Pope Francis Statement : ‘ಇಸ್ರೇಲ್ ನಿಂದ ಗಾಜಾ ಮೇಲಿನ ನಿರಂತರ ಬಾಂಬ್ ದಾಳಿ ಕ್ರೌರ್ಯ(ವಂತೆ) !’ – ಪೋಪ ಫ್ರಾನ್ಸಿಸ

`ಹಮಾಸ್’ ದೌರ್ಜನ್ಯದ ಬಗ್ಗೆ ಪೋಪ್ ಮೌನ; ಇಸ್ರೇಲ್ ನಿಂದ ತಿರುಗೇಟು !

ವ್ಯಾಟಿಕನ್ ಸಿಟಿ – ಇಸ್ರೇಲ್ ಗಾಜಾ ಮೇಲೆ ಸತತವಾಗಿ ಬಾಂಬ್ ದಾಳಿ ನಡೆಸಿರುವುದು ಕ್ರೌರ್ಯ ಎಂದು ಪೋಪ್ ಫ್ರಾನ್ಸಿಸ್ ಟೀಕಿಸಿದ ನಂತರ ಇಸ್ರೇಲ್ ತಿರುಗೇಟು ನೀಡಿದೆ. ಪೋಪ್ ಫ್ರಾನ್ಸಿಸ್ ವಿರುದ್ಧ ಇಸ್ರೇಲ್ ದ್ವಂದ್ವನೀತಿಯ ಆರೋಪ ಮಾಡಿದೆ. “ಜೆರುಸಲೆಮ್ ಕ್ಯಾಥೋಲಿಕ್ ಬಿಷಪ್ ಡಿಸೆಂಬರ್ 20 ರಂದು ಕ್ಯಾಥೋಲಿಕರನ್ನು ಭೇಟಿ ಮಾಡಲು ಗಾಜಾ ಪಟ್ಟಿಯನ್ನು ಪ್ರವೇಶಿಸಲು ಪ್ರಯತ್ನಿಸಿದ್ದರು; ಆದರೆ ಅವರಿಗೆ ಪ್ರವೇಶ ನಿರಾಕರಿಸಲಾಯಿತು,’’ಎಂದು ಪೋಪ್ ಫ್ರಾನ್ಸಿಸ್ ತಮ್ಮ ಭಾಷಣದಲ್ಲಿ ಹೇಳಿದರು.

ಇಸ್ರೇಲ್‌ನ ವಿದೇಶಾಂಗ ಸಚಿವಾಲಯವು, ಪೋಪ್‌ನ ಟೀಕೆ ನಿರಾಶಾದಾಯಕವಾಗಿದೆ; ಏಕೆಂದರೆ ಈ ಯುದ್ಧವನ್ನು ಇಸ್ರೇಲ್ ಮೇಲೆ ಹೇರಲಾಗಿದೆ. ಭಯೋತ್ಪಾದಕರು ಮಕ್ಕಳ ಹಿಂದೆ ಅಡಗಿ ಇಸ್ರೇಲಿ ಮಕ್ಕಳನ್ನು ಕೊಂದಾಗ, ಕ್ರೌರ್ಯವಾಗುತ್ತದೆ. ಹಸುಳೆ, ಗಂಡು ಮಗು ಸೇರಿದಂತೆ 100 ಮಂದಿಯನ್ನು 442 ದಿನಗಳ ಕಾಲ ಒತ್ತೆಯಾಳಾಗಿ ಇಟ್ಟುಕೊಂಡು ದೌರ್ಜನ್ಯ ಎಸಗಿರುವುದು ಕ್ರೌರ್ಯವೇ ಆಗಿದೆ. ಪೋಪ್ ಇದನ್ನೆಲ್ಲ ಕಡೆಗಣಿಸಿದ್ದಾರೆ. ‘ಯಾವುದೇ ಕಾರಣವಿಲ್ಲದೆ ಜನರನ್ನು ಕೊಲ್ಲಬಾರದು’ ಎನ್ನುವುದು ಇಸ್ರೇಲ್ ನೀತಿಯಾಗಿದೆ; ಆದರೆ ಹಮಾಸ್ ನಮ್ಮ ಮೇಲೆ ದಾಳಿ ಮಾಡಲು ಗಾಜಾದ ಜನರನ್ನು ಗುರಾಣಿಯಾಗಿ ಬಳಸುತ್ತಿದೆ. ಆದ್ದರಿಂದ ಇಸ್ರೇಲ್ ನಿರಂತರವಾಗಿ ಪ್ರತ್ಯುತ್ತರ ನೀಡಬೇಕಾಗುತ್ತಿದೆ’, ಎಂದು ಹೇಳಿದರು.

ಸಂಪಾದಕೀಯ ನಿಲುವು

ಪ್ರೀತಿ ಮತ್ತು ಶಾಂತಿಯ ಸಂದೇಶವನ್ನು ಸಾರುವ ಪೋಪ್ ಪ್ರಪಂಚದಾದ್ಯಂತ ತಾಂಡವವಾಡುತ್ತಿರುವ ಇಸ್ಲಾಮಿಕ್ ಭಯೋತ್ಪಾದನೆಯ ಬಗ್ಗೆ ಎಂದಿಗೂ ಮಾತನಾಡುವುದಿಲ್ಲ ಎಂಬುದನ್ನು ಗಮನಿಸಿ !