Ramabhadracharya Maharaja Statement : ದೇವಸ್ಥಾನಗಳ ಕುರಿತು ನಮ್ಮ ಸಂಘರ್ಷ ಮುಂದುವರೆಯುತ್ತಲೇ ಇರುವುದು ! – ಜಗದ್ಗುರು ಸ್ವಾಮಿ ರಾಮಭದ್ರಾಚಾರ್ಯ ಮಹಾರಾಜ

ಸಂಭಲ (ಉತ್ತರಪ್ರದೇಶ) ಇಲ್ಲಿಯ ದೇವಸ್ಥಾನಗಳು ಪತ್ತೆಯಾಗಿರುವ ಕುರಿತು ಜಗದ್ಗುರು ಸ್ವಾಮಿ ರಾಮಭದ್ರಾಚಾರ್ಯ ಮಹಾರಾಜರ ಹೇಳಿಕೆ

ಜಗದ್ಗುರು ಸ್ವಾಮಿ ರಾಮಭದ್ರಾಚಾರ್ಯ ಮಹಾರಾಜ

ನವ ದೆಹಲಿ – ಉತ್ತರ ಪ್ರದೇಶದಲ್ಲಿನ ಸಂಭಲದಲ್ಲಿ ಏನೆಲ್ಲಾ ನಡೆಯುತ್ತಿದೆ ಅದು ಬಹಳ ಕೆಟ್ಟದಾಗಿದೆ; ಆದರೆ ಇದರಲ್ಲಿ ಒಂದು ಸಕಾರಾತ್ಮಕ ವಿಷಯವೆಂದರೆ, ಅಲ್ಲಿ ದೇವಸ್ಥಾನ ಇರುವ ಸಾಕ್ಷಿಗಳು ಇವೆ. ಅವುಗಳು ಮತಗಳ ಮಾಧ್ಯಮದಿಂದ ಇರಲಿ, ನ್ಯಾಯಾಲಯದ ಮಾಧ್ಯಮದಲ್ಲಿರಲಿ ಅಥವಾ ಜನರ ಸಹಕಾರದಿಂದ ಇರಲಿ; ನಾವು ಈ ದೇವಸ್ಥಾನಗಳು ವಾಪಸ್ ಪಡೆಯುವೆವು. ದೇವಸ್ಥಾನಗಳ ಕುರಿತು ನಮ್ಮ ಹೋರಾಟ ಮುಂದುವರೆಯುತ್ತಲೇ ಇರುವುದು ಮತ್ತು ಅದಕ್ಕಾಗಿ ಸಾಧ್ಯ ಇರುವ ಎಲ್ಲಾ ಪ್ರಯತ್ನ ಮಾಡುವೆವು, ಎಂದು ಜಗದ್ಗುರು ಸ್ವಾಮಿ ರಾಮಭದ್ರಾಚಾರ್ಯ ಮಹಾರಾಜ ಇವರು ಹೇಳಿಕೆ ನೀಡಿದರು.

ಮಂದಿರ ಮಸೀದಿಗಳ ಸಂದರ್ಭದಲ್ಲಿನ ಸರಸಂಘಚಾಲಕರ ಹೇಳಿಕೆಗೆ ನಾನು ಕಿಂಚಿತ್ತೂ ಸಹಮತವಿಲ್ಲ !

‘ಮಂದಿರ-ಮಸೀದಿ ವಿವಾದದಿಂದ ಕೆಲವರು ಹಿಂದುಗಳ ನಾಯಕರಾಗುತ್ತಿದ್ದಾರೆ’, ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ.ಪೂ. ಸರಸಂಘ ಚಾಲಕ ಡಾ. ಮೋಹನಜಿ ಭಾಗವತ ಇವರು ಕೆಲವು ದಿನಗಳ ಹಿಂದೆ ಹೇಳಿಕೆ ನೀಡಿದ್ದರು. ಅದರ ಕುರಿತು ಸ್ವಾಮಿ ರಾಮಭದ್ರಾಚಾರ್ಯ ಮಹಾರಾಜರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅವರು, ಸರಸಂಘಚಾಲಕರ ಹೇಳಿಕೆಗೆ ನಾನು ಕಿಂಚಿತ್ತೂ ಸಹಮತವಿಲ್ಲ. ಸರಸಂಘಚಾಲಕರು ಶಿಸ್ತಪ್ರಿಯರಾಗಿದ್ದಾರೆ; ಆದರೆ ಈ ಸಂದರ್ಭದಲ್ಲಿನ ಅವರ ಅಭಿಪ್ರಾಯಕ್ಕೆ ನನ್ನ ಸಹಮತವಿಲ್ಲ ಎಂದು ಹೇಳಿದರು.

ಬಾಂಗ್ಲಾದೇಶದಲ್ಲಿನ ಘಟನೆಯ ಬಗ್ಗೆ ಪ್ರತೀಕ್ಷೆ ಮಾಡಿ, ಎಲ್ಲರ ನಾಶವಾಗುವುದು, ಕಾಳಜಿ ಮಾಡಬೇಡಿ !

ಬಾಂಗ್ಲಾದೇಶದಲ್ಲಿನ ಹಿಂದುಗಳ ಮೇಲೆ ನಡೆಯುವ ದೌರ್ಜನ್ಯದ ಸಂದರ್ಭದಲ್ಲಿ ಸ್ವಾಮಿ ರಾಮಭದ್ರಾಚಾರ್ಯ ಮಹಾರಾಜರು, ಬಾಂಗ್ಲಾದೇಶದ ಮಧ್ಯಂತರ ಸರಕಾರ ಹಿಂದುಗಳ ಮೇಲೆ ದೌರ್ಜನ್ಯ ಮಾಡುತ್ತಿದೆ. ಬಾಂಗ್ಲಾದೇಶದ ಮಧ್ಯಂತರ ಸರಕಾರದ ಪ್ರಧಾನಮಂತ್ರಿ ‘ದುಷ್ಟ’ನಾಗಿದ್ದಾರೆ, ಸ್ವಲ್ಪ ಕಾಯಿರಿ ಎಲ್ಲರ ನಾಶವಾಗುವುದು. ಕಾಳಜಿ ಮಾಡಬೇಡಿ. ಬಾಂಗ್ಲಾದೇಶದಲ್ಲಿನ ಹಿಂದುಗಳ ಮೇಲೆ ನಡೆಯುವ ದೌರ್ಜನ್ಯದ ಸಂದರ್ಭದಲ್ಲಿ ಅಂತರಾಷ್ಟ್ರೀಯ ಸಮುದಾಯ ಕೂಡ ಗಾಂಭೀರ್ಯತೆಯಿಂದ ಕ್ರಮ ಕೈಗೊಳ್ಳುವುದು ಆವಶ್ಯಕವಾಗಿದೆ. ನಾವು ಸರಕಾರಕ್ಕೆ ಬಹಳಷ್ಟು ಹೇಳಿದ್ದೇವೆ; ಆದರೆ ಈ ಸಮಸ್ಯೆ ಕೇವಲ ಭಾರತ ಸರಕಾರಕ್ಕಾಗಿ ಅಷ್ಟೇ ಅಲ್ಲ, ಇದು ಸಂಪೂರ್ಣ ಜಗತ್ತಿಗಾಗಿ ಇರುವ ಆತಂಕದ ವಿಷಯವಾಗಿದೆ’, ಎಂದು ಹೇಳಿದರು.