ ಸಂಗ್ರಹಿಸಲಿಲ್ಲವೋ ಅಥವಾ ಅದರ ಅಂಕಿಅಂಶಗಳು ಬೆರಳಣಿಕೆಯಷ್ಟು ಇತ್ತು ಎಂದು ಅದನ್ನು ಹತ್ತಿಕ್ಕಲಾಗಿದೆಯೇನು ? – ಸಂಪಾದಕ)