ಬರ್ಲಿನ್ (ಜರ್ಮನಿ) – ಜರ್ಮನಿಯ ಮ್ಯಾಗ್ಡೆಬರ್ಗ್ ನಗರದ ಕ್ರಿಸ್ಮಸ್ ಮಾರುಕಟ್ಟೆಯಲ್ಲಿ ಡಿಸೆಂಬರ್ 20 ರ ರಾತ್ರಿ, ಸೌದಿ ಅರೇಬಿಯಾದ ತಾಲೇಬ ಎಂಬ ಮುಸ್ಲಿಂ ವೈದ್ಯನು ಜನರ ಮೇಲೆ ಕಾರು ಹಾಯಿಸಿದ್ದರಿಂದ ಇಬ್ಬರು ಸಾವನ್ನಪ್ಪಿದರೇ 68 ಜನರು ಗಾಯಗೊಂಡಿದ್ದಾರೆ. 50 ವರ್ಷದ ಡಾ. ತಾಲೇಬ್ 2006 ರಿಂದ ಸ್ಯಾಕ್ಸೋನಿ-ಅನ್ಹಾಲ್ಟ್ ರಾಜ್ಯದಲ್ಲಿ ವಾಸಿಸುತ್ತಿದ್ದಾನೆ. ಈ ದಾಳಿಯನ್ನು ಆತನೊಬ್ಬನೇ ಮಾಡಿದ್ದಾನೆ. ಇದರ ಹಿಂದಿನ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ. ದಾಳಿಯ ಮೊದಲು, ಅವನು ಬಿ.ಎಂ.ಡಬ್ಲ್ಯೂ. ವಾಹನವನ್ನು ಬಾಡಿಗೆಗೆ ಪಡೆದಿದ್ದನು.
ಈ ಹಿಂದೆ ಡಿಸೆಂಬರ 19, 2016 ರಂದು ಬರ್ಲಿನ್‌ನ ಕ್ರಿಸ್ಮಸ್ ಮಾರುಕಟ್ಟೆಯಲ್ಲಿ ಇಸ್ಲಾಮಿಕ್ ಭಯೋತ್ಪಾದಕನು ಜನಜಂಗುಳಿಯ ಮೇಲೆ ಟ್ರಕ್ ಹರಿಸಿ ಜನರನ್ನು ಹೊಸಕಿ ಹಾಕಿದ್ದನು. ಇದರಲ್ಲಿ 13 ಜನರು ಸಾವನ್ನಪ್ಪಿದರು ಮತ್ತು 12 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಕೆಲವು ದಿನಗಳ ನಂತರ ಈ ದಾಳಿ ನಡೆಸಿದ ಭಯೋತ್ಪಾದಕನನ್ನು ಇಟಲಿಯಲ್ಲಿ ಪೊಲೀಸ್ ಎನ್ಕೌಂಟರ್ನಲ್ಲಿ ಕೊಂದರು.
ಆರೋಪಿ ತಾಲೇಬ್ ನಾಸ್ತಿಕನೆಂದು ದಾವೆ
ಡಾ. ತಾಲೇಬ್ 2016 ರಲ್ಲಿ ನಿರಾಶ್ರಿತರ ಸ್ಥಾನಮಾನ ದೊರಕಿತ್ತು. ಅವನು ಮನಃಶಾಸ್ತ್ರಜ್ಞ ಸಲಹೆಗಾರನಾಗಿದ್ದನು. ಅವನು ಮ್ಯಾಗ್ಡೆಬರ್ಗ್ ನಗರದಿಂದ 40 ಕಿಲೋಮೀಟರ್ ದೂರದಲ್ಲಿರುವ ಬರ್ನ್ಬರ್ಗ್‌ನಲ್ಲಿ ಔಷಧೋಪಚಾರವನ್ನು ಮಾಡುತ್ತಿದ್ದನು. ತಾಲೇಬ್ ಈ ಹಿಂದಿನ ಮುಸ್ಲಿಂ ಮತ್ತು ಈಗ ನಾಸ್ತಿಕವಾದಿಯಾಗಿದ್ದನು. ನಿರಾಶ್ರಿತರ ವಿರುದ್ಧ ನಿಲುವು ತೆಗೆದುಕೊಳ್ಳುವ ಜರ್ಮನಿಯ `ಆಲ್ಟರ್ನೇಟಿವ್ ಫಾರ್ ಜರ್ಮನಿ’ ಪಕ್ಷದ ಬೆಂಬಲಿಗನಾಗಿದ್ದನು. ತಾಲೇಬ್ ಸೌದಿ ಅರೇಬಿಯಾದಲ್ಲಿರುವಾಗ ತನ್ನ ನಾಸ್ತಿಕ ವಿಚಾರ ಮತ್ತು ದೃಷ್ಟಿಕೋನಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತಿರಲಿಲ್ಲ; ಏಕೆಂದರೆ ಅಲ್ಲಿ ಇಸ್ಲಾಂ ಒಂದೇ ಧರ್ಮ ಕಾಯಿದೆಯನುಸಾರ ಮಾನ್ಯತೆ ಪಡೆದಿದೆ. ಜರ್ಮನಿಗೆ ಬಂದ ಬಳಿಕ ಅವನು ಸೌದಿ ಅರೇಬಿಯಾ ಮತ್ತು ಇತರ ಗಲ್ಫ್ ದೇಶಗಳಲ್ಲಿನ ಮುಸ್ಲಿಮರಿಗೆ ಆ ದೇಶಗಳಿಂದ ಪಲಾಯನಗೊಳ್ಳಲು ಮತ್ತು ಜರ್ಮನಿಯಂತಹ ದೇಶಗಳಲ್ಲಿ ಆಶ್ರಯ ಪಡೆಯಲು ಸಹಾಯ ಮಾಡಲು ಜಾಲತಾಣವನ್ನು ನಿರ್ಮಿಸಿದ್ದ.
ಮತ್ತೊಂದೆಡೆ, ಸೌದಿ ಅರೇಬಿಯಾ ತಾಲೆಬ್ ಮೇಲೆ ಭಯೋತ್ಪಾದಕತೆ ಮತ್ತು ಮಧ್ಯಪ್ರಾಚ್ಯ ಹುಡುಗಿಯರನ್ನು ಯುರೋಪಿಯನ್ ದೇಶಗಳಿಗೆ ಕಳ್ಳಸಾಗಣೆ ಮಾಡುತ್ತಿದ್ದನೆಂದು ಆರೋಪಿಸಿದೆ. ಆದರೆ ಜರ್ಮನಿಯು ಅವನನ್ನು ಸೌದಿ ಅರೇಬಿಯಾಕ್ಕೆ ಹಸ್ತಾಂತರಿಸಲು ನಿರಾಕರಿಸಿ, ಅವನಿಗೆ ಆಶ್ರಯ ನೀಡಿತ್ತು.
🚨🇩🇪 Tragedy in Germany: Saudi National identified as Doctor Taleb al-Abdulmohsen crashes his car into Christmas Market in suspected attack of Terror. 🎄🎄
2 killed, dozens injured🚨
A stark reminder to Europe: secularism is a 2-way street. 🤝
Noticeably, no I$l@mic country,… pic.twitter.com/0mqRK5PlVA
— Sanatan Prabhat (@SanatanPrabhat) December 21, 2024
ಸಂಪಾದಕೀಯ ನಿಲುವುಮತಾಂಧ ಮುಸ್ಲಿಮರ ಸಂದರ್ಭದಲ್ಲಿ ಜಗತ್ತಿಗೆ ಜಾತ್ಯತೀತ ಮತ್ತು ಸರ್ವಧರ್ಮಸಮಭಾವದ ಪಾಠವನ್ನು ಮಾಡುವ ಯುರೋಪಿಯನ್ ದೇಶಗಳಿಗೆ ತಪರಾಕಿ ಇಂತಹ ಘಟನೆಗಳನ್ನು ಜಗತ್ತಿನ ಯಾವುದೇ ಇಸ್ಲಾಮಿಕ್ ರಾಷ್ಟ್ರ, ಮುಸ್ಲಿಂ ಧರ್ಮಗುರುಗಳು, ಅವರ ಸಂಘಟನೆಗಳು ಎಂದಿಗೂ ಖಂಡಿಸುವುದಿಲ್ಲ ಎಂಬುದನ್ನು ಗಮನಿಸಬೇಕಾಗಿವೆ ! |